Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಪೂರಿಗೆ ನೀವು ಈ ಸ್ಪೆಷಲ್ ಮಸಾಲೆ ಸೇರಿಸಿ ಧಮ್ ಆಲು ಮಾಡಿ ನೋಡಿ, ಅಷ್ಟು ಸೂಪರ್ ಆಗಿರುತ್ತೆ
ಸಾಮಾನ್ಯವಾಗಿ ಪೂರಿಗೆ ಸಾಗು, ಆಲೂಗಡ್ಡೆಯಿಂದ ಸರಳ ಗೊಜ್ಜು ಅಂತ ತಯಾರಿಸುವ ಬದಲಿಗೆ ಆಲೂಧಮ್ ಒಮ್ಮೆ ಟ್ರೈ ಮಾಡಿ ನೋಡಿ, ಇದಕ್ಕೆ ನೀವು ಚಿಕ್ಕ ಆಲೂಗಡ್ಡೆ ಬರುತ್ತದೆ ಅಲ್ವಾ (ಬೇಬಿ ಪೊಟೆಟೊ) ಅದನ್ನು ಬಳಸಿ, ಬನ್ನಿ ಈ ಆಲೂಧಮ್ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಮೊದಲಿಗೆ ಮಸಾಲೆ ಸಾಮಗ್ರಿ
ಒಂದು ಇಂಚಿನಷ್ಟು ದೊಡ್ಡ ಚಕ್ಕೆ
ಏಲಕ್ಕಿ 3-4
ಲವಂಗ 3-4
ಪೂರಿ ಮಾಡಲು
ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟು 1 ಕಪ್ (ಎರಡೂ ಮಿಕ್ಸ್ ಮಾಡಿಯೂ
ಮಾಡಬಹುದು, ನಿಮ್ಮ ಆಯ್ಕೆಗೆ ಬಿಟ್ಟದ್ದು)
ತುಪ್ಪ 1 ಚಮಚ
ಉಪ್ಪು 1/ 2 ಚಮಚ (ರುಚಿ ನೋಡಿ ಮತ್ತೆ ಸೇರಿಸಬಹುದು)
ನೀರು 1/ 2ಕಪ್
ಎಣ್ಣೆ (ಫ್ರೈ ಮಾಡಲು)
ಚಿಕ್ಕ ಆಲೂಗಡ್ಡೆ
ಎಣ್ಣೆ 2-3 ಚಮಚ
ಪಲಾವ್ ಎಲೆ 2 ಜೀರಿಗೆ 1 ಚಮಚ
ಹಸಿ ಮೆಣಸಿನಕಾಯಿ 3-4(ಖಾರ ಇಷ್ಟಪಡುವವರು ಆದರೆ ಇನ್ನೂ ಹೆಚ್ಚಿನ ಹಸಿ ಮೆಣಸು
ಬಳಸಬಹುದು)
ಈರುಳ್ಳಿ 1
ಶುಂಠಿ (ಚಿಕ್ಕದಾಗಿ ಕತ್ತರಿಸಿದ್ದು 1 ಚಮಚ)
ಬೆಳ್ಳುಳ್ಳಿ ಪೇಸ್ಟ್ 1 ಚಮಚ
2 ಟೊಮೆಟೊ (ಪೇಸ್ಟ್ ಮಾಡಿ)
ರುಚಿಗೆ ತಕ್ಕ ಉಪ್ಪು
ಖಾರದ ಪುಡಿ 1/2 ಚಮಚ ಅಥವಾ 1ಚಮಚ (ನಿಮ್ಮ ಖಾರಕ್ಕೆ ತಕ್ಕಂತೆ)
ಸ್ವಲ್ಪ ಅರಿಶಿಣ ಪುಡಿ 1/2 ಚಮಚ
ಜೀರಿಗೆ ಪುಡಿ 1 ಚಮಚ
ಕೊತ್ತಂಬರಿ 1 ಚಮಚ
ನೀರು 1/2 ಕಪ್
ತುಪ್ಪ 1/2 ಚಮಚ
ಮಾಡುವುದು ಹೇಗೆ?
ಸ್ಟೆಪ್ 1:ಸ್ಪೆಷಲ್ ಮಸಾಲೆ ರೆಸಿಪಿ
ನೀವು ಚಕ್ಕೆ, ಲವಂಗ, ಏಲಕ್ಕಿ ಇವುಗಳನ್ನು ರೋಸ್ಟ್ ಮಾಡಿ ನಂತರ ಮಿಕ್ಸಿಯಲ್ಲಿ
ಹಾಕಿ ರುಬ್ಬಿಕೊಳ್ಳಿ.
