Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಓಣಂ 2019 ವಿಶೇಷ ಸಿಹಿಯಾದ 'ಉಣ್ಣಿಯಪ್ಪಮ್' ಆಹಾ ಬೊಂಬಾಟ್ ರುಚಿ!
ಓಣಂ ಹಬ್ಬ ಇನ್ನೆನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಪ್ರಸಕ್ತ ವರ್ಷ ಸೆಪ್ಟೆಂಬರ್ 1 ರಿಂದ 13ರವರೆಗೆ ಓಣಂ ಹಬ್ಬವನ್ನು ಆಚರಿಸುತ್ತಿದ್ದು, 11ರಂದು ಪ್ರಮುಖವಾದ ದಿನ ತಿರು ಓಣಂ ಅನ್ನು ಆಚರಿಸಲಾಗುತ್ತಿದೆ.
ಕೇರಳದಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಹಬ್ಬ ತನ್ನ ವಿಶೇಷತೆಗಳಿಂದ ಹೆಚ್ಚು
ಕೌತುಕಮಯವಾಗಿದೆ. ಹಬ್ಬ ಯಾವುದೇ ಆಗಿದ್ದರೂ ಸಿಹಿ ಅಲ್ಲಿ ಪ್ರಧಾನವಾಗಿರುತ್ತದೆ. ಓಣಂಗೆ ಖಾದ್ಯಗಳನ್ನು
ಸಿದ್ಧಮಾಡುವುದು ಹೆಚ್ಚು ಪ್ರಧಾನವಾಗಿರುತ್ತದೆ.
ಬಗೆ ಬಗೆಯ ಸಿಹಿಯನ್ನು ಖಾರದ ಖಾದ್ಯಗಳೊಂದಿಗೆ ಗೃಹಿಣಿಯರು ತಯಾರಿಸುತ್ತಾರೆ. 13 ರಿಂದ 14 ಖಾದ್ಯಗಳು ಓಣಂಗೆ ಪ್ರಧಾನವಾಗಿರುತ್ತದೆ. ಓಣಂ ಹಬ್ಬದ ಸ್ಪೆಷಲ್: ಘಮ್ಮೆನ್ನುವ ಹಾಲಿನ ಪಾಯಸ
ಅಂತಹದ್ದರಲ್ಲಿ ಉಣ್ಣಿಯಪ್ಪಮ್ ಕೂಡ ಒಂದು. ನಿಮ್ಮ ಮನೆಯಲ್ಲೂ ಈ ಸಿಹಿಯನ್ನು ತಯಾರಿಸಿ ಓಣಂ ಹಬ್ಬವನ್ನು
ಕೊಂಡಾಡಬಹುದಾಗಿದೆ. ಹಾಗಿದ್ದರೆ ಸಾಂಪ್ರದಾಯಿಕವಾಗಿ ತಯಾರಿಸಬಹುದಾದ ಉಣ್ಣಿಯಪ್ಪಮ್ನ ರೆಸಿಪಿ ವಿಧಾನವನ್ನು ಇಲ್ಲಿ ನೀಡುತ್ತಿದ್ದು ಸರಳವಾಗಿ ಇದನ್ನು ತಯಾರಿಸಿಕೊಳ್ಳಬಹುದಾಗಿದೆ.
