Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಕ್ರಿಸ್ಮಸ್ ಕೇಕ್ ರೆಸಿಪಿ: ಮಧುಮೇಹ ಇರುವವರಿಗಾಗಿ ಈ ಶುಗರ್ ಫ್ರೀ ಕೇಕ್
ಕ್ರಿಸ್ಮಸ್ಗೆ ಕೇಕ್ ಮಾಡುವ ತಯಾರಿಯಲ್ಲಿದ್ದೀರಾ? ಮನೆಯಲ್ಲಿ ಯಾರಾದರೂ ಡಯಾಬಿಟಿಕ್ ಸದಸ್ಯರಿದ್ದರೆ ಅವರಿಗಾಗಿ ಏನು ಮಾಡುವುದು ಎಂದು ಯೋಚಿಸುತ್ತಿದ್ದೀರಾ ಅವರಿಗೂ ಒಂದು ಕೇಕ್ ಮಾಡಿಬಿಡಿ, ಅಂದ್ರೆ ಅವರಿಗೆ ಶುಗರ್ಲೆಸ್ ಕೇಕ್ ಮಾಡಿ, ಅವರೂ ಕೇಕ್ ಸವಿಯುತ್ತಾ ಕ್ರಿಸ್ಮಸ್ ಆನಂದಿಸಲಿ. ನೀವು ಶುಗರ್ ಲೆಸ್ ಆಗಿಯೂ ಕೇಕ್ ಮಾಡಬಹುದು, ಅಲ್ಲದೆ ಇದರಲ್ಲಿ ಡ್ರೈಫ್ರೂಟ್ಸ್ ಬಳಸಿ ಮಾಡುವುದರಿಂದ ಒಳ್ಳೆಯ ಪೋಷಕಾಂಶವಿರುವ ಕೇಕ್ ಇದಾಗಿದೆ.

ಈ ಕೇಕ್ ಅನ್ನು ಇಲ್ಲಿ ಮೈಕ್ರೋವೇವ್ ರೆಸಿಪಿ ನೀಡಲಾಗಿದೆ, ಇದನ್ನು ನೀವು ಕುಕ್ಕರ್ನಲ್ಲಿಯೂ ತಯಾರಿಸಬಹುದು, ಕುಕ್ಕರ್ನಲ್ಲಿ ಹೇಗೆ ನೀವು ಹೇಗೆ ಇತರ ಕೇಕ್ ತಯಾರಿಸುತ್ತೀರೋ ಹಾಗೇ ತಯಾರಿಸಬಹುದು, ಕುಕ್ಕರ್ನಲ್ಲಿ ಸ್ಟೌವ್ ಕಡಿಮೆ ಉರಿಯಲ್ಲಿಟ್ಟು 20 ನಿಮಿಷ ಬೇಯಿಸಿ, ಇನ್ನೂ ಬೇಯಬೇಕು ಎಂದಾದರೆ ಮತ್ತೂ 5-10 ನಿಮಿಷ ಇಡಿ. ಈಗ ನಾವು ಮಧುಮೇಹಿಗಳು ತಿನ್ನಬಹುದಾದ ಕೇಕ್ ರೆಸಿಪಿ ತಿಳಿಯೋಣ:
Recipe By: Reena TK
Recipe Type: Cake
Serves: 5
-
ಬೇಕಾಗುವ ಸಾಮಗ್ರಿ
* 2 ಕಪ್ ಒಣದ್ರಾಕ್ಷಿ
* 3 ಕಪ್ ನೀರು
* 2 ಕಪ್ ಮೈದಾ ಹಿಟ್ಟು
* 2 ಮೊಟ್ಟೆ
* 3 ಟೇಬಲ್ಸ್ಪೂನ್ ಲಿಕ್ವಿಡ್ ಸ್ವೀಟನರ್
* 3/4 ಕಪ್ ವೆಜೆಟೇಬಲ್ ಆಯಿಲ್
* 1 ಚಮಚ ವೆನಿಲ್ಲಾ ರಸ
* 1 ಚಮಚ ಬೇಕಿಂಗ್ ಸೋಡಾ
* 1/2 ಚಮಚ ಉಪ್ಪು
* ಒಂದೂವರೆ ಚಮಚ ಚಕ್ಕೆ ಪುಡಿ
* 1/2 ಚಮಚ ನಟ್ಮಗ್ ಪುಡಿ
* ಕಪ್ ವಾಲ್ನಟ್ (ಕತ್ತರಿಸಿದ್ದು)
* 1 ಕಪ್ ಸಿಹಿರಹಿತ ಆ್ಯಪಲ್ ಸಾಸ್
-
ಮಾಡುವುದು ಹೇಗೆ?
