ಖಾರ ಪೊಂಗಲ್ ರೆಸಿಪಿ

By: Divya Pandith
Subscribe to Boldsky

ಮಸಾಲೆ ಪೊಂಗಲ್ ಅಥವಾ ಖಾರಾ ಪೊಂಗಲ್ ಎಂದು ಕರೆಯಲಾಗುವ ಈ ತಿನಿಸು ದಕ್ಷಿಣ ಭಾರತೀಯರ ಭಕ್ಷ್ಯವಾಗಿದೆ. ಇದನ್ನು ವೆನ್ ಪೊಂಗಲ್ ಎಂದೂ ಸಹ ಕರೆಯುತ್ತಾರೆ. ಇದನ್ನು ಮುಖ್ಯವಾಗಿ ನೈವೇದ್ಯದ ತಿನಿಸನ್ನಾಗಿ ತಯಾರಿಸುತ್ತಾರೆ. ಮುಂಜಾನೆಯ ಉಪಹಾರ ಅಥವಾ ಮಧ್ಯಾಹ್ನದ ಊಟವನ್ನಾಗಿಯೂ ಸೇವಿಸುತ್ತಾರೆ. ಇದರಲ್ಲಿ ತುಪ್ಪದ ಪೊಂಗಲ್ ಸಾಮಾನ್ಯವಾದದ್ದು. ಬಾಯಲ್ಲಿ ಇಟ್ಟರೆ ಕರಗುವಂತಹ ಈ ತಿಸಿಸು ದಕ್ಷಿಣ ಭಾರತದವರ ಅಚ್ಚು ಮೆಚ್ಚಿನ ಉಪಹಾರಗಳಲ್ಲಿ ಒಂದು ಎಂದು ಹೇಳಬಹುದು.

ಮಸಾಲೆಯ ಪೊಂಗಲ್‍ಅನ್ನು ಬೇಯಿಸದ ಅನ್ನ ಹಾಗೂ ಹೆಸರು ಬೇಳೆಯ ಮಿಶ್ರಣದಿಂದ ಕೂಡಿರುತ್ತದೆ. ಇದರಲ್ಲಿ ಬೆರೆಸುವ ಮಸಾಲೆ ಮತ್ತು ತುಪ್ಪ ಇದರ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಹಬ್ಬ ಹರಿದಿನಗಳ ಸಮಯದಲ್ಲಿ ದೇವರ ನೈವೇದ್ಯಕ್ಕೆ ಬಹಳ ಸುಲಭವಾಗಿ ತಯಾರಿಸಬಹುದು. ಆರೋಗ್ಯಕ್ಕೆ ಉತ್ತಮವಾದ ಈ ತಿನಿಸನ್ನು ನೀವು ಸಹ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು. ನಿಮಗೂ ಈ ತಿನಿಸನ್ನು ತಯಾರಿಸಬೇಕು ಎನ್ನುವ ಆಸೆ ಇದ್ದರೆ ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ.

Spicy pongal recipe
ಖಾರಾ ಪೊಂಗಲ್ ರೆಸಿಪಿ| ಮಸಾಲೆಯುಕ್ತ ಪೊಂಗಲ್ ಪಾಕವಿಧಾನ | ಖಾರಾ ಪೊಂಗಲ್ ರೆಸಿಪಿ| ವೆನ್ ಪೊಂಗಲ್ ರೆಸಿಪಿ| ಪೊಂಗಲ್ ರೆಸಿಪಿ
ಖಾರಾ ಪೊಂಗಲ್ ರೆಸಿಪಿ| ಮಸಾಲೆಯುಕ್ತ ಪೊಂಗಲ್ ಪಾಕವಿಧಾನ | ಖಾರಾ ಪೊಂಗಲ್ ರೆಸಿಪಿ| ವೆನ್ ಪೊಂಗಲ್ ರೆಸಿಪಿ| ಪೊಂಗಲ್ ರೆಸಿಪಿ
Prep Time
10 Mins
Cook Time
25M
Total Time
35 Mins

Recipe By: ಕಾವ್ಯಶ್ರೀ ಎಸ್

Recipe Type: ಪ್ರಧಾನ ತಿನಿಸು

Serves: 2-3 ಮಂದಿಗೆ

Ingredients
 • ಹೆಸರು ಬೇಳೆ - 3/4 ಕಪ್

  ಅಕ್ಕಿ -3/4 ಕಪ್

  ಜೀರಿಗೆ -1 ಟೀ ಚಮಚ

  ಶುಂಠಿ- 1 ಇಂಚು (ತುರಿದಿರುವುದು)

  ಕರಿಬೇವು/ಒಗ್ಗರಣೆ ಸೊಪ್ಪು- 8-9

  ಹಸಿ ಮೆಣಸಿನ ಕಾಯಿ - 5-6

  ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು- 1/2 ಕಪ್

  ಕಾಳು ಮೆಣಸಿನ ಪುಡಿ -3/4 ಟೀ ಚಮಚ

  ಗೋಡಂಬಿ - 8-10

  ಅರಿಶಿನ ಪುಡಿ-3/4 ಕಪ್

  ಉಪ್ಪು- 3/4 ಟೇಬಲ್ ಚಮಚ

  ತುಪ್ಪ- 1, 1/4 ಟೇಬಲ್ ಚಮಚ

  ನೀರು - 6ಕಪ್+ 1ಕಪ್

Red Rice Kanda Poha
How to Prepare
 • 1. ಕುಕ್ಕರ್ ಪಾತ್ರೆಯಲ್ಲಿ ಅಕ್ಕಿಯನ್ನು ಹಾಕಿ.

