Latest Updates
-
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು!
ಡಯಟ್‌ನಲ್ಲಿದ್ದರೂ ಸವಿಯಬಹುದು ಸಿಹಿಗೆಣಸಿನ ಈ ಟಿಕ್ಕಿ
ಸಂಜೆ ಸ್ನ್ಯಾಕ್ಸ್‌ಗೆ ಏನು ಮಾಡಬೇಕೆಂದು ಯೋಚಿಸುತ್ತಿದ್ದರೆ ಫಟಾಫಟ್ ಮಾಡಬಹುದಾದ ಸಿಹಿಗೆಣಸಿನ ಟಿಕ್ಕಿ ಏಕೆ ಟ್ರೈ ಮಾಡಬಹುದು. ಹೌದು ಇದನ್ನು ಮಾಡುವ ವಿಧಾನ ತುಂಬಾ ಸುಲಭ ಹಾಗೂ ಸಂಜೆ ಸ್ನ್ಯಾಕ್ಸ್ ಜೊತೆ ನೆಚ್ಚಿಕೊಂಡು ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

ಸಿಹಿ ಗೆಣಸು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ಸ್ನ್ಯಾಕ್ಸ್ ಅನ್ನು ಮಧುಮೇಹಿಗಳು ಕೂಡ ಸವಿಯಬಹುದಾಗಿದೆ. ಡಯಟ್ ಪಾಲಿಸುವವರು ಕೂಡ ಇದನ್ನು ಸವಿಯಬಹುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Snacks
Serves: 2
-
ಬೇಕಾಗುವ ಸಾಮಗ್ರಿ
ಸಿಹಿ ಗೆಣಸು 2(ದೊಡ್ಡದು)
ತುರಿದ ಶುಂಠಿ 1 ಚಮಚ
ಹಸಿ ಮೆಣಸಿನಕಾಯಿ 1-2
ಖಾರದ ಪುಡಿ 1 ಚಮಚ
ಗರಂ ಮಸಾಲ ಪುಡಿ ಅರ್ಧ ಚಮಚ
ಆಮ್‌ಚೂರ್ ಪೌಡರ್ 1 ಚಮಚ
ಚಾಟ್ ಮಸಾಲ 1 ಚಮಚ
ಕಲ್ಲುಪ್ಪು (ರುಚಿಗೆ ತಕ್ಕಷ್ಟು)
ನಿಂಬೆರಸ 2 ಚಮಚ
ಜೋಳದ ಹಿಟ್ಟು 1 ಚಮಚ
ಎಣ್ಣೆ 2 ಚಮಚ
-
ಮಾಡುವುದು ಹೇಗೆ?
1. ಸಿಹಿ ಗೆಣಸನ್ನು ಬೇಯಿಸಿ, ಸಿಪ್ಪೆ ಸುಲಿಯಿರಿ.
2. ನಂತರ ಅದನ್ನು ಮ್ಯಾಶ್ ಮಾಡಿ ಶುಂಠಿ, ಹಸಿ ಮೆಣಸಿನಕಾಯಿ ಹಾಕಿ.
3. ಈಗ ಖಾರದ ಪುಡಿ, ಗರಂ ಮಸಾಲ ಪುಡಿ, ಆಮ್‌ಚೂರ್, ಚಾಟ್ ಮಸಾಲ ಹಾಕಿ ಮಿಶ್ರ ಮಾಡಿ.
4. ಈಗ ಕಲ್ಲುಪ್ಪು, ನಿಂಬೆರಸ, ಜೋಳದ ಹಿಟ್ಟು ಹಾಕಿ ಮಿಶ್ರ ಮಾಡಿ, ಇದ್ದರೆ ಕುಟ್ಟು ಪುಡಿ ಸೇರಿಸಿ.
5.ಈಗ ಎಲ್ಲವನ್ನು ಮಿಶ್ರ ಮಾಡಿ ಚಪಾತಿ ಉಂಡೆಯಷ್ಟು ದೊಡ್ಡ ಉಂಡೆ ಕಟ್ಟಿ. ನಂತರ ತಟ್ಟಿ.
6. ಇದೇ ಸಮಯದಲ್ಲಿ ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ. ಈಗ ಮೀಡಿಯಂ ಉರಿಯಲ್ಲಿ ಫ್ರೈ ಮಾಡಿ, ಒಂದು ಬದಿ ಆದ ಮೇಲೆ ಮತ್ತೊಂದು ಬದಿ ಫ್ರೈ ಮಾಡಿ.
ರೆಡಿಯಾದ ಟಿಕ್ಕಿಯನ್ನು ಬಿಸಿ ಇರುವಾಗಲೇ ಸರ್ವ್ ಮಾಡಿ.
- * ಇದನ್ನು ಕಲ್ಲುಪ್ಪು ಬಳಸಿ ಮಾಡುವುದರಿಂದ ವ್ರತದ ಸಮಯದಲ್ಲೂ ಮಾಡಿ ತಿನ್ನಬಹುದು. *ಇದನ್ನು ಫ್ರೈ ಮಾಡುವ ಬದಲು ಗ್ರಿಲ್ಡ್ ಮಾಡಿ ತಿನ್ನಲೂ ಕೂಡ ಸಕತ್ ಚೆನ್ನಾಗಿರುತ್ತದೆ.
- ಸರ್ವ್ ಸೈಜ್: - 1 ಟಿಕ್ಕಿ
- ಕ್ಯಾಲೋರಿ: - 142ಕ್ಯಾ
- ಕೊಬ್ಬು: - 6 ಗ್ರಾಂ
- ಪ್ರೊಟೀನ್: - 5ಗ್ರಾಂ
- ಕಾರ್ಬೋಹೈಡ್ರೇಟ್ಸ್: - 16ಗ್ರಾಂ
- ಸಕ್ಕರೆ: - 4ಗ್ರಾಂ
- ನಾರಿನಂಶ: - 3 ಗ್ರಾಂ
ಮಾಡುವುದು ಹೇಗೆ?
1. ಸಿಹಿ ಗೆಣಸನ್ನು ಬೇಯಿಸಿ, ಸಿಪ್ಪೆ ಸುಲಿಯಿರಿ.

