Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಈ ರೀತಿಯ ಆಮ್ಲೆಟ್ ಟೇಸ್ಟ್ ಮಾಡಿದ್ದೀರಾ? ತೂಕ ಇಳಿಕೆಯ ಡಯಟ್ನಲ್ಲಿರುವವರೆಗೆ ಬ್ರೇಕ್ಫಾಸ್ಟ್ಗೆ ಇದು ಮಾತ್ರ ಸಾಕು
ನಿಮಗೆ ಆಮ್ಲೆಟ್ ಗೊತ್ತಿರಬಹುದು, ಆದರೆ ಈ ರೀತಿ ಆಮ್ಲೆಟ್ ಟ್ರೈ ಮಾಡಿದ್ದಾರಾ? ಅದರಲ್ಲಿಯೂ ಬೆಳಗ್ಗಿನ ಬ್ರೇಕ್ಫಾಸ್ಟ್ಗೆ ಹೇಳಿ ಮಾಡಿಸಿದ ಆಮ್ಲೆಟ್, ಇ ಆಮ್ಲೆಟ್ ಒಂದು ಇದ್ದರೆ ಸಾಕು ಮತ್ತೇನೂ ಬೇಕಾಗಿಲ್ಲ, ಹೊಟ್ಟೆ ತುಂಬುತ್ತೆ, ಬೆಸ್ಟ್ ಡಯಟ್ ಫುಡ್ ಇದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಚಮಚ ತೆಂಗಿನೆಣ್ಣೆ ಅಥವಾ ಆಲೀವ್ ಎಣ್ಣೆ
1 ಈರುಳ್ಳಿ
200 ಗ್ರಾಂ ಸಿಹಿ ಗೆಣಸು
200 ಗ್ರಾಂ ಕ್ಯಾರೆಟ್
1 ಬೆಳ್ಳುಳ್ಳಿ
1 ಚಮಚ ಜೀರಿಗೆ ಪುಡಿ
2 ಚಮಚ ಪಾರ್ಸಲೆ
ಸ್ವಲ್ಪ ಕಡ್ಲೆ (ಬೇಯಿಸಿದ್ದು)
1/2 ಚಮಚ ಕರಿ ಮೆಣಸಿನ ಪುಡಿ
1/4 ಚಮಚ ಉಪ್ಪು
ಮೊಟ್ಟೆ 4
ಮಾಡುವ ವಿಧಾನ:
- ಪ್ಯಾನ್ಗೆ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಅದರಲ್ಲಿ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಫ್ರೈ ಮಾಡಿ.
- ನಂತರ ಚಿಕ್ಕದಾಗಿ ಕತ್ತರಿಸಿದ ತೆರಕಾರಿ ಸೇರಿಸಿ, ತರಕಾರಿಗಳು ಸ್ವಲ್ಪ ಮೆತ್ತಗಾಗುವವರೆಗೆ ಸ್ವಲ್ಪ ಮತ್ತೆಗಾಗುವವರೆಗೆ ಬೇಯಿಸಿ.
- ನಂತರ ಜೀರಿಗೆ ಪುಡಿ, ಪಾರ್ಸ್ಲೆ, ಬೇಯಿಸಿ ಕಡ್ಲೆ ಹಾಕಿ ಮತ್ತೆ 5 ನಿಮಿಷ ಬೆಯಿಸಿ
- ಈಗ ಒಂದು ಬೌಲ್ಗೆ ಮೊಟ್ಟೆಯನ್ನು ಒಡೆದು ಹಾಕಿ, ಅದಕ್ಕೆ ಉಪ್ಪು, ಕರಿ ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕದಡಿ, ನಂತರ ಅದನ್ನು ಮಿಶ್ರಣಕ್ಕೆ ಹಾಕಿ ಬೆಯಿಸಿ, ನಂತರ ಮಗುಚಿ ಹಾಕಿ ಮತ್ತೆ 3-4 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ
- ಇಷ್ಟು ಮಾಡಿದರೆ ಮೊಟ್ಟೆ ಆಮ್ಲೆಟ್ ರೆಡಿ.
ಮೊಟ್ಟೆ ಆಮ್ಲೆಟ್ ಇದು ಒಮದು ತಿಂದರೆ ಸಾಕು ಹೊಟ್ಟೆ ತುಂಬುವುದು, ಅಲ್ಲದೆ ಡಯಟ್ ಮಾಡುವವರೆಗೆ ಈ ಆಮ್ಲೆಟ್ ತುಂಬಾನೇ ಒಳ್ಳೆಯದು.
