Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ನಾಗರ ಪಂಚಮಿಗೆ ಸವಿಯಲು 2 ಬಗೆಯ ಲಡ್ಡು ರೆಸಿಪಿ: ತುಂಬಾನೇ ಸುಲಭವಾಗಿ ಮಾಡಬಹುದು
ಆಗಸ್ಟ್ 9ಕ್ಕೆ ನಾಗರ ಪಂಚಮಿ ಹಬ್ಬದ ಶುಭಾಶಯಗಳು, ಈ ಹಬ್ಬಕ್ಕೆ ಸವಿಯಲು ಇಲ್ಲಿದೆ 2 ಸರಳವಾದ ರೆಸಿಪಿ...

ಎಳ್ಳು ಲಡ್ಡು ರೆಸಿಪಿ
ಬೇಕಾಗುವ ಸಾಮಗ್ರಿ
ಬಿಳಿ ಎಳ್ಳು 1 ಕಪ್
1/4 ಕಪ್ ನೆಲಗಡಲೆ
1/2 ಕಪ್ ತೆಂಗಿನತುರಿ
1/2 ಕೆಜಿ ಬೆಲ್ಲ
1/2 ಚಮಚ ಏಲಕ್ಕಿ ಪುಡಿ
ಮಾಡುವುದು ಹೇಗೆ?
ಎಳ್ಳನ್ನು ಹುರಿಯಬೇಕು
ನೆಲಗಡಲೆ ಹುರಿಯಿರಿ
ತೆಂಗಿನ ತುರಿ ಕೂಡ ಹುರಿಯಬೇಕು
ಈಗ ನೀವು ತೆಂಗಿನ ತುರಿ, ಎಳ್ಳು, ಬೆಲ್ಲ, ಏಲಕ್ಕಿ ಹಾಕಿ ಪುಡಿ ಮಾಡಿ
ನಂತರ ಇದರಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ.
ಇಷ್ಟು ಮಾಡಿದರೆ ಎಳ್ಳುಂಡೆ ರೆಡಿ.
ಹೆಸರು ಕಾಳಿನ ಲಡ್ಡು
ಬೇಕಾಗುವ ಪದಾರ್ಥಗಳು:
1 ಕಪ್ ಹೆಸರುಬೇಳೆ 1/2 ಕಪ್
ತುಪ್ಪ1/4 ಕಪ್
ಬೆಲ್ಲ 1 ಕಪ್
ಏಲಕ್ಕಿ 2
ಡ್ರೈ ಫ್ರೂಟ್ಸ್ (ಸ್ವಲ್ಪ)
ತಯಾರಿಸುವ ವಿಧಾನ:
ಬಾಣಲೆಯಲ್ಲಿ 1 ಕಪ್ ಹೆಸರುಬೇಳೆಯನ್ನು ಕಡಿಮೆ ಉರಿಯಲ್ಲಿ ಹುರಿದುಕೊಳ್ಳಿ. ಅದರಿಂದ
ಸುವಾಸನೆ ಬರುವವರೆಗೂ ಉರಿಯಬೇಕು.
ಬಾಣಲೆಗೆ 2 ಚಮಚ ಎಣ್ಣೆ ಹಾಕಿ ನಂತರ ಅದರಲ್ಲಿ ಹುರಿದ ಹೆಸರುಕಾಳು ಹಾಕಿ ಮತ್ತೆ
ಹುರಿಯಿರಿ. ನಂತರ ಪುಡಿ ಮಾಡಿ, ಈಗ ಆ ಪುಡಿಗೆ ಎಲಕ್ಕಿ, ಬೆಲ್ಲ(ಕರಗಿಸಿ ಹಾಕಿ),
ಸ್ವಲ್ಪ ಡ್ರೈ ಫ್ರೂಟ್ಸ್ ಹಾಕಿ ಮಿಕ್ಸ್ ಮಾಡಿ ಉಂಡೆ ಕಟ್ಟಿ.
ಇಷ್ಟು ಮಾಡಿದರೆ ಹೆಸರುಕಾಳಿನ ಲಡ್ಡು ರೆಡಿ.
ಇನ್ನು ಈ ದಿನ ಪಾಯಸ ಮಾಡುವುದಾದರೆ ನುಚ್ಚು ಗೋಧಿ ಪಾಯಸ ಮಾಡಿ
ಗೋಧಿ ನುಚ್ಚು ಗೋಧಿ ಹಾಕಿ ಹುರಿಯಿರಿ
ತೆಂಗಿನಕಾಯಿ ತುರಿ 1 ಕಪ್
ಬೆಲ್ಲ 1 ಕಪ್
ಕೊಬ್ಬರಿ ( ಚಿಕ್ಕದಾಗಿ ಕತ್ತರಿಸಿದ್ದು)
ತಯಾರಿಸುವ ವಿಧಾನ
ಬಾಣಲೆಗೆ ಒಂದು ಕಪ್ ನುಚ್ಚು ಗೋಧಿ ಹುರಿಯಿರಿ.
ನಂತರ 1 ಕಪ್ 3-4 ಕಪ್ ನೀರು ಹಾಕಿ 4-5 ವಿಷಲ್ ಬರುವವರೆಗೆ ಬೇಯಿಸಿ,
ಬೇಯಿಸುವಾಗ ಬೆಲ್ಲ ಹಾಕಿ ಬೇಯಿಸಿ.
ನಂತರ ಏಲಕ್ಕಿ ಸೇರಿಸಿ
ಮತ್ತೊಂದು ಚಿಕ್ಕ ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ, ತುಪ್ಪ ಬಿಸಿ ಮಾಡಿ ಅದರಲ್ಲಿ
ಗೋಡಂಬಿ, ದ್ರಾಕ್ಷಿ ಅಥವಾ ಒಣ ಕೊಬ್ಬರಿ ಹಾಕಿ ಹುರಿದು ಪಾಯಸ ಜೊತೆ ಸೇರಿಸಿದರೆ
ನುಚ್ಚು ಗೋಧಿಯ ಪಾಯಸ ರೆಡಿ.
ನುಚ್ಚು ಗೋಧಿ ಮಾಡುವುದು ಹೇಗೆ?
ಅಂಗಡಿಯಲ್ಲಿ ಸಿಗುತ್ತದೆ, ಇಲ್ಲಾ ನೀವು ಗೋಧಿಯನ್ನು ಸ್ವಲ್ಪ ಹುರಿದು
ತರಿ-ತರಿಯಾಗಿ ಹುರಿದು ಕುಟ್ಟಿ ಅಥವಾ ಮಿಕ್ಸಿಯಲ್ಲಿ ರುಬನ್ಬಿ ಮಾಡಬಹುದು,
ಮಿಕ್ಸಿಯಲ್ಲಿ ರುಬ್ಬಿದರೆ 2 -3 ರೌಂಡ್ ತಿರುಗಿಸಿದರೆ ಸಾಕು.



Click it and Unblock the Notifications
