Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸ್ಟ್ರೀಟ್‌ಫುಡ್ ಪಾವ್‌ಬಾಜಿ ಈಗ ಮನೆಯಲ್ಲಿಯೇ ಸವಿಯಿರಿ
ಕೊರೊನಾ ಬಂದಾಗಿನಿಂದ ಜಗತ್ತಿನ ಚಿತ್ರಣವೇ ಬದಲಾಗಿದೆ. ಒಂದು ಕಾಲದಲ್ಲಿ ಸ್ಟ್ರೀಟ್‌ಫುಡ್‌ಗಳ ಸವಿಯನ್ನು ಬಾಯಿ ಚಪ್ಪರಿಸಿಕೊಂಡು ಸವಿಯುತ್ತಿದ್ದ ನಾವು ಇನ್ನು ಮುಂದೆ ಆ ರೀತಿ ತಿನ್ನಲು ಎಷ್ಟು ತಿಂಗಳುಗಳು ಬೇಕಾಗಬಹುದೇನೋ...

ಮಕ್ಕಳಿಗಂತೂ ಹೊರಗಿನ ಆಹಾತ ಕೊಡುವುದನ್ನು ಯೋಚಿಸಲು ಸಾಧ್ಯನೇ ಇಲ್ಲ. ನೀವು ಸ್ಟ್ರೀಟ್‌ಫುಡ್ ಆಹಾರದ ರುಚಿ ಮಿಸ್ ಮಾಡುತ್ತಿದ್ದರೆ ಇಲ್ಲಿ ನಾವು ನಿಮಗೆ ರುಚಿಕರವಾದ ಪಾವ್‌ಬಾಜಿ ರೆಸಿಪಿ ನೀಡಿದ್ದೇವೆ. ಇದನ್ನು ಮಾಡಲು ಸುಲಭವಾಗಿರುವುದರಿಂದ ನೀವು ಮನೆಯಲ್ಲಿಯೇ ಮಾಡಿ ಮನೆಮಂದಿ ಜೊತೆ ಸವಿಯಬಹುದು.
ಇಲ್ಲಿ ನಾವು ಪಾವ್ಬಾಜಿ ಮಾಡುವ ಸ್ಟೆಪ್ ಬೈ ಸ್ಟೆಪ್ ರೆಸಿಪಿ ನೀಡಿದ್ದೇವೆ ನೋಡಿ:
Recipe By: Reena TK
Recipe Type: Snacks
Serves: 4
-
ಬೇಕಾಗುವ ಸಾಮಗ್ರಿ
* 1ಕಪ್ ಆಲೂಗಡ್ಡೆ (2-3 ಆಲೂಗಡ್ಡೆ, ಸಿಪ್ಪೆ ಸುಲಿದಿದ್ದು)
* ಅರ್ಧ ಕಪ್ ಗ್ರೀನ್ ಪೀಸ್
* ಅರ್ಧ ಕಪ್ ಹೂಕೋಸು
* ಅರ್ಧ ಕಪ್ ಕ್ಯಾಪ್ಸಿಕಂ
* 2 ಚಮಚ ಬೆಣ್ಣೆ (ಅಥವಾ ಎಣ್ಣೆ)
*2 ಈರುಳ್ಳಿ
* 1 ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್
* 1 ಹಸಿ ಮೆಣಸಿನಕಾಯಿ
* ಅರ್ಧ ಚಮಚ ಖಾರದ ಪುಡಿ
* 1/4 ಚಮಚ ಅರಿಶಿಣ ಪುಡಿ
* 2 ದೊಡ್ಡ ಟೊಮೆಟೊ
* ಸ್ವಲ್ಪ ಕಸೂರಿ ಮೇತಿ
* ಅರ್ಧ ಚಮಚ ಉಪ್ಪು
ಪಾವ್ ರುಚಿಗೆ ಸಾಮಗ್ರಿ
4-6 ಪಾವ್ (ಬನ್)
1 ಚಮಚ ಬೆಣ್ಣೆ
ಅರ್ಧ ಚಮಚ ಪಾವ್‌ಬಾಜಿ ಮಸಾಲ
ಅಲಂಕಾರಕ್ಕೆ
*1 ನಿಂಬೆಹಣ್ಣು (ಅದನ್ನು ಪೀಸ್‌ಗಳಾಗಿ ಕತ್ತರಿಸಿ)
* 1 ಈರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
* 2 ಚಮಚ ಕೊತ್ತಂಬರಿ ಸೊಪ್ಪು
* 1 ಚಮಚ ಬೆಣ್ಣೆ
-
ಬಾಜಿ ಮಾಡುವುದು ಹೇಗೆ?
