For Quick Alerts
ALLOW NOTIFICATIONS  
For Daily Alerts

ಡಯಟ್‌ನಲ್ಲಿದ್ದರೂ ಸವಿಯಬಹುದು ಸಿಹಿಗೆಣಸಿನ ಈ ಟಿಕ್ಕಿ

Posted By:
|

ಸಂಜೆ ಸ್ನ್ಯಾಕ್ಸ್‌ಗೆ ಏನು ಮಾಡಬೇಕೆಂದು ಯೋಚಿಸುತ್ತಿದ್ದರೆ ಫಟಾಫಟ್‌ ಮಾಡಬಹುದಾದ ಸಿಹಿಗೆಣಸಿನ ಟಿಕ್ಕಿ ಏಕೆ ಟ್ರೈ ಮಾಡಬಹುದು. ಹೌದು ಇದನ್ನು ಮಾಡುವ ವಿಧಾನ ತುಂಬಾ ಸುಲಭ ಹಾಗೂ ಸಂಜೆ ಸ್ನ್ಯಾಕ್ಸ್‌ ಜೊತೆ ನೆಚ್ಚಿಕೊಂಡು ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

Tikki Recipe

ಸಿಹಿ ಗೆಣಸು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ಸ್ನ್ಯಾಕ್ಸ್‌ ಅನ್ನು ಮಧುಮೇಹಿಗಳು ಕೂಡ ಸವಿಯಬಹುದಾಗಿದೆ. ಡಯಟ್‌ ಪಾಲಿಸುವವರು ಕೂಡ ಇದನ್ನು ಸವಿಯಬಹುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Sweet Potato Tikki Recipe, ಸಿಹಿಗೆಣಸಿನ ಟಿಕ್ಕಿ ರೆಸಿಪಿ
Sweet Potato Tikki Recipe, ಸಿಹಿಗೆಣಸಿನ ಟಿಕ್ಕಿ ರೆಸಿಪಿ
Prep Time
20 Mins
Cook Time
10M
Total Time
30 Mins

Recipe By: Reena TK

Recipe Type: Snacks

Serves: 2

Ingredients
  • ಬೇಕಾಗುವ ಸಾಮಗ್ರಿ

    ಸಿಹಿ ಗೆಣಸು 2(ದೊಡ್ಡದು)

    ತುರಿದ ಶುಂಠಿ 1 ಚಮಚ

    ಹಸಿ ಮೆಣಸಿನಕಾಯಿ 1-2

    ಖಾರದ ಪುಡಿ 1 ಚಮಚ

    ಗರಂ ಮಸಾಲ ಪುಡಿ ಅರ್ಧ ಚಮಚ

    ಆಮ್‌ಚೂರ್ ಪೌಡರ್ 1 ಚಮಚ

    ಚಾಟ್‌ ಮಸಾಲ 1 ಚಮಚ

    ಕಲ್ಲುಪ್ಪು (ರುಚಿಗೆ ತಕ್ಕಷ್ಟು)

    ನಿಂಬೆರಸ 2 ಚಮಚ

    ಜೋಳದ ಹಿಟ್ಟು 1 ಚಮಚ

    ಎಣ್ಣೆ 2 ಚಮಚ

Red Rice Kanda Poha
How to Prepare
  • ಮಾಡುವುದು ಹೇಗೆ?

    1. ಸಿಹಿ ಗೆಣಸನ್ನು ಬೇಯಿಸಿ, ಸಿಪ್ಪೆ ಸುಲಿಯಿರಿ.

    2. ನಂತರ ಅದನ್ನು ಮ್ಯಾಶ್‌ ಮಾಡಿ ಶುಂಠಿ, ಹಸಿ ಮೆಣಸಿನಕಾಯಿ ಹಾಕಿ.

    3. ಈಗ ಖಾರದ ಪುಡಿ, ಗರಂ ಮಸಾಲ ಪುಡಿ, ಆಮ್‌ಚೂರ್, ಚಾಟ್‌ ಮಸಾಲ ಹಾಕಿ ಮಿಶ್ರ ಮಾಡಿ.

    4. ಈಗ ಕಲ್ಲುಪ್ಪು, ನಿಂಬೆರಸ, ಜೋಳದ ಹಿಟ್ಟು ಹಾಕಿ ಮಿಶ್ರ ಮಾಡಿ, ಇದ್ದರೆ ಕುಟ್ಟು ಪುಡಿ ಸೇರಿಸಿ.

    5.ಈಗ ಎಲ್ಲವನ್ನು ಮಿಶ್ರ ಮಾಡಿ ಚಪಾತಿ ಉಂಡೆಯಷ್ಟು ದೊಡ್ಡ ಉಂಡೆ ಕಟ್ಟಿ. ನಂತರ ತಟ್ಟಿ.