  2. ಅದಕ್ಕೆ ಹೆಸರು ಬೇಳೆಯನ್ನು ಸೇರಿಸಿ, 3 ನಿಮಿಷಗಳ ಕಾಲ ಹುರಿಯಿರಿ.

  3. ಅದಕ್ಕೆ 6 ಕಪ್ ನೀರನ್ನು ಸೇರಿಸಿ.

  4. ಒಮ್ಮೆ ತಿರುವಿ, ನಂತರ ಮುಚ್ಚಳವನ್ನು ಮುಚ್ಚಿ.

  5. ಕುಕ್ಕರ್ 4-5 ಸೀಟಿ ಕೂಗಲು ಬಿಡಿ.

  6. ನಂತರ ಒಂದು ಪಾತ್ರೆಗೆ ತುಪ್ಪವನ್ನು ಹಾಕಿ, ಬಿಸಿ ಮಾಡಿ.

  7. ತುಪ್ಪ ಸಂಪೂರ್ಣವಾಗಿ ಕರಗಲಿ.

  8. ನಂತರ ಜೀರಿಗೆ ಮತ್ತು ಕರಿಬೇವಿನ ಎಲೆ ಸೇರಿಸಿ.

  9. ತುರಿದುಕೊಂಡ ಶುಂಠಿ ಮತ್ತು ಸೀಳಿಕೊಂಡ ಹಸಿಮೆಣಸಿನ ಕಾಯಿಯನ್ನು ಸೇರಿಸಿ.

  10. ಒಮ್ಮೆ ಚೆನ್ನಾಗಿ ತಿರುವಿ.

  11. ಕಾಳು ಮೆಣಸಿನ ಪುಡಿ ಮತ್ತು ಗೋಡಂಬಿಯನ್ನು ಸೇರಿಸಿ.

  12. ನಂತರ ಅರಿಶಿನವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

  13. ಬೇಯಿಸಿಕೊಂಡ ಅನ್ನ ಮತ್ತು ಬೇಳೆಯನ್ನು ಸೇರಿಸಿ.

  14. ಒಂದು ಕಪ್ ನೀರನ್ನು ಸೇರಿಸಿ, ಎಲ್ಲಾ ಸಾಮಾಗ್ರಿಗಳು ಹೊಂದಿಕೊಳ್ಳುವಂತೆ ಚೆನ್ನಾಗಿ ಮಿಶ್ರಗೊಳಿಸಿ.

  15. 5 ನಿಮಿಷಗಳ ಕಾಲ ಬೇಯಲು ಬಿಡಿ.

  16. ಹೆಚ್ಚಿಕೊಂಡ ಕೊತ್ತಂಬರಿಸೊಪ್ಪನ್ನು ಸೇರಿಸಿ, ಮಿಶ್ರಗೊಳಿಸಿ.

  17. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಮಿಶ್ರಗೊಳಿಸಿ.

  18. ಉರಿಯಿಂದ ಕೆಳಗಿಳಿಸಿ. ಒಂದು ಬೌಲ್‍ಗೆ ವರ್ಗಾಯಿಸಿ.

  19. ಬಿಸಿ ಇರುವಾಗಲೆ ಸವಿಯಲು ನೀಡಿ.

Instructions
 • 1. ಅಕ್ಕಿಯನ್ನು ತೊಳೆದುಕೊಳ್ಳಲು ಮರೆಯದಿರಿ.
 • 2. ಕಾಳು ಮೆಣಸು ಅಥವಾ ಕಾಳು ಮೆಣಸಿನ ಪುಡಿ ಎರಡರಲ್ಲಿ ಯಾವುದನ್ನಾದರೂ ಬಳಸಬಹುದು.
 • 3. ಮಸಾಲೆ ಹುರಿಯಲು ತುಪ್ಪವನ್ನು ಬಳಸಿದರೆ ರುಚಿ ದ್ವಿಗುಣಗೊಳ್ಳುತ್ತದೆ.
 • 4. ಪೊಂಗಲ್‍ನ ಹೆಚ್ಚು ಮೃದುವಾಗಲು ನೀರನ್ನು ಬಳಸಬೇಕು.
 • 5. ಈ ತಿನಿಸನ್ನು ಸವಿಯಲು ತೆಂಗಿನಕಾಯಿ ಚಟ್ನೆಯನ್ನು ಬಳಸಬಹುದು.
Nutritional Information
 • ಬಡಿಸುವ ಪ್ರಮಾಣ - 1 ಬೌಲ್
 • ಕ್ಯಾಲೋರಿ - 263.6 ಕ್ಯಾಲ್
 • ಕೊಬ್ಬು - 15.9 ಗ್ರಾಂ.
 • ಪ್ರೋಟೀನ್ - 5.9 ಗ್ರಾಂ.
 • ಕಾರ್ಬೋಹೈಡ್ರೇಟ್ - 24.3 ಗ್ರಾಂ.
 • ಸಕ್ಕರೆ - 1.8
 • ಫೈಬರ್ - 0.4