ಪ್ರಮಾಣ - 10
*ಸಿದ್ಧತಾ ಸಮಯ - 3 ರಿಂದ 4 ಗಂಟೆಗಳು
*ಅಡುಗೆಗೆ ಬೇಕಾದ ಸಮಯ - 30 ರಿಂದ 45 ನಿಮಿಷಗಳು
ಸಾಮಾಗ್ರಿಗಳು
*ಅಕ್ಕಿ - 2 ಕಪ್
*ಹಣ್ಣಾದ ಬಾಳೆಹಣ್ಣು - 3
*ಬೆಲ್ಲ - 1 ಕಪ್
*ತೆಂಗಿನ ತುರಿ - 2 ಚಮಚ (ತುರಿದದ್ದು)
*ಕಪ್ಪು ಎಳ್ಳು - 1/4 ಚಮಚ
*ನೀರು - 1 ಕಪ್
*ಏಲಕ್ಕಿ ಹುಡಿ - 3/4 ಕಪ್
*ಉಪ್ಪು - ಚಿಟಿಕೆಯಷ್ಟು
*ಒಣ ಶುಂಠಿ ಪುಡಿ - 1/4 ಚಮಚ
ಬೇಕಿಂಗ್ ಸೋಡಾ - 1/4 ಚಮಚ
ಹುರಿಯಲು ತುಪ್ಪ
ಮಾಡುವ ವಿಧಾನ
1. ರಾತ್ರಿ ಪೂರ್ತಿ ಅಕ್ಕಿಯನ್ನು ನೆನೆಸಿಡಿ, 6 ಗಂಟೆಗಳಷ್ಟು ಕಾಲ ಅಕ್ಕಿ ನೆನೆಯಲಿ.
2.ಮರುದಿನ ಬೆಳಗ್ಗೆ, ನೀರನ್ನು ಬಸಿದು ಅಕ್ಕಿಯನ್ನು ಕಡೆದು ಹಿಟ್ಟು ಮಾಡಿಟ್ಟುಕೊಳ್ಳಿ. ತುಂಬಾ ಮೃದುವಾಗಿ ಇದನ್ನು
ಸಿದ್ಧಪಡಿಸದಿರಿ.
3. ಇನ್ನು ಇದನ್ನು ಪಕ್ಕದಲ್ಲಿರಿಸಿ
4. ಬಾಳೆಹಣ್ಣನ್ನು ಸುಲಿದು ಇದನ್ನು ಮೃದು ಪೇಸ್ಟ್ನಂತೆ ಸಿದ್ಧಪಡಿಸಿ ಇದನ್ನು ಮಿಕ್ಸಿಂಗ್ ಬೌಲ್ಗೆ ಹಾಕಿ
5. ಈಗ ಬೆಲ್ಲವನ್ನು ನೀರಿನಲ್ಲಿ ಕರಗಿಸಿಕೊಳ್ಳಿ
6. ಬೆಲ್ಲದ ಹಿಟ್ಟಿನಲ್ಲಿ ಗಂಟು ಬಾರದಂತೆ ಇದನ್ನು ಕರಗಿಸಿಕೊಳ್ಳಿ
7. ಇದನ್ನು ತಣ್ಣಗಾಗಿಸಿ ಮತ್ತು ಬಾಳೆಹಣ್ಣಿನ ಮಿಶ್ರಣಕ್ಕೆ ಬೆರೆಸಿಕೊಳ್ಳಿ
8. ಎರಡನ್ನೂ ಚೆನ್ನಾಗಿ ಮಿಶ್ರ ಮಾಡಿಕೊಂಡು ತೆಳ್ಳನೆಯ ಹಿಟ್ಟನ್ನು ಸಿದ್ಧಪಡಿಸಿ
9. ಈಗ, ಅಕ್ಕಿ ಹಿಟ್ಟನ್ನು ಸೇರಿಸಿ, ಇದಕ್ಕೆ ಏಲಕ್ಕಿ ಹುಡಿ, ಒಣ ಶುಂಠಿ ಹುಡಿ, ಕಾಳುಮೆಣಸಿನ ಹುಡಿ, ಉಪ್ಪು ಮತ್ತು
ಬೇಕಿಂಗ್ ಸೋಡಾವನ್ನು ಸೇರಿಸಿ ನಂತರ ಬಾಳೆಹಣ್ಣು ಮಿಶ್ರಣವನ್ನು ಬೆರೆಸಿಕೊಳ್ಳಿ ಚೆನ್ನಾಗಿ ಹಿಟ್ಟನ್ನು ಕರಗಿಸಿಕೊಳ್ಳಿ.
