Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ರೆಸಿಪಿ: ಬೇಸಿಗೆಯಲ್ಲಿ ಆರೋಗ್ಯಕ್ಕೆ ರಾಗಿ ಮಜ್ಜಿಗೆ ತುಂಬಾ ಒಳ್ಳೆಯದು
ಬೇಸಿಗೆಯ ಧಗೆ ಹೆಚ್ಚಾಗಿದೆ, ಸ್ವಲ್ಪ ಹೊರಗಡೆ ಸುತ್ತಾಡಿ ಬಂದರೆ ತುಂಬಾನೇ ಸುಸ್ತು ಅನಿಸುವುದು, ಈ ಸುಸ್ತು ನಿವಾರಣೆಗೆ ಈ ಒಂದು ಪಾನೀಯ ಇದ್ದರೆ ಸಾಕು. ರಾಗಿ ಹಾಗೂ ಮಜ್ಜಿಗೆ ಹಾಕಿ ಮಾಡುವ ಪಾನೀಯ ಇದಾಗಿದೆ, ಇದನ್ನು ರಾಗಿ ಮಜ್ಜಿಗೆ ಎಂದು ಕರೆಯಲಾಗುವುದು.
ಇದನ್ನು ಕುಡಿದಾಗ ಬಾಯಾರಿಕೆ ದೂರಾಗುವುದು, ಹೊಟ್ಟೆ ತುಂಬುವುದು, ದೇಹಕ್ಕೆ ಚೈತನ್ಯ ಸಿಗುವುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ನೀರು 4 ಗ್ಲಾಸ್
ರಾಗಿ ಪುಡಿ 2 ಚಮಚ
ಮೊಸರು 1/4 ಲೀ.
ರುಚಿಗೆ ತಕ್ಕ ಉಪ್ಪು
ಜೀರಿಗೆ ಪುಡಿ ಒಂದೂವರೆ ಚಮಚ
ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವುದು ಹೇಗೆ?
ಅರ್ಧ ಬೌಲ್ ನೀರು ತೆಗೆದುಕೊಳ್ಳಿ
ಅದಕ್ಕೆ ಸ್ವಲ್ಪ ರಾಗಿ ಪುಡಿ ಹಾಕಿ ಮಿಕ್ಸ್ ಮಾಡಿ, ರಾಗಿ ಗಂಟು ಗಂಟಾಗಿ
ಇರಬಾರದು.
ನಂತರ ಮತ್ತೆ ಅರ್ಧ ಗ್ಲಾಸ್ ನೀರು ಸೇರಿಸಿ.
ನಂತರ ರಾಗಿ ಮಿಕ್ಸ್ ಮಾಡಿದ ನೀರನ್ನು ಚಿಕ್ಕ ಪ್ಯಾನ್‌ಗೆ ಹಾಕಿ, ಬೇಯಿಸಿ, ಸಾಧಾರಣ
ಉರಿಯಲ್ಲಿ ಸ್ಪೂನ್‌ನಿಂದ ತಿರುಗಿಸುತ್ತಾ ಬೇಯಿಸಿ.
ರಾಗಿ ಗಟ್ಟಿಯಾಗುತ್ತಾ ಬರುವಾಗ ಸ್ಟೌವ್ ಆಫ್ ಮಾಡಿ
ಈಗ ಮೊಸರನ್ನು ಒಂದು ಪಾತ್ರೆಗೆ ಹಾಕಿ, ಅದಕ್ಕೆ ನೀರು ಹಾಕಿ, ಅದಕ್ಕೆ ರಾಗಿ
ಮಿಕ್ಸ್ ಹಾಕಿ, ನೀರು, ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಸೌಟ್
ಕಲೆಸಿ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಇತರ ಟಿಪ್ಸ್
ನೀವು ಇದಕ್ಕೆ ಬೇಕಾದರೆ ಒಗ್ಗರಣೆ ಕೂಡ ಹಾಕಬಹುದು.

ಪ್ರಯೋಜನ
ಬೇಸಿಗೆಗೆ ಅತ್ಯುತ್ತಮವಾದ ಪಾನೀಯವಾಗಿದೆ
ರಾಗಿ ಹಾಗೂ ಮಜ್ಜಿಗೆ ದೇಹವನ್ನು ತಂಪಾಗಿಸುತ್ತದೆ
ರಾಗಿ ದೇಹಕ್ಕೆ ಶಕ್ತಿಯನ್ನು ತುಂಬುವುದು, ಬೇಸಿಗೆಯಲ್ಲಿ ತುಂಬಾನೇ
ಬಾಯಾರಿಕೆಯಾಗುವುದು ಅದನ್ನು ತಡೆಗಟ್ಟಿ ದೇಹಕ್ಕೆ ಶಕ್ತಿಯನ್ನು ಒದಗಿಸುವಲ್ಲಿ ಈ
ಪಾನೀಯ ಪ್ರಯೋಜನಕಾರಿ
ಈ ಪಾನೀಯ ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ.
