Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಇಡ್ಲಿ ಪಾತ್ರೆಯೇ ಬೇಡ! 10 ನಿಮಿಷದಲ್ಲಿ ತವಾ ಮಸಾಲಾ ಇಡ್ಲಿ.. ಹೈದರಾಬಾದ್ ಸ್ಟೈಲ್‌ನಲ್ಲಿ ಮಾಡಿ ನೋಡಿ
ಬೆಳಗಿನ ತಿಂಡಿಗೆ ಏನಪ್ಪಾ ಮಾಡೋದು? ಒಮ್ಮೆ ಈ ಮಸಾಲೆಯುಕ್ತ ತವಾ ಇಡ್ಲಿ ಟ್ರೈ ಮಾಡಿ! ಈ ಟ್ರಿಕ್ ಬಳಸಿದರೆ ನಿಮ್ಮ ಮನೆಯವರೂ ಫಿದಾ ಆಗ್ತಾರೆ. ಹೌದು, ಆರೋಗ್ಯಕರ ಜೀವನಕ್ಕೆ ಬೆಳಗಿನ ಉಪಾಹಾರ ಎಂದಿಗೂ ಅನಿವಾರ್ಯ. ಆದರೆ, ಬಹುತೇಕರಿಗೆ ಬೆಳಗ್ಗೆ ಏನು ಮಾಡಬೇಕು ಎಂಬ ಗೊಂದಲ, ಸಮಯದ ಅಭಾವದಿಂದ ಉಪಾಹಾರ ಸೇವನೆಯೇ ತಪ್ಪಿಹೋಗುತ್ತದೆ ಅಥವಾ ಇಷ್ಟವಿಲ್ಲದ ತಿಂಡಿಗಳು ಸೇವಿಸುತ್ತಾರೆ.
ಉಪಾಹಾರ ಬಿಡುವುದು ಆರೋಗ್ಯಕ್ಕೆ ಎಂದಿಗೂ ಒಳ್ಳೆಯದಲ್ಲ, ಇದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಸವಾಲಿನ ಸಂದರ್ಭದಲ್ಲಿ, ಹೈದರಾಬಾದ್‌ನ ಜನಪ್ರಿಯ ತವಾ ಇಡ್ಲಿ (Tawa Idli) ಒಂದು ರುಚಿಕರ ಮತ್ತು ತ್ವರಿತ ಪರಿಹಾರ ಒದಗಿಸುತ್ತದೆ. ಬೆಳಗ್ಗೆ ಬೇಗನೆ ಎದ್ದು, ಮನೆ ಮಕ್ಕಳು, ಗಂಡ ಹಾಗೂ ಎಲ್ಲರಿಗೂ ಮೆಚ್ಚುಗೆಯಾಗುವ ತಿಂಡಿ ತಯಾರಿಸುವುದು ಅನೇಕ ಅಮ್ಮಂದಿರಿಗೆ ಒಂದು ಸವಾಲು.

ಕೆಲವೊಮ್ಮೆ ರಾತ್ರಿಯೇ ಮುಂದಿನ ದಿನದ ತಿಂಡಿ ಬಗ್ಗೆ ಯೋಚಿಸಬೇಕು. ಇಂತಹ ಗೊಂದಲಗಳಿಗೆ ಉತ್ತರವಾಗಿ ತವಾ ಸ್ಪಾಟ್ ಇಡ್ಲಿ ಒಂದು ರುಚಿಕರ ಆಯ್ಕೆಯಾಗಿದೆ. ಇದು ಕೇವಲ ಎರಡು ನಿಮಿಷಗಳಲ್ಲಿ ತಯಾರಾಗುವ, ಮಸಾಲೆಯುಕ್ತ, ಬೀದಿಬದಿಯ ಜನಪ್ರಿಯ ಖಾದ್ಯವಾಗಿದೆ. ತವಾ ಇಡ್ಲಿ ಎಂದರೆ, ಮೃದುವಾದ ಇಡ್ಲಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ನಂತರ ಮಸಾಲೆ ಮತ್ತು ತರಕಾರಿಗಳೊಂದಿಗೆ ಬಾಣಲೆ ಅಥವಾ ತವಾದಲ್ಲಿ ಹುರಿಯುವುದು.
ತ್ವರಿತ ಬೆಳಗ್ಗಿನ ಉಪಾಹಾರಕ್ಕಾಗಲಿ ಅಥವಾ ರಾತ್ರಿಯ ಲಘು ಭೋಜನಕ್ಕಾಗಲಿ ಇದು ಸೂಕ್ತ. ದಕ್ಷಿಣ ಭಾರತದಲ್ಲಿ ಇದರ ರುಚಿ ಮತ್ತು ಸುಲಭ ತಯಾರಿಕೆಯಿಂದಾಗಿ ಜನಪ್ರಿಯವಾಗಿದೆ. ಈ ಹೈದರಾಬಾದಿ ತವಾ ಇಡ್ಲಿಗೆ ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಸುವ ವಿಧಾನ (Tawa Idli Recipe) ಹೀಗಿದೆ.
