Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗೋಧಿ ಹಲ್ವಾ- ನವರಾತ್ರಿ ಸ್ಪೆಷೆಲ್ ಅಡುಗೆ
ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಸಿಹಿತಿಂಡಿಯನ್ನು ಮಾಡುವಾಗ ಹಲ್ವಾವನ್ನು ತಯಾರಿಸಲಾಗುವುದು. ಕ್ಯಾರೆಟ್ ಹಲ್ವಾ, ಕುಂಬಳಕಾಯಿ ಹಲ್ವಾ, ಬಾದಾಮಿ ಹಲ್ವಾ ಹೀಗೆ ಅನೇಕ ಬಗೆಯಲ್ಲಿ ಹಲ್ವಾವನ್ನು ತಯಾರಿಸಬಹುದು. ಈ ನವರಾತ್ರಿಗೆ ಸ್ಪೆಷೆಲ್ ರೆಸಿಪಿಯಾಗಿ ಗೋಧಿಯಿಂದ ತಯಾರಿಸುವ ರುಚಿಕರವಾದ ಹಲ್ವಾದ ರೆಸಿಪಿ ನೀಡಲಾಗಿದೆ ನೋಡಿ:
ಬೇಕಾಗುವ ಸಾಮಾಗ್ರಿಗಳು:
* ಗೋಧಿ ಹಿಟ್ಟು 2 ಕಪ್
* ಸಕ್ಕರೆ 2 ಕಪ್
* ಏಲಕ್ಕಿ ಪುಡಿ 2 ಚಮಚ
* ಬಾದಾಮಿ 4-5 (ಚಿಕ್ಕ ತುಂಡುಗಳಾಗಿ ಮಾಡಿ)
* ಒಣ ದ್ರಾಕ್ಷಿ 4-5
* ನೀರು 1 ಕಪ್
* ತುಪ್ಪ 1 ಕಪ್
ತಯಾರಿಸುವ ವಿಧಾನ:
1. ಒಂದು ಪಾತ್ರೆಯನ್ನು ಗ್ಯಾಸ್ ಉರಿಯ ಮೇಲೆ ಇಡಬೇಕು. ನಂತರ ಪಾತ್ರೆಗೆ ತುಪ್ಪ ಹಾಕಿ ತುಪ್ಪ ಬಿಸಿಯಾದಾಗ ಬಿಸಿಯಾದಾಗ ಅದರಲ್ಲಿ ಗೋಧಿ ಹಿಟ್ಟು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
2. ಗೋಧಿ ಕಡು ಕಂದು ಬಣ್ಣ ಬಂದ ಮೇಲೆ ಅದಕ್ಕೆ ನಿಧಾನಕ್ಕೆ ನೀರು ಸುರಿಯಬೇಕು. ಆಗ ಗೋಧಿ ಗಟ್ಟಿಯಾಗದಿರಲು ಸೌಟ್ ನಿಂದ ಸರಿಯಾಗಿ ತಿರುಗಿಸುತ್ತಿರಬೇಕು.
3. ನೀರನ್ನು ಗೋಧಿ ಹೀರಿಕೊಂಡ ನಂತರ ಸಕ್ಕರೆ ಹಾಕಿ ಚೆನ್ನಾಗಿ ತಿರುಗಿಸಬೇಕು. ನಂತರ ಸೌಟ್ ನಿಂದ ತಿರುಗಿಸುತ್ತಾ ಬೇಯಿಸಬೇಕು. ಮಿಶ್ರಣ ಗಟ್ಟಿಯಾದ ನಂತರ ಅದನ್ನು ಉರಿಯಿಂದ ತೆಗೆದು ಅದಕ್ಕೆ ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಹಾಕಿದರೆ ರುಚಿಕರವಾದ ಗೋಧಿ ಹಲ್ವಾ ರೆಡಿ. ರೆಡಿಯಾದ ಹಲ್ವಾವನ್ನು ಸ್ವಲ್ಪ ತಣ್ಣಗಾದ ಮೇಲೆ ತಿನ್ನಿ.



Click it and Unblock the Notifications