ಹಂತ ಹಂತವಾದ ಚಿತ್ರವಿವರಣೆ

1. ಕುಕ್ಕರ್ ಪಾತ್ರೆಯಲ್ಲಿ ಅಕ್ಕಿಯನ್ನು ಹಾಕಿ.

Spicy pongal recipe

2. ಅದಕ್ಕೆ ಹೆಸರು ಬೇಳೆಯನ್ನು ಸೇರಿಸಿ, 3 ನಿಮಿಷಗಳ ಕಾಲ ಹುರಿಯಿರಿ.

Spicy pongal recipe
Spicy pongal recipe

3. ಅದಕ್ಕೆ 6 ಕಪ್ ನೀರನ್ನು ಸೇರಿಸಿ.

Spicy pongal recipe

4. ಒಮ್ಮೆ ತಿರುವಿ, ನಂತರ ಮುಚ್ಚಳವನ್ನು ಮುಚ್ಚಿ.

Spicy pongal recipe
Spicy pongal recipe

5. ಕುಕ್ಕರ್ 4-5 ಸೀಟಿ ಕೂಗಲು ಬಿಡಿ.

Spicy pongal recipe

6. ನಂತರ ಒಂದು ಪಾತ್ರೆಗೆ ತುಪ್ಪವನ್ನು ಹಾಕಿ, ಬಿಸಿ ಮಾಡಿ.

Spicy pongal recipe

7. ತುಪ್ಪ ಸಂಪೂರ್ಣವಾಗಿ ಕರಗಲಿ.

Spicy pongal recipe

8. ನಂತರ ಜೀರಿಗೆ ಮತ್ತು ಕರಿಬೇವಿನ ಎಲೆ ಸೇರಿಸಿ.

Spicy pongal recipe
Spicy pongal recipe

9. ತುರಿದುಕೊಂಡ ಶುಂಠಿ ಮತ್ತು ಸೀಳಿಕೊಂಡ ಹಸಿಮೆಣಸಿನ ಕಾಯಿಯನ್ನು ಸೇರಿಸಿ.

Spicy pongal recipe
Spicy pongal recipe

10. ಒಮ್ಮೆ ಚೆನ್ನಾಗಿ ತಿರುವಿ.

Spicy pongal recipe

11. ಕಾಳು ಮೆಣಸಿನ ಪುಡಿ ಮತ್ತು ಗೋಡಂಬಿಯನ್ನು ಸೇರಿಸಿ.

Spicy pongal recipe
Spicy pongal recipe

12. ನಂತರ ಅರಿಶಿನವನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

Spicy pongal recipe
Spicy pongal recipe

13. ಬೇಯಿಸಿಕೊಂಡ ಅನ್ನ ಮತ್ತು ಬೇಳೆಯನ್ನು ಸೇರಿಸಿ.

Spicy pongal recipe

14. ಒಂದು ಕಪ್ ನೀರನ್ನು ಸೇರಿಸಿ, ಎಲ್ಲಾ ಸಾಮಾಗ್ರಿಗಳು ಹೊಂದಿಕೊಳ್ಳುವಂತೆ ಚೆನ್ನಾಗಿ ಮಿಶ್ರಗೊಳಿಸಿ.

Spicy pongal recipe
Spicy pongal recipe

15. 5 ನಿಮಿಷಗಳ ಕಾಲ ಬೇಯಲು ಬಿಡಿ.

Spicy pongal recipe

16. ಹೆಚ್ಚಿಕೊಂಡ ಕೊತ್ತಂಬರಿಸೊಪ್ಪನ್ನು ಸೇರಿಸಿ, ಮಿಶ್ರಗೊಳಿಸಿ.

Spicy pongal recipe
Spicy pongal recipe

17. ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಮಿಶ್ರಗೊಳಿಸಿ.

Spicy pongal recipe
Spicy pongal recipe

18. ಉರಿಯಿಂದ ಕೆಳಗಿಳಿಸಿ. ಒಂದು ಬೌಲ್‍ಗೆ ವರ್ಗಾಯಿಸಿ.

Spicy pongal recipe

19. ಬಿಸಿ ಇರುವಾಗಲೆ ಸವಿಯಲು ನೀಡಿ.

Spicy pongal recipe
Spicy pongal recipe
[ 5 of 5 - 31 Users]
Story first published: Monday, January 15, 2018, 13:36 [IST]
Subscribe Newsletter