Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಸಿಹಿಗೆಣಸಿನ ಚಾಟ್ಸ್ ರೆಸಿಪಿ: ಮಧುಮೇಹಿಗಳಿಂದ ಹಿಡಿದು ಎಲ್ಲರ ಆರೋಗ್ಯಕ್ಕೆ ಒಳ್ಳೆಯದು ಈ ಸೂಪರ್ ಸ್ನ್ಯಾಕ್ಸ್
ಚಳಿಗಾಲದಲ್ಲಿ ತಿನ್ನಲೇಬೇಕಾದ ಆಹಾರದಲ್ಲೊಂದು ಸಿಹಿ ಗೆಣಸು. ಮಧುಮೇಹಿಗಳಿಂದ ಹಿಡಿದು ಪುಟ್ಟ ಮಕ್ಕಳವರೆಗೂ ಸವಿಯಬಹುದು. ನಾವಿಲ್ಲಿ ಸಿಹಿಗೆಣಸಿನಿಂದದ ಮಾಡಬಹುದಾದ ಸ್ನ್ಯಾಕ್ಸ್ ರೆಸಿಪಿ ನೀಡಿದ್ದೇವೆ, ಬನ್ನಿ ಸ್ವೀಟ್ ಪೊಟೆಟೊ ಚಾಟ್ಸ್ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಅರ್ಧ ಕೆಜಿ ಬೇಯಿಸಿದ ಸಿಹಿಗೆಣಸು
1/4 ಚಮಚ ಕಾಳು ಮೆಣಸಿನ ಪುಡಿ
1/2 ಚಮಚ ಆಮ್ಚೂರ್
1/2 ಚಮಚ ನಿಂಬೆರಸ
ರಾಕ್ ಸಾಲ್ಟ್
ಮಾಡುವ ವಿಧಾನ
* ಸಿಹಿ ಗೆಣಸನ್ನು ಹಬೆಯಲ್ಲಿ ಬೇಯಿಸಿ, ನಂತರ ಅದರ ಸಿಪ್ಪೆ ಸುಲಿಯಿರಿ.
* ನಂತರ ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿ, ಅದಕ್ಕೆ 1/2 ಚಮಚ ಆಮ್ಚೂರ್,
ರಾಕ್ ಸಾಲ್ಟ್, ಖಾರದ ಪುಡಿ, ಚಾಟ್ ಮಸಾಲ ಪುಡಿ, ರೋಸ್ಟ್ ಮಾಡಿದ ಜೀರಿಗೆ ಪುಡಿ
ಸೇರಿಸಿ ( ಮಸಾಲೆಗಳನ್ನು ನಿಮ್ಮ ರುಚಿಗೆ ತಕ್ಕಂತೆ ಹಾಕಿ)
* ನಂತರ 1/2 ಚಮಚ ನಿಂಬೆರಸ ಹಾಕಿ.
ನಂತರ ಮಿಕ್ಸ್ ಮಾಡಿ ಸರ್ವ್ ಮಾಡಿ.
ಇತರ ಸಲಹೆ:
* ಇದನ್ನು ನೀವು ನಿಮಗೆ ಬೇಕಾದ ಪ್ರಮಾಣದಲ್ಲಿ ತಯಾರಿಸಬಹುದು.
* ಚಳಿಗಾಲಕ್ಕೆ ಈ ಆಹಾರ ತುಂಬಾ ಒಳ್ಳೆಯದು
* ರಾಕ್ಸಾಲ್ಟ್ ಬದಲಿಗೆ ಬ್ಲ್ಯಾಕ್ ಸಾಲ್ಟ್ ಬಳಸಬಹುದು.
* ಇತರ ಮಸಾಲೆಗಳನ್ನು ನಿಮಗೆ ಬೇಕಾದ ಪ್ರಮಾಣದಲ್ಲಿ ಬಳಸಬಹುದು
ಸಿಹಿಗೆಣಸಿನಲ್ಲಿರುವ ಪೋಷಕಾಂಶಗಳು
ವಿಟಮಿನ್ ಎ
ವಿಟಮಿನ್ ಬಿ6
ವಿಟಮಿನ್ ಸಿ
ಪೊಟಾಷ್ಯಿಯಂ
ನಾರಿನಂಶ
ಖನಿಜಾಂಶ
ಸಿಹಿಗೆಣಸಿನಲ್ಲಿರುವ ಪೋಷಕಾಂಶಗಳು
* ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
* ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು
* ಮಧುಮೇಹಿಗಳಿಗೂ ಸೂಪರ್ಫುಡ್ ಇದು
* ಕ್ಯಾನ್ಸರ್ ತಡೆಗಟ್ಟಲು ಸಹಕಾರಿ
* ದೇಹವನ್ನು ಡಿಟಾಕ್ಸ್ ಮಾಡುತ್ತದೆ
* ಹೃದಯದ ಆರೋಗ್ಯಕ್ಜೆ ಒಳ್ಳೆಯದು
* ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
* ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
* ತ್ವಚೆಗೆ ಒಳ್ಳೆಯದು



Click it and Unblock the Notifications
