For Quick Alerts
ALLOW NOTIFICATIONS  
For Daily Alerts

ತಗಟೆ ಸೊಪ್ಪಿನ ಪಲ್ಯದ ರೆಸಿಪಿ: ಈ ಸೊಪ್ಪಿನಲ್ಲಿ ರಕ್ತ ಶುದ್ಧೀಕರಿಸುವುದರ ಜೊತೆಗೆ ಅನೇಕ ಪ್ರಯೋಜನಗಳಿವೆ

Posted By:
|

ಕನ್ನಡದಲ್ಲಿ ತಗಟೆ, ತುಳುವಿನಲ್ಲಿ ತಜಂಕ್ ಎಂದು ಕರೆಯಲ್ಪಡುವ ಸೊಪ್ಪಿಗೆ ಇಂಗ್ಲಿಷ್‌ನಲ್ಲಿ cassia tora ಎಂದು ಕರೆಯುತ್ತಾರೆ. ಈ ಸೊಪ್ಪು ಮಳೆಗಾಲದಲ್ಲಿ ಹಳ್ಳಿ ಕಡೆಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ಇದರ ಚಿಗುರು ಎಲೆ ಚಿವುಟಿ ತಂದು ಅದನ್ನು ಸ್ವಚ್ಛ ಮಾಡಿ ಕತ್ತರಿಸಿ ಇದರಿಂದ ಪಲ್ಯ, ಸಾರು, ಪತ್ರೊಡೆ ಮುಂತಾದ ರುಚಿಕರವಾದ ಅಡುಗೆ ಮಾಡಲಾಗುವುದು.

tagate soppu recipe

ನಾವಿಲ್ಲಿ ತಗಟೆ ಸೊಪ್ಪಿನ ಪಲ್ಯ ಮಾಡಿದ್ದೇವೆ. ಇದರ ಪಲ್ಯ ಮಾಡುವ ವಿಧಾನ ಇತರ ಸೊಪ್ಪು ಪಲ್ಯದಂತೆಯೇ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

tagate soppu palya recipe, ತಗಟೆ ಸೊಪ್ಪಿನ ಪಲ್ಯದ ರೆಸಿಪಿ
tagate soppu palya recipe, ತಗಟೆ ಸೊಪ್ಪಿನ ಪಲ್ಯದ ರೆಸಿಪಿ
Prep Time
20 Mins
Cook Time
15M
Total Time
35 Mins

Recipe By: Reena TK

Recipe Type: Palya

Serves: 4

Ingredients
  • ಬೇಕಾಗುವ ಸಾಮಗ್ರಿ

    ತಜಂಕ್ ಅಥವಾ ತಗಟೆ ಎಲೆ

    ಈರುಳ್ಳಿ 2

    ಹಸಿ ಮೆಣಸಿನಕಾಯಿ 2

    ಅರಿಶಿಣ ಪುಡಿ 1/2 ಚಮಚ

    1/4 ಕಪ್ ತೆಂಗಿನ ತುರಿ

    ರುಚಿಗೆ ತಕ್ಕ ಉಪ್ಪು

    ಸಾಸಿವೆ

    ತೆಂಗಿನೆಣ್ಣೆ 2 ಚಮಚ/ಯಾವ ಅಡುಗೆ ಎಣ್ಣೆ ಬೇಕಾದರೂ ಬಳಸಬಹುದು

Red Rice Kanda Poha
How to Prepare
  • ಮಾಡುವ ವಿಧಾನ

    * ಮೊದಲಿಗೆ ಕಜಂಕ್ ಅಥವಾ ತಗಟೆ ಸೊಪ್ಪಿನ ಎಲೆ ಬಿಡಿಸಿಕೊಳ್ಳಬೇಕು.

    * ಈರುಳ್ಳಿ ಹಾಗೂ ಹಸಿ ಮೆಣಸು ಕತ್ತರಿಸಿ

    * ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಈರುಳ್ಳಿ , ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ.

    * ನಂತರ ಸೊಪ್ಪು ತೊಳೆದು ಹಾಕಿ, ರುಚಿಗೆ ತಕ್ಕ ಉಪ್ಪು, ಅರಿಶಿಣ ಸೇರಿಸಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ.

    * ಸೊಪ್ಪು ಬೆಂದು ಬರುವಾಗ ತುರಿದ ತೆಂಗಿನ ಕಾಯಿ ಮತ್ತೆ 2 ನಿಮಿಷ ಫ್ರೈ ಮಾಡಿದರೆ ತಗಟೆ ಸೊಪ್ಪಿನ ಪಲ್ಯ ರೆಡಿ.

Instructions
  • ಸೂಚನೆ ತಗಟೆ ಸೊಪ್ಪು ಮಳೆಗಾಲದಲ್ಲಿ ಮಾಡಲಾಗುವುದು, ಉಳಿದ ಸಮಯದಲ್ಲಿ ಮಾಡಿದರೆ ಕಹಿ ಬರುವುದು. * ಇದರಿಂದ ಸಾರು, ಅಂಬೊಡೆ ಕೂಡ ಮಾಡಲಾಗುವುದು.
Nutritional Information
  • ಸರ್ವ್ - 1ಕಪ್
  • ಪ್ರೊಟೀನ್ - 11.63 ಗ್ರಾಂ
  • ಕಾರ್ಬ್ಸ್ - 36.60ಗ್ರಾಂ

ಪ್ರಯೋಜನಗಳು
* ಕಿಬ್ಬೊಟ್ಟೆ ನೋವು ಹೋಗಲಾಡಿಸುತ್ತದೆ
* ರಕ್ತವನ್ನು ಶುದ್ಧೀಕರಿಸುತ್ತದೆ

cassia tora recipe

* ಮಲಬದ್ಧತೆ ಹೋಗಲಾಡಿಸುತ್ತೆ
* ಉರಿಯೂತ ಕಡಿಮೆ ಮಾಡುತ್ತದೆ

cassia tora recipe

* ಬೊಜ್ಜು ಕರಗಿಸುತ್ತೆ
* ತ್ವಚೆ ಆರೋಗ್ಯಕ್ಕೂ ಒಳ್ಳೆಯದು.

[ 5 of 5 - 60 Users]
X
Desktop Bottom Promotion