Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಕ್ರಿಸ್ಪಿ, ಜುಸಿ, ಸ್ಪೈಸಿ! 100% ರೆಸ್ಟೋರೆಂಟ್ ಸ್ಟೈಲ್.. ಮನೆಯಲ್ಲೇ ಮಾಡೋ ಚಿಕನ್ ಲಾಲಿಪಾಪ್ ಸೀಕ್ರೆಟ್
ಈಗ ಮನೆಯಲ್ಲೇ 100% ರೆಸ್ಟೋರೆಂಟ್ ರೀತಿ ಚಿಕನ್ ಲಾಲಿಪಾಪ್ ಮಾಡಿ. ಹೆಚ್ಚು ಖರ್ಚು ಕೂಡ ಆಗುವುದಿಲ್ಲ ಮತ್ತು ಸುಲಭವಾಗಿ ಮಾಡಬಹುದು. ಹೌದು, ಸಾಮಾನ್ಯವಾಗಿ ಚಿಕನ್ ಮಾಡುವಾಗ ಚಿಕನ್ ಬಿರಿಯಾನಿ, ಚಿಕನ್ 65 ಹೀಗೆ ಹಲವು ಬಗೆಯ ಸ್ನ್ಯಾಕ್ಸ್ ಮಾಡುತ್ತಾರೆ. ಆದರೆ, ನಾನ್ ವೆಜ್ ತಿನ್ನುವ ಎಲ್ಲರೂ ವಿಭಿನ್ನವಾದ ಹಾಗೂ ವಿಧವಿಧವಾದ ತಿಂಡಿಗಳನ್ನು ತಯಾರಿಸಬೇಕು ಅಂದುಕೊಳ್ಳುತ್ತಾರೆ. ಹೀಗಿರುವಾಗ, ರೆಸ್ಟೋರೆಂಟ್ ರೀತಿ ಚಿಕನ್ ಲಾಲಿಪಾಪ್ (Chicken Lollipop) ಮಾಡಬಹುದು. ಹಾಗಿದ್ರೆ, ಚಿಕನ್ ಲಾಲಿಪಾಪ್ ತಯಾರಿಸಲು ಬೇಕಾಗುವ ಪದಾರ್ಥಗಳು ಮತ್ತು ವಿಧಾನದ ಬಗ್ಗೆ ತಿಳಿಯೋಣ ಬನ್ನಿ.
ಚಿಕನ್ ಲಾಲಿಪಾಪ್ ಮಾಂಸಹಾರ ಪ್ರಿಯರ ಫೇವರಿಟ್ ಖಾದ್ಯ. ಇದು ಪಾರ್ಟಿಗಳಿಗೆ ಮತ್ತು ಸ್ನ್ಯಾಕ್ಸ್ ಆಗಿ ತುಂಬಾ ಸೂಕ್ತವಾಗಿವೆ. ಚಿಕನ್ ಡ್ರಮ್‌ಸ್ಟಿಕ್‌ಗಳನ್ನು ಒಂದು ವಿಶೇಷ ರೀತಿಯಲ್ಲಿ ತಯಾರಿಸಿ, ಮಸಾಲೆಗಳೊಂದಿಗೆ ಬೆರೆಸಿ ಹುರಿಯುವುದು ಅಥವಾ ಬೇಯಿಸುವುದು ಮಾಡುವ ಮೂಲಕ ತಯಾರಿಸಲಾಗುತ್ತದೆ. ಇದು ಸಾಮಾನ್ಯವಾಗಿ ಚಿಕನ್ ವಿಂಗ್ಲೆಟ್‌ನಿಂದ ತಯಾರಿಸಲ್ಪಡುತ್ತದೆ. ಮಾಂಸವನ್ನು ಎಲುಬಿನ ತುದಿಯಿಂದ ಸಡಿಲಗೊಳಿಸಿ ಕೆಳಕ್ಕೆ ತಳ್ಳಿ ಲಾಲಿಪಾಪ್‌ನಂತೆ ಕಾಣುವಂತೆ ಮಾಡಲಾಗುತ್ತದೆ. ರೆಸ್ಟೋರೆಂಟ್‌ಗಳಲ್ಲಿ ಬಹಳ ದುಬಾರಿಯಾದ ಬೆಲೆಗೆ ಮಾರಾಟ ಮಾಡುವ ಚಿಕನ್ ಲಾಲಿಪಾಪ್ ಅನ್ನು ನಿಮ್ಮ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಅದು ಹೇಗೆ (Chicken Lollipop Recipe) ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಚಿಕನ್ ಲಾಲಿಪಾಪ್ ತಯಾರಿಸಲು ಬೇಕಾಗುವ ಪದಾರ್ಥಗಳು
• ಚಿಕನ್ ಡ್ರಮ್‌ಸ್ಟಿಕ್ಸ್ - 500 ಗ್ರಾಂ (12)
• ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಸ್ಪೂನ್
• ನಿಂಬೆ ರಸ - 1 ಸ್ಪೂನ್
• ಖಾರದ ಪುಡಿ - 1 ಸ್ಪೂನ್
• ಅರಿಶಿನ ಪುಡಿ - 1/2 ಸ್ಪೂನ್
• ಕೊತ್ತಂಬರಿ ಪುಡಿ - 1 ಸ್ಪೂನ್
• ಜೀರಿಗೆ ಪುಡಿ - 1/2 ಸ್ಪೂನ್
• ಗರಂ ಮಸಾಲಾ - 1/4 ಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು
• ಸೋಯಾ ಸಾಸ್ - 1 ಸ್ಪೂನ್
• ವಿನೆಗರ್ - 1 ಸ್ಪೂನ್
• ಮೈದಾ - 2 ಸ್ಪೂನ್
• ಕಾರ್ನ್‌ಫ್ಲೋರ್ - 1 ಸ್ಪೂನ್
• ಎಣ್ಣೆ - ಅಗತ್ಯಕ್ಕೆ ತಕ್ಕಂತೆ

ಚಿಕನ್ ಲಾಲಿಪಾಪ್ ತಯಾರಿಸುವ ವಿಧಾನ
ಮೊದಲಿಗೆ ಚಿಕನ್ ಡ್ರಮ್‌ಸ್ಟಿಕ್ಸ್‌ಗಳನ್ನು ಚೆನ್ನಾಗಿ ತೊಳೆಯಿರಿ. ಒಂದು ಚೂಪಾದ ಚಾಕುವನ್ನು ಬಳಸಿ ಡ್ರಮ್‌ಸ್ಟಿಕ್‌ನ ದಪ್ಪ ಭಾಗದ ಸುತ್ತಲೂ ವೃತ್ತಾಕಾರವಾಗಿ ಕತ್ತರಿಸಿ. ಎಲುಬಿನ ಕೊನೆಯವರೆಗೆ ಕತ್ತರಿಸಬೇಡಿ. ನಂತರ ಕೊಯ್ದ ಭಾಗದಿಂದ ಚರ್ಮವನ್ನು ಮತ್ತು ಮಾಂಸವನ್ನು ಎಲುಬಿನ ಕೊನೆಯವರೆಗೆ ತಳ್ಳಿರಿ. ಇದು ಲಾಲಿಪಾಪ್ ಆಕಾರವನ್ನು ನೀಡುತ್ತದೆ. ಎಲುಬು ಒಂದು ಹಿಡಿ ರೀತಿ ಕಾಣುತ್ತದೆ. ಎಲ್ಲಾ ಡ್ರಮ್‌ಸ್ಟಿಕ್ಸ್‌ಗಳನ್ನು ಇದೇ ರೀತಿ ಸಿದ್ಧಪಡಿಸಿ.
ಈಗ ಒಂದು ದೊಡ್ಡ ಬಟ್ಟಲಿನಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ, ಖಾರದ ಪುಡಿ, ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸೋಯಾ ಸಾಸ್ ಮತ್ತು ಬೇಕೆನಿಸಿದರೆ ವಿನೆಗರ್ ಕೂಡ ಹಾಕಿ ಮಿಕ್ಸ್ ಮಾಡಿ. ಸಿದ್ಧಪಡಿಸಿದ ಚಿಕನ್ ಡ್ರಮ್‌ಸ್ಟಿಕ್ಸ್‌ಗಳನ್ನು ಈ ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಕಲಸಿ, ಮಸಾಲೆಯು ಚಿಕನ್‌ಗೆ ಚೆನ್ನಾಗಿ ಹಿಡಿಯುವಂತೆ ನೋಡಿಕೊಳ್ಳಿ. ಬಟ್ಟಲನ್ನು ಮುಚ್ಚಿ ಕನಿಷ್ಠ 30 ನಿಮಿಷಗಳು ಅಥವಾ ಗರಿಷ್ಠ 2 ರಿಂದ 3 ಗಂಟೆಗಳ ಕಾಲ ಫ್ರಿಜ್‌ನಲ್ಲಿಡಿ. ಹೆಚ್ಚು ಸಮಯ ಮ್ಯಾರಿನೇಟ್ ಮಾಡಿದರೆ, ಚಿಕನ್ ಇನ್ನಷ್ಟು ರುಚಿಕರವಾಗಿರುತ್ತದೆ.