10. ನೀರನ್ನು ಸ್ವಲ್ಪ ಸ್ವಲ್ಪ ಸೇರಿಸಿ. ನಿಧಾನವಾಗಿ ಮಿಶ್ರಮಾಡಿ ಇದರಿಂದ ಹಿಟ್ಟು ಅರ್ಧ ದಪ್ಪಗಾಗಿ ಇರುತ್ತದೆ. ಇದನ್ನು
30-45 ನಿಮಿಷಗಳ ಕಾಲ ಹಾಗೆಯೇ ಬಿಡಿ
11. ಪ್ಯಾನ್ ಬಿಸಿ ಮಾಡಿಕೊಂಡು ಅದಕ್ಕೆ ತುಪ್ಪ ಹಾಕಿ
12. ತುಪ್ಪದಲ್ಲಿ ತೆಂಗಿನ ಹೋಳನ್ನು ಹುರಿದುಕೊಳ್ಳಿ ಮತ್ತು ಹಿಟ್ಟಿಗೆ ಇದನ್ನು ಮಿಶ್ರಮಾಡಿ
13. ಉಣ್ಣಿಯಪ್ಪ ಸಿದ್ಧಪಡಿಸುವ ಕಡಾಯಿಯನ್ನು ಇದಕ್ಕಾಗಿ ಸಿದ್ಧಪಡಿಸಿಕೊಳ್ಳಿ
14. ಈಗ, ಕಡಾಯಿಯಲ್ಲಿ ತುಪ್ಪವನ್ನು ಬಿಸಿ ಮಾಡಿ ಮತ್ತು ಹಿಟ್ಟನ್ನು ಕಡಾಯಿಗೆ ಸುರಿಯಿರಿ.
15. ಇದು ಚಿನ್ನದ ಬಣ್ಣಕ್ಕೆ ಬರುತ್ತಿದ್ದಂತೆ, ಸ್ಪೂನ್ ಸಹಾಯದಿಂದ ಇದನ್ನು ತಿರುಗಿಸಿಕೊಳ್ಳಿ ಮತ್ತು ಇನ್ನೊಂದು
ಭಾಗವನ್ನು ಬೇಯಿಸಿಕೊಳ್ಳಿ.
16. ಎರಡೂ ಬದಿಯೂ ಉಣ್ಣಿಯಪ್ಪವು ಬೇಯುತ್ತಿರುವಂತೆ, ಕಿಚನ್ ಟವೆಲ್ ಬಳಸಿಕೊಂಡು ಇದನ್ನು ಹೊರಕ್ಕೆ
ತೆಗೆಯಿರಿ.
ರುಚಿಯಾದ ಉಣ್ಣಿಯಪ್ಪವು ಸೇವಿಸಲು ಸಿದ್ಧವಾಗಿದೆ. ಇನ್ನಷ್ಟು ಸಿಹಿ ಬೇಕು ಎಂದಾದಲ್ಲಿ ಹಿಟ್ಟಿಗೆ ಸಕ್ಕರೆಯನ್ನು
ಸೇರಿಸಿಕೊಳ್ಳಿ. ಹಿಟ್ಟನ್ನು ತುಂಬಾ ನೀರು ಮಾಡಿಕೊಳ್ಳಬೇಡಿ. ನೀರಾಗಿದೆ ಎಂದಾದಲ್ಲಿ ಇದಕ್ಕೆ ಅಕ್ಕಿಹುಡಿಯನ್ನು
ಸೇರಿಸಿಕೊಳ್ಳಿ.
ಗೋಧಿ ಹುಡಿಯನ್ನು ಸೇರಿಸಿಕೊಂಡು ಇದನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ. ಉಣ್ಣಿಯಪ್ಪಕ್ಕೆ ವೆಜಿಟೇಬಲ್ ಎಣ್ಣೆಯನ್ನು ಬಳಸಿ ಇದನ್ನು ಕಡಿಮೆ ಎಣ್ಣೆಯದ್ದಾಗಿ ಸಿದ್ಧಪಡಿಸಿಕೊಳ್ಳಬಹುದಾಗಿದೆ. ಆದರೆ ತುಪ್ಪವು ಸ್ವಾದವನ್ನು ಇಮ್ಮಡಿಸುತ್ತದೆ.



Click it and Unblock the Notifications