ಬ್ರೇಕ್ಫಾಸ್ಟ್ಗೆ ಈ ಆಮ್ಲೆಟ್ ಸೇವಿಸುವುದರಿಂದ ದೊರೆಯುವ ಪ್ರಯೋಜನಗಳು:
ಬ್ರೇಕ್ಫಾಸ್ಟ್ಗೆ ನಾವು ಬೆಳಗ್ಗೆ ಮೊಟ್ಟೆ ಅಥವಾ ಮೊಟ್ಟೆಯ ಆಮ್ಲೆಟ್ ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ಪ್ರೊಟೀನ್ ಅಧಿಕವಿರುತ್ತದೆ, ದೇಹದಲ್ಲಿ ಶಕ್ತಿಯನ್ನು ತುಂಬುವುದು, ಒಂದು ಮೊಟ್ಟೆಯಲ್ಲಿ 6.3 ಗ್ರಾಂ ಪ್ರೊಟೀನ್ ಅಂಶವಿರುತ್ತದೆ.
ಆಮ್ಲೆಟ್ ತಿಂದಾಗ ಹೊಟ್ಟೆ ಕೂಡ ತುಂಬುವುದು
ಬೆಳಗ್ಗೆ ಬೇರೆ-ಬೇರೆ ಅಡುಗೆ ಮಾಡಿಕೊಮಡು ಇರಲು ಸಮಯವಿಲ್ಲ, ದೇಹಕ್ಕೆ ಆರೋಗ್ಯಕರ
ಆಹಾರ ಬೇಕೆಂದು ಬಯಸುವುದಾದರೆ ಈ ರೀತಿ ಆಮ್ಲೆಟ್ ಮಾಡಿ ಸೇವಿಸಬಹುದು. 4 ಮೊಟ್ಟೆ
ಹಾಕಿ ಮಾಡಿದರೆ ಇಬ್ಬರು ಸೇವಿಸಬಹುದು.
ಇಡೀ ದಿನ ಚಟುವಟಿಕೆಯಿಂದ ಇರಲು ಸಾಧ್ಯವಾಗುವುದು
ಬೆಳಗ್ಗೆ ನಾವು ದೇಹಕ್ಕೆ ಶಕ್ತಿಯನ್ನು ತುಂಬುವ ಆಹಾರ ಸೇವಿಸಬೇಕು, ಬೆಳಗ್ಗೆ ಏನೂ
ತಿನ್ನದೆ ಇದ್ದರೆ ಇಡೀ ದಿನ ಕೆಲಸ ಮಾಡುವಾಗ ಒಂಥರಾ ಆಯಾಸ ಉಂಟಾಗುವುದು, ಹಾಗಾಗಿ
ಬೆಳಗ್ಗೆ ಉಪವಾಸ ಇರಲೇಬೇಡಿ. ಈ ರೀತಿ ಆಮ್ಲೆಟ್ ಮಾಡಿ ಸೇವಿಸಿದರೆ ತೂಕ
ಹೆಚ್ಚಾಗುವ ಭಯವೂ ಇಲ್ಲ, ದಿನವಿಡೀ ಲವಲವಿಕೆಯಿಂದ ಇರಬಹುದು.
ಮೆದುಳಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಬೆಳಗ್ಗೆ ಆಮ್ಲೆಟ್ ಸೇವನೆ ಮಾಡುವುದರಿಂದ ಮೆದುಳು ಚುರುಕಾಗಿರುತ್ತದೆ, ಬೆಳಗ್ಗೆ
ಏನೂ ತಿನ್ನದೆ ಉಪವಾಸವಿದ್ದರೆ ಮರೆವು ಸಮಸ್ಯೆ ಕಾಡುವುದು ಎಂದು ಸಂಶೋಧನೆ
ಹೇಳುತ್ತದೆ, ಅದೇ ಬೆಳಗ್ಗೆ ನಿಮ್ಮ ಡಯಟ್ನಲ್ಲಿ ಆಮ್ಲೆಟ್ ಸೇರಿಸಿದರೆ ಜ್ಞಾಪಕ
ಶಕ್ತಿಗೆ ತುಂಬಾ ಒಳ್ಳೆಯದು.
ಅದರ ಹಳದಿ ಸಹಿತ ತಿನ್ನಿ
ಕೆಲವರು ಹಳದಿ ತಿನ್ನಲ್ಲ, ಆದರೆ ನಿಮಗೆ ಮೊಟ್ಟೆಯ ಸಂಪೂರ್ಣ ಪ್ರಯೋಜನ
ಸಿಗಬೇಕೆಂದರೆ ನೀವು ಹಳದಿ ಸಹಿತ ತಿನ್ನಬೇಕು, ಹಾಗಾಗಿ ಹಳದಿಯನ್ನು
ಬಿಸಾಡಬೇಡಿ.



Click it and Unblock the Notifications