2. ನಂತರ ಅದನ್ನು ಮ್ಯಾಶ್ ಮಾಡಿ ಶುಂಠಿ, ಹಸಿ ಮೆಣಸಿನಕಾಯಿ ಹಾಕಿ.

3. ಈಗ ಖಾರದ ಪುಡಿ, ಗರಂ ಮಸಾಲ ಪುಡಿ, ಆಮ್‌ಚೂರ್, ಚಾಟ್ ಮಸಾಲ ಹಾಕಿ ಮಿಶ್ರ
ಮಾಡಿ.

4. ಈಗ ಕಲ್ಲುಪ್ಪು, ನಿಂಬೆರಸ, ಜೋಳದ ಹಿಟ್ಟು ಹಾಕಿ ಮಿಶ್ರ ಮಾಡಿ, ಇದ್ದರೆ
ಕುಟ್ಟು ಪುಡಿ ಸೇರಿಸಿ.

5.ಈಗ ಎಲ್ಲವನ್ನು ಮಿಶ್ರ ಮಾಡಿ ಚಪಾತಿ ಉಂಡೆಯಷ್ಟು ದೊಡ್ಡ ಉಂಡೆ ಕಟ್ಟಿ. ನಂತರ
ತಟ್ಟಿ.

6. ಇದೇ ಸಮಯದಲ್ಲಿ ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ. ಈಗ ಮೀಡಿಯಂ ಉರಿಯಲ್ಲಿ
ಫ್ರೈ ಮಾಡಿ, ಒಂದು ಬದಿ ಆದ ಮೇಲೆ ಮತ್ತೊಂದು ಬದಿ ಫ್ರೈ ಮಾಡಿ.

ರೆಡಿಯಾದ ಟಿಕ್ಕಿಯನ್ನು ಬಿಸಿ ಇರುವಾಗಲೇ ಸರ್ವ್ ಮಾಡಿ.



Click it and Unblock the Notifications