(ಈ ಮಸಾಲೆ ಮಿಕ್ಸ್ ಆಲೂಧಮ್ನ ರುಚಿ ತುಂಬಾನೇ ಹೆಚ್ಚಿಸುತ್ತದೆ)
ಸ್ಟೆಪ್ 2: ಪೂರಿಗೆ ಹಿಟ್ಟು ಕಲೆಸಿ
ಈಗ ಒಂದು ಬೌಲ್ಗೆ ಹಿಟ್ಟು ಹಾಕಿ, ಅದಕ್ಕೆ ಸ್ವಲ್ಪ ಉಪ್ಪು, ತಪ್ಪ ಸೇರಿಸಿ, ಸ್ವಲ್ಪ ಬಿಸಿ ನೀರು ಹಾಕಿ ಮಿಕ್ಸ್ ಮಾಡಿ, ರೊಟ್ಟಿಗೆ ಕಲೆಸುತ್ತೇವೆ ಅಲ್ವಾ ಅದೇ ರೀತಿ ಕಲೆಸಿ ಒಂದು ಬಟ್ಟೆಯಲ್ಲಿ ಮುಚ್ಚಿ 15-20 ನಿಮಿಷ ಬಿಡಬೇಕು.
ಸ್ಟೆಪ್ 3:
ಈಗ ಬೇಯಿಸಿದ ಚಿಕ್ಕ ಆಲೂಗಡ್ಡೆಯ ಸಿಪ್ಪೆ ಸುಲಿಯಿರಿ, ನಂತರ ಫೋರ್ಕ್ ಅಥವಾ ಚಿಕ್ಕ
ಕಡ್ಡಿಯಿಂದ ಚುಚ್ಚಿ
ಒಂದು ತಟ್ಟೆಯಲ್ಲಿ ಇಡಿ.
ಸ್ಟೆಪ್ 4: ನೀವೀಗ ದಪ್ಪ ತಳವಿರುವ ಸಾರಿನ ಪಾತ್ರೆ ಬಿಸಿ
ಮಾಡಿ ಅದಕ್ಕೆ 2 ಚಮಚ ಎಣ್ಣೆ ಹಾಕಿ
ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ, ಜೀರಿಗೆ ಚಟ್ಪಟ್ ಅಂತ ಶಬ್ದ ಬರುವಾಗ ನೀವು
ಪಲಾವ್ ಎಲೆ ಹಾಕಿ, ಹಸಿ ಮೆಣಸಿನ ಕಾಯಿ ಸೇರಿಸಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್
ಸೇರಿಸಿ, ನಂತರ ಸ್ವಲ್ಪ ಸಕ್ಕರೆ ಹಾಕಿ, ಬಳಿಕ ಈರುಳ್ಳಿ ಪೇಸ್ಟ್ ಸೇರಿಸಿ 2-3
ನಿಮಿಷ ಫ್ರೈ ಮಾಡಿ.
ಆ ಪೇಸ್ಟ್ ಸ್ವಲ್ಪ ಕಂದು ಬಣ್ಣಕ್ಕೆ ಬರುತ್ತದೆ. ನಂತರ ಟೊಮೆಟೊ ಪೇಸ್ಟ್ ಹಾಕಿ ಮತ್ತೆ 5-6 ನಿಮಿಷ ಕುದಿಸಿ, ಬಳಿಕ ಜೀರಿಗೆ ಪುಡಿ, ಖಾರದ ಪುಡಿ, ಅರಿಶಿಣ ಪುಡಿ ಸೇರಿಸಿ, ಮತ್ತೆ 4-5 ನಿಮಿಷ ಬೇಯಿಸಿ. ಹೀಗೆ ಬೇಯಿಸುವಾಗ ಸ್ವಲ್ಪ ಉಪ್ಪು ಸೇರಿಸಿ, ರುಬ್ಬಿಟ್ಟ ಆ ಸ್ಪೆಷಲ್ ಗರಂ ಮಸಾಲೆ ಸೇರಿಸಿ, ನಂತರ ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಸೇರಿಸಿ, ರುಚಿಗೆ ತಕ್ಕ ಉಪ್ಪು ಸೆರಿಸಿ, ಬಳಿಕ ಬೇಯಿಸಿಟ್ಟ ಚಿಕ್ಕ ಆಲೂಗಡ್ಡೆ ಸೇರಿಸಿ ಪಾತ್ರೆಯ ಬಾಯಿ ಮುಚ್ಚಿ 5 ನಿಮಿಷ ಕುದಿಸಿ, ಬಳಿಕ ಉಪ್ಪು, ಖಾರ ಎಲ್ಲಾ ಸರಿಯಾಗಿದೆಯೇ ನೋಡಿ ನಂತರ ಉರಿಯಿಂದ ಇಳಿಸಿ, ಅರ್ಧ ಚಮಚ ತುಪ್ಪ ಸೇರಿಸಿ, ಪಾತ್ರೆಯ ಬಾಯಿ ಮುಚ್ಚಿಡಿ.
ಸ್ಟೆಪ್ 5
ಈಗ ಹಿಟ್ಟಿನಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ಕಟ್ಟಿ,
ನಂತರ ಪೂರಿ ಮಾಡಿ
ಈಗ ರೆಡಿಯಾದ ಪೂರಿಯನ್ನು ಧಮ್ಆಲೂ ಜೊತೆಗೆ ಸರ್ವ್ ಮಾಡಿ, ಇವೆರಡರ ಕಾಂಬಿನೇಷನ್
ಇದೆಯಲ್ಲಾ ತುಂಬಾನೇ ಸೂಪರ್ ಆಗಿರುತ್ತದೆ.



Click it and Unblock the Notifications