Latest Updates
-
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ!
ತೆಂಗಿನಕಾಯಿ ಹಾಲು ಹಾಕಿ ಮಾಡುವ ಮೀನಿನ ಸಾರು, ತುಂಬಾ ರುಚಿಯಾಗಿರುತ್ತೆ
ನೀವು ಮೀನು ಸಾರು ಮಾಡುವುದಾದರೆ ತುಂಬಾ ಸರಳವಾದ ಮೀನಿನ ರೆಸಿಪಿ ನೀಡಿದ್ದೇವೆ, ಈ ಮೀನು ಸಾರನ್ನು ನೀವು ಸುಲಭವಾಗಿ ಮಾಡಬಹುದು, ಅಲ್ಲದೆ ತುಂಬಾ ರುಚಿಯಾಗಿ ಬರುತ್ತೆ ಕೂಡ. ಬನ್ನಿ ಈ ಮೀನಿನ ಸಾರು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
1/ 2 ಅಥವಾ 1 ಕೆಜಿ ಮೀನು
ಟೊಮೆಟೊ 2-3
ಒಂದೂವರೆ ಚಮಚ ಮೆಣಸಿನ ಪುಡಿ
1/2 ಚಮಚ ಕೊತ್ತಂಬರಿ ಪುಡಿ
1/2 ಅರಿಶಿಣ ಪುಡಿ
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಹಸಿ ಮೆಣಸು 2
ಈರುಳ್ಳಿ 1
ಸ್ವಲ್ಪ ಮೆಂತೆ
ಉಪ್ಪು
ಹುಣಸೆ ಹಣ್ಣು ಒಂದು ನಿಂಬೆ ಹಣ್ಣು ಗಾತ್ರದಷ್ಟು
ಒಂದು ಕಪ್ ತೆಂಗಿನಕಾಯಿ ಹಾಲು
ಮಾಡುವ ವಿಧಾನ:
- ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ
- ಎಣ್ಣೆ ಬಿಸಿಯಾದಾಗ ಸ್ವಲ್ಪ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ, ಸ್ವಲ್ಪ ಮೆಂತೆ, ಈರುಳ್ಳಿ ಹಾಕಿ ಫ್ರೈ ಮಾಡಿ, ಈರುಳ್ಳಿ ಸ್ವಲ್ಪ ಮೆತ್ತಗಾದ ಮೇಲೆ ನೀವು ಟೊಮೆಟೊ ಹಾಕಿ
- ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ
- ನಂತರ ಅರಿಶಿಣ ಪುಡಿ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ ಹಾಕಿ ಫ್ರೈ ಮಾಡಿ
- ನಂತರ ಹುಣಸೆ ಹಣ್ಣಿನ ರಸ ಹಾಕಿ, ಉಪ್ಪು ಹಾಕಿ ಕುದಿ ಬರಿಸಿ
- ನಂತರ ಮೀನು ಹಾಕಿ
- ಮೀನು ಹಾಕಿದ ಮೇಲೆ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ
- ನಂತರ ತೆಂಗಿನಕಾಯಿ ಹಾಲು ಹಾಕಿ 5 ನಿಮಿಷ ಕುದಿಸಿ
- ನಂತರ ಉರಿಯಿಂದ ಇಳಿಸಿ ಸ್ವಲ್ಪ ಕರಿಬೇವು ಹಾಕಿ, ಪಾತ್ರೆಯ ಬಾಯಿ ಮುಚ್ಚಿ 10 ನಿಮಿಷ ಹಾಗೇ ಬಿಡಿ
- ಇಷ್ಟು ಮಾಡಿದರೆ ಮೀನಿನ ಸಾರು ಸರ್ವ್ ಮಾಡಲು ರೆಡಿ.
ಸಲಹೆ: ನೀವು ತೆಂಗಿನಕಾಯಿ ಮಾರ್ಕೆಟ್ನಿಂದ ಪ್ಯಾಕ್
ಮಾಡಿಟ್ಟ ತೆಂಗಿನಕಾಯಿ ಹಾಲು ಬಳಸಬಹುದು.
ನೀವೇ ತೆಂಗಿನಕಾಯಿ ಹಾಲು ರೆಡಿ ಮಾಡಿದರೆ ಇನ್ನೂ ಒಳ್ಳೆಯದು
ಒಂದು ಕಪ್ ತೆಂಗಿನ ತುರಿಗೆ ಸ್ವಲ್ಪ ನೀರು ಹಾಕಿ ರುಬ್ಬಿ, ನಂತರ ಅದನ್ನು ಸೋಸಿ, ಆ
ಹಾಲನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿದರೆ ಆ ಹಾಲನ್ನು ಬಳಸಬಹುದು.
ಇತರ ಟಿಪ್ಸ್
ನೀವು ಒಂದು ಚಮಚ ಖಾರದ ಪುಡಿ ಹಾಗೂ ಅರ್ಧ ಚಮಚ ಕಾಶ್ಮೀರಿ ಮೆಣಸಿನ ಪುಡಿ ಹಾಕಿದರೆ
ಮೀನಿನ ಸಾರು ಕೆಂಪಗೆ ಆಕರ್ಷಕವಾಗಿ ಕಾಣುವುದು.
ಯಾವ ಮೀನು ಬಳಸಬಹುದು?
ನಿಮಗಿಷ್ಟವಾದ ಮೀನನ್ನು ಈ ಸಾರಿಗೆ ಬಳಸಬಹುದು, ಆದರೆ ಕೆರೆ ಮೀನು ಅಥವಾ ಹೊಳೆ
ಮೀನು ಟೇಸ್ಟ್ ಅನಿಸುವುದಿಲ್ಲ, ಸಮುದ್ರ ಮೀನುಗಳಾದ ಬೂತಾಯಿ, ಬಂಗುಡೆ, ತುನಾ,
ಅಂಜಲ್ ಹೀಗೆ ನಿಮಗಿಷ್ಟವಾದ ಮೀನು ಬಳಸಬಹುದು.



Click it and Unblock the Notifications
