Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನವರಾತ್ರಿಗೆ ವಿಶೇಷ ಸಿಹಿತಿಂಡಿ-ಶಹಿ ಟೋಸ್ಟ್
ನವರಾತ್ರಿಗೆ ಪಾಯಸ ಹಾಗೂ ಸಿಹಿ ತಿಂಡಿಗಳನ್ನು ತಯಾರಿಸಲಾಗುವುದು. ಪಾಯಸ ಜೊತೆ ಹೊಸ ರುಚಿಯ ಸಿಹಿ ತಿಂಡಿ ಮಾಡಬೇಕೆಂದು ಬಯಸುವುದಾದರೆ ಶಹಿ ಟೋಸ್ಟ್ ಅನ್ನು ಟ್ರೈ ಮಾಡಬಹುದು.
ಬ್ರೆಡ್ ನಿಂದ ತಯಾರಿಸುವ ಈ ತಿಂಡಿಯನ್ನು ಸುಲಭವಾಗಿ ತಯರಿಸಬಹುದಾಗಿದ್ದು ರೆಸಿಪಿ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
ಬ್ರೆಡ್ ಒಂದು ಪ್ಯಾಕೆಟ್
ಹಾಲು ಅರ್ಧ ಲೀಟರ್
ಏಲಕ್ಕಿ ಬೀಜ
ಚಿಟಿಕೆಯಷ್ಟು ಕೇಸರಿ
ಸಕ್ಕರೆ ಒಂದು ಕಪ್
ಗೋಡಂಬಿ 1/4 ಕಪ್
ಒಣ ದ್ರಾಕ್ಷಿ 1/4 ಕಪ್
ಎಣ್ಣೆ ಅರ್ಧ ಕಪ್
ತಯಾರಿಸುವ ವಿಧಾನ:
* ಬ್ರೆಡ್ ಸುತ್ತವಿರುವ ಕಂದು ಬಣ್ಣವನ್ನು ತೆಗೆಯಬೇಕು. ನಂತರ ಬ್ರೆಡ್ ತುಂಡನ್ನು 4 ಭಾಗವಾಗಿ ಕತ್ತರಿಸಬೇಕು. ಈ ರೀತಿ ಎಲ್ಲಾ ಬ್ರೆಡ್ ಗಳನ್ನು ಮಾಡಬೇಕು.
* ನಂತರ ಎಣ್ಣೆಯನ್ನು ಬಾಣಲಿಯಲ್ಲಿ ಹಾಕಿ ಕಾಯಿಸಿ ಅದರಲ್ಲಿ ಬ್ರೆಡ್ ತುಂಡುಗಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು.
* ಈಗ ಹಾಲನ್ನು ಒಂದು ಪಾತ್ರೆಯಲ್ಲಿ ಹಾಕಿ ಕುದಿಸಿ ಅದಕ್ಕೆ ಏಲಕ್ಕಿ, ಸಕ್ಕರೆ ಹಾಗೂ ಕೇಸರಿ ಹಾಕಬೇಕು. ಅರ್ಧ ಲೀಟರ್ ನೀರನ್ನು ಕಾಲು ಲೀಟರ್ ಆಗುವಷ್ಟು ಕುದಿಸಬೇಕು.'
* ನಂತರ ಆ ಹಾಲಿನಲ್ಲಿ ಬ್ರೆಡ್ ತುಂಡುಗಳನ್ನು 2-3 ನಿಮಿಷ ನೆನೆ ಹಾಕಬೇಕು. ನಂತರ ಅದನ್ನು ತೆಗೆದು ತಟ್ಟೆಗೆ ಹಾಕಿ ಅದರ ಮೇಲೆ ಉಳಿದ ಹಾಲನ್ನು ಸುರಿದು ಅದರ ಮೇಲೆ ಗೋಡಂಬಿ ಹಾಗೂ ದ್ರಾಕ್ಷಿಯನ್ನು ಹಾಕಿದರೆ ಶಹಿ ಟೋಸ್ಟ್ ರೆಡಿ. ಇದನ್ನು ಬಿಸಿಬಿಸಿಯಾಗಿಯೂ ತಿನ್ನಬಹುದು, ತಣ್ಣಗಾದ ಮೇಲೂ ತಿನ್ನಬಹುದು. ಇದರ ರುಚಿ ಖಂಡಿತ ನಿಮಗೆ ಇಷ್ಟವಾಗುವುದು.



Click it and Unblock the Notifications
