Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಸ್ಟ್ರಾಬೆರ್ರಿ ಮಿಲ್ಕ್ ಶೇಕ್ ತುಂಬಾ ರುಚಿಯಾಗಿ ಮಾಡುವುದು ಹೇಗೆ
ಸ್ಟ್ರಾಬೆರ್ರಿ ಮಿಲ್ಕ್ ಬಾಯಿಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. 'ನಾನು ಸ್ಟ್ರಾಬೆರ್ರಿ ಜ್ಯೂಸ್ ಮನೆಯಲ್ಲಿ ಟ್ರೈ ಮಾಡಿದೆ, ಆದರೆ ಅಷ್ಟು ಟೇಸ್ಟ್ ಬರಲಿಲ್ಲ' ಎಂದು ಕೆಲವರು ಹೇಳುವುದುಂಟು, ಆದರೆ ನೀವು ಜ್ಯೂಸ್ ಅಂಗಡಿಗಳಲ್ಲಿ ಸಿಗುವಷ್ಟೇ ರುಚಿಕರವಾದ ಸ್ಟ್ರಾಬೆರ್ರಿ ಜ್ಯೂಸ್ ಸವಿಯಬಹುದು. ಒಂದು ವೇಳೆ ನೀವು ಮಾಡುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸ ಆಗಿರಬಹುದು.

ನಾವಿಲ್ಲಿ ಸ್ಟ್ರಾಬೆರ್ರಿ ಮಿಲ್ಕ್ ಶೇಕ್ ತುಂಬಾ ರುಚಿಯಾಗಿ ಬರುವಂತೆ ಮಾಡುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:
Recipe By: Reena TK
Recipe Type: Juice
Serves: 3
-
ಬೇಕಾಗುವ ಸಾಮಗ್ರಿ
ಸ್ಟ್ರಾಬೆರ್ರಿ 250 ಗ್ರಾಂ
ಹಾಲು 2 ಕಪ್
ಸಕ್ಕರೆ 1 ಚಮಚ
ಐಸ್ಕ್ಯೂಬ್ಸ್ (optional)
ಐಸ್ಕ್ರೀಮ್ಸ್ (optional)
-
ಸ್ಟ್ರಾಬೆರ್ರಿ ಮಿಲ್ಕ್ ಶೇಕ್
* 20-22 ಸ್ಟ್ರಾಬೆರ್ರಿ ತೆಗೆದು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ,
* ನಂತರ ಅದರ ಸೊಪ್ಪು ಎಲ್ಲ ಬಿಡಿಸಿ, ಸ್ಟ್ರಾಬೆರ್ರಿಯನ್ನು ಕತ್ತರಿಸಿ.
* ಕತ್ತರಿಸಿದ ಸ್ಟ್ರಾಬೆರ್ರಿಯನ್ನು ಜ್ಯೂಸ್ ಬ್ಲೆಂಡರ್ನಲ್ಲಿ ಹಾಕಿ, ಒಮ್ಮೆ ತಿರುಗಿಸಿ.
* ನಂತರ 2 ಕಪ್ ಹಾಲು (ತಣ್ಣನೆಯ ಹಾಲು ಸೇರಿಸಬಹುದು) ಹಾಕಿ, ರುಚಿಗೆ ತಕ್ಕ ಸಕ್ಕರೆ ಸೇರಿಸಿ ಬ್ಲೆಂಡ್ ಮಾಡಿ. ಸ್ಟ್ರಾಬೆರ್ರಿ ತುಂಬಾ ರುಚಿಯಾಗಿದ್ದರೆ ಸಕ್ಕರೆ ಸ್ವಲ್ಪ ಸೇರಿಸಿ ಬ್ಲೆಂಡ್ ಮಾಡಿ.
*ಈಗ ಜ್ಯೂಸ್ ಗ್ಲಾಸ್ಗೆ ಸುರಿದು ಸವಿಯಿರಿ.
* ತುಂಬಾ ಬಿಸಿಲಿದ್ದಾಗ ತಣ್ಣನೆಯ ಜ್ಯೂಸ್ ಕುಡಿಯಬೇಕೆನಿಸಿದರೆ ಐಸ್ ಕ್ಯೂಬ್ಸ್ ಸೇರಿಸಬಹುದು.
* ಐಸ್ ಕ್ಯೂಬ್ಸ್ ಬದಲಿಗೆ ಒಂದು ಸ್ಕೂಪ್ ವೆನಿಲ್ಲಾ ಅಥವಾ ಸ್ಟ್ರಾಬೆರ್ರಿ ಐಸ್ಕ್ರೀಮ್ ಸೇರಿಸಿದರೆ ಸವಿಯಲು ಮತ್ತಷ್ಟು ರುಚಿಯಾಗಿರುತ್ತೆ.
- ಸ್ಟ್ರಾಬೆರ್ರಿ ಮಿಲ್ಕ್ ಬಾಯಿಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. 'ನಾನು ಸ್ಟ್ರಾಬೆರ್ರಿ ಜ್ಯೂಸ್ ಮನೆಯಲ್ಲಿ ಟ್ರೈ ಮಾಡಿದೆ, ಆದರೆ ಅಷ್ಟು ಟೇಸ್ಟ್ ಬರಲಿಲ್ಲ'
- People - 3
- Cal - 32
- Fat - 0.3 grams.
- Protein - 0.7 grams.
- Carbs - 7.7 grams.
- Sugar - 4.9 grams.
- Fiber - 2 grams.



Click it and Unblock the Notifications