1. ಒಂದು ಚಮಚ ಬೆಣ್ಣೆ ಅಥವಾ ಎಣ್ಣೆಯನ್ನು ಪ್ಯಾನ್‌ಗೆ ಹಾಕಿ ಬಿಸಿ ಮಾಡಿ.
2. ನಂತರ ಅರ್ಧ ಕಪ್ ಈರುಳ್ಳಿ ಹಾಕಿ ಅದು ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
3. ಈಗ 1 ಚಮಚ ಒಂದು ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್, 1 ಹಸಿ ಮೆಣಸಿನಕಾಯಿ ಹಾಕಿ, ಚೆನ್ನಾಗಿ ಫ್ರೈ ಮಾಡಿ.
4. ಈಗ 1-2 ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಬೇಯಿಸಿ, ಅರ್ಧ ಚಮಚ ಉಪ್ಪು ಸೇರಿಸಿ.
5. ಟೊಮೆಟೊ ಮೆತ್ತಗಾದ ಮೇಲೆ ಖಾರದ ಪುಡಿ, 1 ಚಮಚ ಪಾವ್ ಬಾಜಿ ಮಸಾಲ ಪುಡಿ ಹಾಕಿ.
6. ಮಿಶ್ರಣ ಹಸಿ ವಾಸನೆ ಹೋಗಲು ಎರಡು ನಿಮಿಷ ಫ್ರೈ ಮಾಡಿ.
7. ಈಗ ಬೇಯಿಸಿ, ಮ್ಯಾಶ್ ಮಾಡಿದ ತರಕಾರಿ ಹಾಕಿ.
8. ಮಿಶ್ರಣ ಸ್ವಲ್ಪ ಗ್ರೇವಿ ರೀತೊಯಾಗುವಷ್ಟು ನೀರು ಹಾಕಿ, ನಂತರ ಮಿಶ್ರಣ ಗಟ್ಟಿಯಾಗುವವರೆಗೆ 3-5 ನಿಮಿಷ ಬೇಯಿಸಿ.
9. ಈಗ ಕಸೂರಿ ಮೇತಿ ಹಾಕಿ, ನೀವು ಬಯಸಿದಷ್ಟು ಮಂದವಾಗುವವರೆಗೆ ಕುದಿಸಿ
ಪಾವ್ ಬಾಜಿ ಮಾಡುವುದು ಹೇಗೆ?
1. ಬನ್ ಸಮ ಅರ್ಧ ಭಾಗವಾಗಿ ಕತ್ತರಿಸಿ.
2. ಪ್ಯಾನ್‌ಗೆ ಬೆಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಓಪನ್ ಮಾಡಿದ ಬನ್ ಹಾಕಿ, ಪಾವ್ ಬಾಜಿ ಮಸಾಲ ಪುಡಿ ಉದುರಿಸಿ, ಟೋಸ್ಟ್ ಮಾಡಿ.
3. ನಂತರ ಅದನ್ನು ತೆಗೆದು ತಟ್ಟೆಗೆ ಹಾಕಿ ಮಸಾಲ ಹಾಕಿ, ನಿಂಬೆ ಹಣ್ಣು ಕತ್ತರಿಸಿ ಇಡಿ, ನಂತರ ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ ಅದರ ಮೇಲೆ ಉದುರಿಸಿದರೆ ಪಾವ್ ಬಾಜಿ ರೆಡಿ.
- ಸರ್ವ್ - 4
- ಕ್ಯಾಲೋರಿ: - 321Kcal
- ಕೊಬ್ಬು: - 13 ಗ್ರಾಂ
- ಕೊಲೆಸ್ಟ್ರಾಲ್: - 30ಮಿಗ್ರಾಂ
- ಸಕ್ಕರೆ: - 8 ಗ್ರಾಂ



Click it and Unblock the Notifications