ಮೈಸೂರು ದೋಸೆ ಮಸಾಲೆ ಬಳಸಿ
ತವಾ ಸ್ಪಾಟ್ ಇಡ್ಲಿಯನ್ನು ಹಲವು ವಿಧಗಳಲ್ಲಿ ತಯಾರಿಸಬಹುದು. ಕೆಲವರು ತರಕಾರಿಗಳನ್ನು, ಇನ್ನು ಕೆಲವರು ಚೀಸ್ ಅಥವಾ ಪನೀರ್ ಸೇರಿಸಿ ಇದನ್ನು ಇನ್ನಷ್ಟು ರುಚಿಕರಗೊಳಿಸುತ್ತಾರೆ, ಮೈಸೂರು ಮಸಾಲಾ ದೋಸೆ ಮಸಾಲೆಯನ್ನೂ ಬಳಸಬಹುದು. ಇದು ಕಡಿಮೆ ಕೊಬ್ಬು ಮತ್ತು ಹೆಚ್ಚಿನ ಪ್ರೋಟೀನ್ ಹೊಂದಿದ್ದು, ತರಕಾರಿಗಳಿಂದ ಪೌಷ್ಟಿಕಾಂಶ ಇನ್ನೂ ಹೆಚ್ಚುತ್ತದೆ. ಮಿತವಾಗಿ ಸೇವಿಸಿದರೆ ತವಾ ಸ್ಪಾಟ್ ಇಡ್ಲಿ ಆರೋಗ್ಯಕ್ಕೆ ಉತ್ತಮ.
ತವಾ ಇಡ್ಲಿಗೆ ಬೇಕಾಗುವ ಸಾಮಗ್ರಿಗಳು
• ರವಾ
• ಮೊಸರು
• ಎಣ್ಣೆ
• ಈರುಳ್ಳಿ
• ಹಸಿ ಮೆಣಸಿನಕಾಯಿ
• ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್
• ಟೊಮೆಟೊ
• ರುಚಿಗೆ ತಕ್ಕಷ್ಟು ಉಪ್ಪು
• ಸಾಂಬಾರ್ ಮಸಾಲಾ
• ಕೊತ್ತಂಬರಿ ಸೊಪ್ಪು
ತವಾ ಇಡ್ಲಿ ತಯಾರಿಸುವ ವಿಧಾನ
- ಮೊದಲಿಗೆ, ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಹಸಿ ಮೆಣಸಿನಕಾಯಿ ಹಾಗೂ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಹುರಿಯಿರಿ.
- ನಂತರ ಹೆಚ್ಚಿದ ಟೊಮೆಟೊ ಮತ್ತು ಉಪ್ಪು ಸೇರಿಸಿ, ಕಡಿಮೆ ಉರಿಯಲ್ಲಿ ಮೆತ್ತಗಾಗುವವರೆಗೆ ಬೇಯಿಸಿ.
- ಕೊನೆಯಲ್ಲಿ ಸಾಂಬಾರ್ ಮಸಾಲಾ ಮತ್ತು ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
- ಅಷ್ಟರಲ್ಲಿ, ಒಂದು ಬಟ್ಟಲಿನಲ್ಲಿ ರವೆ, ಮೊಸರು, ಉಪ್ಪು ಮತ್ತು ಎಣ್ಣೆ ಸೇರಿಸಿ ದಪ್ಪ ಹಿಟ್ಟನ್ನು ತಯಾರಿಸಿಕೊಳ್ಳಿ. ಅಗತ್ಯವಿದ್ದರೆ ನೀರು ಸೇರಿಸಬಹುದು. ಈ ಹಿಟ್ಟಿನಿಂದ ಇಡ್ಲಿಗಳನ್ನು ತಯಾರಿಸಿಕೊಂಡು, ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಡಿ.
- ಈಗ ಬಿಸಿಯಾಗಿರುವ ತವಾ ಮೇಲೆ ತಯಾರಿಸಿದ ಮಸಾಲಾ ಮಿಶ್ರಣದ ಒಂದು ಭಾಗವನ್ನು ಹರಡಿ, ಅದರ ಮೇಲೆ ಕತ್ತರಿಸಿದ ಇಡ್ಲಿ ತುಂಡುಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ ಬಿಸಿ ಮಾಡಿ.
- ಕೊನೆಯಲ್ಲಿ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ಬಿಸಿಬಿಸಿಯಾದ ಹೈದರಾಬಾದಿ ತವಾ ಇಡ್ಲಿ ಸವಿಯಲು ಸಿದ್ಧ.



Click it and Unblock the Notifications
