Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರೆಸಿಪಿ: ಮನೆಯಲ್ಲಿಯೇ ಸುಲಭದಲ್ಲಿ ಮಾಡಬಹುದು ಚಿಕನ್ ಕಲ್ಮಿ ಕಬಾಬ್
ಚಿಕನ್ ಕಲ್ಮಿ ಕಬಾಬ್ ಪ್ರಿಯರೇ ನೀವು? ಕಲ್ಮಿ ಟೇಸ್ಟ್ ಸವಿಯಬೇಕೆಂದು ಅನಿಸುತ್ತಿದೆಯೇ? ಹಾಗಾದರೆ ಮನೆಯಲ್ಲಿಯೇ ಏಕೆ ಟ್ರೈ ಮಾಡಬಾರದು. ನಿಮಗೆ ರೆಸ್ಟೋರೆಂಟ್ಗಳಲ್ಲಿ ಸಿಗುವ ರೀತಿಯಲ್ಲಿಯೇ ರುಚಿಕರವಾದ ಕಲ್ಮಿ ಮಾಡಬಹುದು.

ಅದಕ್ಕಾಗಿ ಪ್ರತ್ಯೇಕ ಉಪಕರಣಗಳು, ಕೆಂಡ ಇವೆಲ್ಲಾ ಏನೂ ಬೇಕಾಗಿಲ್ಲ, ನೀವು ಸ್ಟೀಮ್ ಮಾಡಿ ಕಲ್ಮಿ ರೆಡಿ ಮಾಡಬಹುದು. ಇಲ್ಲಿ ನಾವು ಕಲ್ಮಿ ಕಬಾಬ್ ಮಾಡುವುದು ಹೇಗೆ ಎಂಬ ರೆಸಿಪಿ ನೀಡಿದ್ದೇವೆ ನೋಡಿ:
Recipe By: Reena TK
Recipe Type: Kabab
Serves: 3
-
ಬೇಕಾಗುವ ಸಾಮಗ್ರಿ
ಚಿಕನ್ ಲೆಗ್ ಪೀಸ್ 5-6
ಖಾರದ ಪುಡಿ 2 ಚಮಚ
ಕೊತ್ತಂಬರಿ ಪುಡಿ 1 ಚಮಚ
ಅರಿಶಿಣ ಪುಡಿ /4 ಚಮಚ
ಗರಂ ಮಸಾಲ ಪುಡಿ 1/4 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
1 ಈರುಳ್ಳಿ ಪೇಸ್ಟ್ (ಬೇಕಾದರೆ ಮಾತ್ರ ಬಳಸಬಹುದು)
ರುಚಿಗೆ ತಕ್ಕ ಉಪ್ಪು
ನಿಂಬೆಹಣ್ಣು 1/2
-
ಮಾಡುವ ವಿಧಾನ:
1. ಅರ್ಧ ಚಮಚ ಖಾರದ ಪುಡಿ, ಅರ್ಧ ಚಮಚ ಕೊತ್ತಂಬರಿ ಪುಡಿ, ಉಪ್ಪು, ಸ್ವಲ್ಪ ಅರಿಶಿಣ ಪುಡಿ ಹಾಕಿ ಮಿಶ್ರ ಮಾಡಿ.
2. ಈ ಮಸಾಲೆ ಮಿಶ್ರಣವನ್ನು ಲೆಗ್ ಪೀಸ್ಗೆ ಹಾಕಿ ಸ್ಟೀಮ್ನಲ್ಲಿ 30 ನಿಮಿಷ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ಬೇಕಾದರೂ ಬೇಯಿಸಬಹುದು.
3. ನಂತರ ಬೆಂದ ಚಿಕನ್ ಪೀಸ್ ತೆಗೆದು ಒನದು ಪ್ಲೇಟ್ನಲ್ಲಿ ಹಾಕಿಡಿ. ಆ ಪ್ಲೇಟ್ಗೆ ಉಳಿದ ಮಸಾಲೆ ಮಿಶ್ರಣ ಹಾಕಿ ಸ್ವಲ್ಪ ನೀರು ಹಾಕಿ ಮಿಶ್ರ ಮಾಡಿ ನಂತರ ಲೆಗ್ಪೀಸ್ಗೆ ಮತ್ತೊಮ್ಮೆ ಹಚ್ಚಿ.
4. ತವಾ ಬಿಸಿ ಮಾಡಿ ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ ಅದರಲ್ಲಿ ಈ ಚಿಕನ್ ಲೆಗ್ ಪೀಸ್ 10 ನಿಮಿಷ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಇಷ್ಟು ಮಾಡಿದರೆ ಕಲ್ಮಿ ಕಬಾಬ್ ರೆಡಿ.
- *ಚಿಕನ್ ಕಲ್ಮಿ ಕಬಾಬ್ಗೆ ಕೊತ್ತಂಬರಿ ಅಥವಾ ಪುದೀನಾ ಚಟ್ನಿ ಬೆಸ್ಟ್ ಕಾಂಬಿನೇಷನ್ *ಮಕ್ಕಳಿಗೂ ಸ್ವಲ್ಪ ಕಡಿಮೆ ಹಾಕಿ ಮಾಡಿ ಕೊಡಬಹುದಾದ ರೆಸಿಪಿ
- ಸರ್ವ್ - 1 ಪೀಸ್
- ಕೊಬ್ಬು - 28ಗ್ರಾಂ
- ಪ್ರೊಟೀನ್ - 10.51ಗ್ರಾಂ
- ಕಾರ್ಬ್ಸ್ - 2.14ಗ್ರಾಂ



Click it and Unblock the Notifications
