Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಈ ಕಬಾಬ್ ರೆಸಿಪಿ ತುಂಬಾ ಸರಳ, ಟೇಸ್ಟ್ ಸೂಪರ್!
ಲಾಕ್‌ಡೌನ್ ಮುಂದುವರೆದಿದೆ, ಜನರಿಗೆ ಮನೆಯಲ್ಲಿ ಕೂತು ಬೇಜಾರಾಗಿದೆ. ಏನಾದರೂ ರುಚಿಕರ ತಿನ್ನೋಣ ಅಂದ್ರೆ ಹೋಟೆಲ್‌ಗಳು ಬಂದ್. ಆನ್‌ಲೈನ್ ಫುಡ್ ಡೆಲಿವರಿ ಇದ್ದರೂ ಹೊರಗಡೆಯಿಂದ ಫುಡ್ ತರಿಸಿ ತಿನ್ನಕ್ಕೂ ಭಯ. ದಿನಸಿ ಸಾಮಾನುಗಳು, ಚಿಕನ್ ಕೆಲವಡೆ ಮೀನು ದೊರೆಯುತ್ತಿವೆ.

ನಾಳೆ ಈಸ್ಟರ್ ಹಬ್ಬದ ಆಚರಣೆ ಇದೆ. ಈಸ್ಟರ್ ಹಬ್ಬದಂದು ಅನೇಕ ರುಚಿಯ ತಿನಿಸುಗಳನ್ನು ಮಾಡಲಾಗುವುದು. ಈ ಬಾರಿ ಹೆಚ್ಚಿನ ಸಂಭ್ರಮ ಇಲ್ಲದಿದ್ದರೂ ಸರಳವಾಗಿ ಮನೆಯಲ್ಲಿಯೇ ಆಚರಿಸಬಹುದು. ಇಲ್ಲಿ ನಾವು ಚಿಕನ್ ಬಳಸಿ ಮಾಡುವ ಸರಳವಾದ ಆದರೆ ರುಚಿಕರವಾದ ಕಬಾಬ್ ರೆಸಿಪಿ ನೀಡಿದ್ದೇವೆ.
ಇನ್ನು ಅಡುಗೆ ಮಾಡಲು ಬರಲ್ಲ ಅನ್ನುವವರು ಕೂಡ ಈ ಚಿಕನ್ ರೆಸಿಪಿ ಟ್ರೈ ಮಾಡಿ ಸವಿಯಬಹುದು, ಅಷ್ಟೊಂದು ಸರಳವಾಗಿದೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Nonveg
Serves: 4
-
ಬೇಕಾಗುವ ಸಾಮಗ್ರಿ
ಚಿಕನ್ 1/2 ಕೆಜಿ
ಜೀರಿಗೆ ಪುಡಿ 1 ಚಮಚ
3-4 ಬೆಳ್ಳುಳ್ಳಿ , ಒಂದು ಚಿಕ್ಕ ಈರುಳ್ಳಿ, ಸ್ವಲ್ಪ ಶುಂಠಿ, 3 ಹಸಿ ಮೆಣಸಿನಕಾಯಿ (ಪೇಸ್ಟ್ ಮಾಡಿ)
ಅರ್ಧ ಚಮಚ ಖಾರದ ಪುಡಿ
ಅರ್ಧ ಚಮಚ ಕೊತ್ತಂಬರಿ ಪುಡಿ
ಅರ್ಧ ಚಮಚ ಜೋಳದ ಹಿಟ್ಟು
ಚಿಟಿಕೆಯಷ್ಟು ಅರಿಶಿಣ ಪುಡಿ
1 ಮೊಟ್ಟೆಯ ಬಿಳಿ
ಉಪ್ಪು
1 ಕಪ್ ಎಣ್ಣೆ
-
ಮಾಡುವ ವಿಧಾನ:
* ಚಿಕನ್ ಚೆನ್ನಾಗಿ ತೊಳೆದು ಅದನ್ನು ನೀರು ಸೋಸಿ ಹೋಗುವ ಪಾತ್ರೆಯಲ್ಲಿ ಹಾಕಿಡಿ.
* ಒಂದು ಬೌಲ್‌ಗೆ ಮಸಾಲೆ ಪೇಸ್ಟ್, ಖಾರದ ಪುಡಿ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ಅರಿಸಿಣ ಪುಡಿ, ಉಪ್ಪು, ಜೋಳದ ಹಿಟ್ಟು ಹಾಕಿ, ಮೊಟ್ಟೆಯ ಬಿಳಿ ಹಾಕಿ ಮಿಶ್ರ ಮಾಡಿ.
* ಈಗ ಚಿಕನ್ ಅನ್ನು ಮಸಾಲೆಗೆ ಹಾಕಿ ಮಿಶ್ರ ಮಾಡಿ ಫ್ರಿಡ್ಜ್‌ನಲ್ಲಿ ಎರಡು ಗಂಟೆ ಇಡಿ.
* ನಂತರ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾಯುವಾಗ ಅದರಲ್ಲಿ ಹಾಕಿ ಚಿಕನ್ ಬೆಂದ ಮೇಲೆ ತೆಗೆದು, ಅದನ್ನು ಒಂದು ತಟ್ಟೆಯಲ್ಲಿ ಹಾಕಿ ಸ್ವಲ್ಪ ನಿಂಬೆರಸ ಹಿಂಡಿದರೆ ರುಚಿಕರವಾದ ಕಬಾಬ್ ರೆಡಿ.
- ಅಡುಗೆ ಬರಲ್ಲ ಅನ್ನುವವರು ಕೂಡ ಟ್ರೈ ಮಾಡಬಹುದು.
- ಕ್ಯಾಲೋರಿ - 34.3ಕ್ಯಾ.
- ಪ್ರೊಟೀನ್ - 6.4



Click it and Unblock the Notifications