    6. ಇದೇ ಸಮಯದಲ್ಲಿ ಪ್ಯಾನ್‌ ಬಿಸಿ ಮಾಡಿ ಎಣ್ಣೆ ಹಾಕಿ. ಈಗ ಮೀಡಿಯಂ ಉರಿಯಲ್ಲಿ ಫ್ರೈ ಮಾಡಿ, ಒಂದು ಬದಿ ಆದ ಮೇಲೆ ಮತ್ತೊಂದು ಬದಿ ಫ್ರೈ ಮಾಡಿ.

    ರೆಡಿಯಾದ ಟಿಕ್ಕಿಯನ್ನು ಬಿಸಿ ಇರುವಾಗಲೇ ಸರ್ವ್ ಮಾಡಿ.

Instructions
  • * ಇದನ್ನು ಕಲ್ಲುಪ್ಪು ಬಳಸಿ ಮಾಡುವುದರಿಂದ ವ್ರತದ ಸಮಯದಲ್ಲೂ ಮಾಡಿ ತಿನ್ನಬಹುದು. *ಇದನ್ನು ಫ್ರೈ ಮಾಡುವ ಬದಲು ಗ್ರಿಲ್ಡ್ ಮಾಡಿ ತಿನ್ನಲೂ ಕೂಡ ಸಕತ್ ಚೆನ್ನಾಗಿರುತ್ತದೆ.
Nutritional Information
  • ಸರ್ವ್‌ ಸೈಜ್: - 1 ಟಿಕ್ಕಿ
  • ಕ್ಯಾಲೋರಿ: - 142ಕ್ಯಾ
  • ಕೊಬ್ಬು: - 6 ಗ್ರಾಂ
  • ಪ್ರೊಟೀನ್: - 5ಗ್ರಾಂ
  • ಕಾರ್ಬೋಹೈಡ್ರೇಟ್ಸ್: - 16ಗ್ರಾಂ
  • ಸಕ್ಕರೆ: - 4ಗ್ರಾಂ
  • ನಾರಿನಂಶ: - 3 ಗ್ರಾಂ

ಮಾಡುವುದು ಹೇಗೆ?
1. ಸಿಹಿ ಗೆಣಸನ್ನು ಬೇಯಿಸಿ, ಸಿಪ್ಪೆ ಸುಲಿಯಿರಿ.

Tikki Recipe

2. ನಂತರ ಅದನ್ನು ಮ್ಯಾಶ್‌ ಮಾಡಿ ಶುಂಠಿ, ಹಸಿ ಮೆಣಸಿನಕಾಯಿ ಹಾಕಿ.

Tikki Recipe


3. ಈಗ ಖಾರದ ಪುಡಿ, ಗರಂ ಮಸಾಲ ಪುಡಿ, ಆಮ್‌ಚೂರ್, ಚಾಟ್‌ ಮಸಾಲ ಹಾಕಿ ಮಿಶ್ರ ಮಾಡಿ.

Tikki Recipe


4. ಈಗ ಕಲ್ಲುಪ್ಪು, ನಿಂಬೆರಸ, ಜೋಳದ ಹಿಟ್ಟು ಹಾಕಿ ಮಿಶ್ರ ಮಾಡಿ, ಇದ್ದರೆ ಕುಟ್ಟು ಪುಡಿ ಸೇರಿಸಿ.

Tikki Recipe


5.ಈಗ ಎಲ್ಲವನ್ನು ಮಿಶ್ರ ಮಾಡಿ ಚಪಾತಿ ಉಂಡೆಯಷ್ಟು ದೊಡ್ಡ ಉಂಡೆ ಕಟ್ಟಿ. ನಂತರ ತಟ್ಟಿ.

Tikki Recipe


6. ಇದೇ ಸಮಯದಲ್ಲಿ ಪ್ಯಾನ್‌ ಬಿಸಿ ಮಾಡಿ ಎಣ್ಣೆ ಹಾಕಿ. ಈಗ ಮೀಡಿಯಂ ಉರಿಯಲ್ಲಿ ಫ್ರೈ ಮಾಡಿ, ಒಂದು ಬದಿ ಆದ ಮೇಲೆ ಮತ್ತೊಂದು ಬದಿ ಫ್ರೈ ಮಾಡಿ.

Tikki Recipe


ರೆಡಿಯಾದ ಟಿಕ್ಕಿಯನ್ನು ಬಿಸಿ ಇರುವಾಗಲೇ ಸರ್ವ್ ಮಾಡಿ.

[ 3.5 of 5 - 44 Users]
Story first published: Friday, May 29, 2020, 15:00 [IST]
X
Desktop Bottom Promotion