ಸ್ಟೆಪ್ 1
ಒಂದು ಸಾಸ್ ಪ್ಯಾನ್ಗೆ ದ್ರಾಕ್ಷಿ ಮತ್ತು ನೀರು ಹಾಕಿ ಕುದಿಸಿ, ದ್ರಾಕ್ಷಿ, ನೀರನ್ನು ಸಂಪೂರ್ಣವಾಗಿ ಹೀರಿಕೊಳ್ಳುವವರೆಗೆ ಕುದಿಸಿ, ನಂತರ ತಣ್ಣಗಾಗಲು ಬಿಡಿ.
ಸ್ಟೆಪ್ 2
ಮೊಟ್ಟೆ, ಆ್ಯಪಲ್ ಸಾಸ್, ವೆಜೆಟೇಬಲ್ ಆಯಿಲ್, ವೆನಿಲ್ಲಾ, ಲಿಕ್ವಿಡ್ ಸ್ವೀಟನರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಈಗ ಮೈದಾ ಹಿಟ್ಟು, ಬೇಕಿಂಗ್ ಸೋಡಾ, ಉಪ್ಪು, ಚಕ್ಕೆ, ನಟ್ಮಗ್ ಪುಡಿ ಮಿಕ್ಸ್ ಮಾಡಿ, ಬೀಟರ್ ಬಳಸಿ ಮಿಕ್ಸ್ ಮಾಡಿ, ನಂತರ ಬೇಯಿಸಿದ ಒಣದ್ರಾಕ್ಷಿ, ಕತ್ತರಿಸಿದ ನಟ್ಸ್ ಹಾಕಿ ಮಿಕ್ಸ್ ಮಾಡಿ.
* ಈ ಮಿಕ್ಸಿಂಗ್ ಮಾಡುವಾಗಲೇ ಓವನ್ ಅನ್ನು 350 ಡಿಗ್ರಿ (175 ಡಿಗ್ರಿ C)ಗೆ ಬಿಸಿ ಮಾಡಿ ಕೇಕ್ನ ಸುರಿಯುವ ಪ್ಯಾನ್ಗೆ ಎಣ್ಣೆ ಸವರಿ ಇಡಿ.
ಸ್ಟೆಪ್ 3
* ಈಗ ಕೇಕ್ ಮಿಶ್ರಣವನ್ನು ಸುರಿದು 1 ಗಂಟೆ ಬೇಯಿಸಿದರೆ ಸುಗರ್ಲೆಸ್ ಕೇಕ್ ರೆಡಿ.
- ನೀವು ಈ ಕೇಕ್ ಮಾಡುವಾಗ ನಿಮಗೆ ಇಷ್ಟವಾದ ನಟ್ಸ್ ಬಳಸಬಹುದು
- ಸರ್ವ್ - 5
- ಕ್ಯಾಲೋರಿ - 373 ಕ್ಯಾ
- ಕೊಬ್ಬು - 21.3g
- ಪ್ರೊಟೀನ್ - 5.5g
- ಕಾರ್ಬ್ಸ್ - 43.1g



Click it and Unblock the Notifications