ಈಗ ಮತ್ತೊಂದು ಬಟ್ಟಲಿನಲ್ಲಿ ಮೈದಾ ಮತ್ತು ಕಾರ್ನ್‌ಫ್ಲೋರ್ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ಗಂಟಿಲ್ಲದಂತೆ ಒಂದು ದಪ್ಪನೆಯ ಹಿಟ್ಟನ್ನು ತಯಾರಿಸಿಕೊಳ್ಳಿ. ಹಿಟ್ಟು ತುಂಬಾ ತೆಳುವಾಗಿ ಅಥವಾ ತುಂಬಾ ಗಟ್ಟಿಯಾಗಿ ಇರಬಾರದು. ಇದು ಚಿಕನ್‌ಗೆ ಚೆನ್ನಾಗಿ ಹಿಡಿಯುವಂತಿರಬೇಕು. ಬಳಿಕ ಫ್ರಿಜ್‌ನಿಂದ ಮ್ಯಾರಿನೇಟ್ ಮಾಡಿದ ಚಿಕನ್ ಡ್ರಮ್‌ಸ್ಟಿಕ್ಸ್‌ಗಳನ್ನು ತೆಗೆಯಿರಿ. ಒಂದೊಂದೇ ಡ್ರಮ್‌ಸ್ಟಿಕ್ ಅನ್ನು ತಯಾರಿಸಿದ ಹಿಟ್ಟಿನಲ್ಲಿ ಚೆನ್ನಾಗಿ ಅದ್ದಿ, ಹಿಟ್ಟು ಎಲ್ಲ ಕಡೆ ಸಮನಾಗಿ ಹತ್ತುವಂತೆ ನೋಡಿಕೊಳ್ಳಿ.
ಈಗ ಒಂದು ಬಾಣಲೆಯಲ್ಲಿ ಅಥವಾ ಪ್ಯಾನ್‌ನಲ್ಲಿ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿ. ಅದರಲ್ಲಿ ಕೋಟ್ ಮಾಡಿದ ಚಿಕನ್ ಲಾಲಿಪಾಪ್‌ಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಹಾಕಿ ಅವುಗಳನ್ನು ಗೋಲ್ಡನ್ ಬಣ್ಣ ಬರುವವರೆಗೆ ಫ್ರೈ ಮಾಡಿ. ಹಾಗೆಯೇ ಮಧ್ಯದಲ್ಲಿ ತಿರುಗಿಸುತ್ತಾ ಇರಿ. ಎಲ್ಲಾ ಕಡೆ ಸಮನಾಗಿ ಬೇಯಬೇಕು. ಫ್ರೈ ಮಾಡಿದ ಲಾಲಿಪಾಪ್‌ಗಳನ್ನು ತೆಗೆದು ಒಂದು ಪ್ಲೇಟ್ ಅಥವಾ ಟಿಶ್ಯೂ ಪೇಪರ್ ಮೇಲೆ ಹಾಕಿ. ಇದು ಹೆಚ್ಚುವರಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇಷ್ಟು ಮಾಡಿದರೆ, ಚಿಕನ್ ಲಾಲಿಪಾಪ್ ಸಿದ್ಧ. ಈ ರೀತಿ ಸುಲಭವಾಗಿ ಮನೆಯಲ್ಲೇ ರುಚಿಕರವಾದ ಚಿಕನ್ ಲಾಲಿಪಾಪ್ ತಯಾರಿಸಬಹುದು. ಮನೆಯಲ್ಲಿ ತಯಾರಿಸುವುದರಿಂದ ಆರೋಗ್ಯಕರವಾಗಿರುತ್ತದೆ ಮತ್ತು ಹೊರಗಡೆ ದುಬಾರಿ ಬೆಲೆ ಕೊಟ್ಟು ತರವು ಪ್ರಮೇಯವೇ ಇಲ್ಲ.



Click it and Unblock the Notifications