ತೂಕ ನಿಯಂತ್ರಣದಲ್ಲಿರುತ್ತದೆ
ರಾಗಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ತೂಕವನ್ನು ನಿಯಂತ್ರಿಸಲು ತುಂಬಾನೇ
ಸಹಕಾರಿ. ಅಲ್ಲದೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿ ಇಡುವಲ್ಲಿ ತುಂಬಾನೇ
ಸಹಕಾರಿ, ಅಲ್ಲದೆ ರಾಗಿ ಸೇವಿಸಿದರೆ ಬೇಗನೆ ಹಸಿವು ಉಂಟಾಗುವುದಿಲ್ಲ.
ತ್ವಚೆಗೆ ತುಂಬಾ ಒಳ್ಳೆಯದು
ರಾಗಿ ತ್ವಚೆಗೆ ತುಂಬಾ ಒಳ್ಳೆಯದು. ಅಲ್ಲದೆ ಬೇಸಿಗೆಯಲ್ಲಿ ತ್ವಚೆಯಲ್ಲಿ
ಗೂಲ್ಳೆಗಳು ಏಳುವುದು, ಈ ಬಗೆಯ ಸಮಸ್ಯೆ ತಡೆಗಟ್ಟುವಲ್ಲಿ ರಾಗಿ ಸಹಕಾರಿ. ಇದರಿಂದ
ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ರಾಗಿಯಲ್ಲಿ ಕ್ಯಾಲ್ಸಿಯಂ ಅಧಿಕವಿರಲಿದೆ
ರಾಗಿಯಲ್ಲಿ ಕ್ಯಾಲ್ಸಿಯಂ ಅಧಿಕವಿದೆ, ಇದರಿಂದ ಸಂಧಿವಾತದ ಸಮಸ್ಯೆ ತಡೆಗಟ್ಟಲು,
ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. 100 ಗ್ರಾಂ ರಾಗಿಯಲ್ಲಿ 344 ಮಿಗ್ರಾಂ
ಕ್ಯಾಲ್ಸಿಯಂ ಇರುವುದರಿಂದ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಎದೆ ಹಾಲುಣಿಸುವ ತಾಯಿಗೆ ತುಂಬಾ ಒಳ್ಳೆಯದು
ಎದೆಹಾಲುಣಿಸುವ ತಾಯಿ ಈ ಪಾನೀಯ ಕುಡಿಯುವುದರಿಂದ ಎದೆ ಹಾಲಿನ ಉತ್ಪತ್ತಿ
ಹೆಚ್ಚಾಗುವುದು. ಇದರಲ್ಲಿರುವ ಅಮೈನೋ ಆಮ್ಲ, ಕ್ಯಾಲ್ಸಿಯಂ ಇರುವುದರಿಂದ ತಾಯಿಗೆ
ಪೋಷಕಾಂಶದ ಕೊರತೆ ಉಂಟಾಗುವುದಿಲ್ಲ.
ಜೀರ್ಣಕ್ರಿಯೆಗೆ ಒಳ್ಳೆಯದು
ರಾಗಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
ಇದರಲ್ಲಿರುವ ಪೋಷಕಾಂಶ ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಕರುಳಿನ ಕ್ಯಾನ್ಸರ್ ತಡೆಗಟ್ಟುತ್ತದೆ
ರಾಗಿ ಕರುಳಿನ ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗಿದೆ, ಅಲ್ಲದೆ ಮಧುಮೇಹ ಸಮಸ್ಯೆ ತಡೆಗಟ್ಟಲು ಇದು ತುಂಬಾನೇ ಸಹಕಾರಿ.
ನೀವು ರಾಗಿ ಜೊತೆಗೆ ಮಜ್ಜಿಗೆ ಕೂಡ ಸೇರಿಸುವುದರಿಂದ ಅದರ ಗುಣಗಳೂ ದೊರೆಯುವುದು, ಇದನ್ನು ಬೇಸಿಗೆಯಲ್ಲಿ ಪ್ರತಿದಿನ ಸೇವಿಸುವುದರಿಂದ ಬೇಸಿಗೆಯಲ್ಲಿ ಕಾಡುವ ಅನೇಕ ಆರೋಗ್ಯ ಸಮಸ್ಯೆ ತಡೆಗಟ್ಟಬಹುದು. ಇದನ್ನು ನೀವು ತಯಾರಿಸಿ ಬಾಟಲಿನಲ್ಲಿ ಹಾಕಿ ಆಫೀಸ್‌ಗೂ ಕೊಂಡೊಯೊದ್ದು ಬಳಸಬಹುದು.



Click it and Unblock the Notifications
