Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಾಮೂಲಿಗಿಂತ ವೆರೈಟಿ ಚಿಕನ್ ಟ್ರೈ ಮಾಡಬೇಕೆನ್ನುವವರಿಗೆ ಈ ಚಿಕನ್ ಗ್ರೇವಿ ರೆಸಿಪಿ
ಚಿಕನ್ ಗ್ರೇವಿಯಲ್ಲಿ ಹಲವಯ ವೆರೈಟಿ ಮಾಡುತ್ತೇನೆ, ಇನ್ನೂ ಸ್ಪೆಷಲ್ ಮಾಡಬೇಕೆಂದು ಬಯಸುವವರು ಈ ಚಿಕನ್ ಗ್ರೇವಿ ಟ್ರೈ ಮಾಡಬಹುದು. ಇದೊಂದು ಹೈದರಾಬಾದ್ ಶೈಲಿಯ ರೆಸಿಪಿಯಾಗಿದೆ, ಆದರೆ ಸಾಸ್ ಎಲ್ಲಾ ಸೇರಿಸಿ ಇದರ ರುಚಿ ಮತ್ತಷ್ಟು ಸ್ಪೆಷಲ್ ಆಗಿಸಿದ ರೆಸಿಪಿ ಇದಾಗಿದೆ. ಇದುವರೆಗೆ ನೀವು ಮಾಡಿರುವ ಚಿಕನ್ ಗ್ರೇವಿಗಿಂತ ಭಿನ್ನ ರುಚಿಯ, ಯಾವ ಸ್ಟಾರ್ ಹೋಟಲ್‌ಗಳಲ್ಲಿ ಸಿಗುವ ಗ್ರೇವಿಗಿಂತ ಕಡಿಮೆಯಿರದ ಈ ಈ ಚಿಕನ್ ಗ್ರೇವಿ ಮಾಡುವುದು ಹೇಗೆ ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
1ಕೆಜಿ ಚಿಕನ್
ಮಸಾಲೆ ಪೇಸ್ಟ್‌ಗೆ
1/4 ಕಪ್ ಚಿಕನ್
2 ಈರುಳ್ಳಿ
7-8 ಗೋಡಂಬಿ
2 ಚಮಚ ಗಸೆಗಸೆ
4 ಬಾದಾಮಿ
ಇವುಗಳಿಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ
ಈರುಳ್ಳಿ ಫ್ರೈ ಮಾಡಿ
2 ಈರುಳ್ಳಿಯನ್ನು ತೆಳ್ಳಗೆ ಕತ್ತರಿಸಿ ಅದನ್ನುಎಣ್ಣೆಯಲ್ಲಿ ಹಾಕಿ ಕಂದು
ಬಣ್ಣವಾಗುವವರೆಗೆ ಫ್ರೈ ಮಾಡಿ.
ಮಸಾಲೆ
1 ಚಮಚ ಜೀರಿಗೆ
3 ಹಸಿ ಮೆಣಸು
1 ಇಂಚಿನಷ್ಟು ದೊಡ್ಡದಿರುವ ಚಕ್ಕೆ
3 ಲವಂಗ
2 ಚಮಚ ಶುಂಠಿ- ಬೆಳ್ಳುಳ್ಳಿ ಪೇಸ್ಟ್
100 ಗ್ರಾಂ ಮೊಸರು
1/ 4 ಕಪ್ ಎಣ್ಣೆ ( ಈರುಳ್ಳಿ ಫ್ರೈ ಮಾಡಿದ ಎಣ್ಣೆ ಬಳಸಿ)
2-3 ಚಮಚ ಕಾಶ್ಮೀರಿ ಖಾರದ ಪುಡಿ
1/2 ಕಾಳುಮೆಣಸಿನ ಪುಡಿ
1/2 ಚಮಚ ಕೊತ್ತಂಬರಿ ಪುಡಿ
1 ಚಮಚ ಗರಂ ಮಸಾಲ ಪುಡಿ
1 ಚಮಚ ರೆಡ್ ಚಿಲ್ಲಿ ಸಾಸ್
1 ಚಮಚ ಸೋಯಾ ಸಾಸ್
4 ಚಮಚನ ಟೊಮೆಟೊ ಕೆಚಪ್
3 ಚಮಚ ವಿನೆಗರ್
1/4 ಚಮಚ ತುಪ್ಪ
ರುಚಿಗೆ ತಕ್ಕ ಉಪ್ಪು'
ಮಾಡುವ ವಿಧಾನ:
1. ಒಂದು ದಪ್ಪ ತಳವಿರುವ ಕಡಾಯಿ ತೆಗೆದುಕೊಳ್ಳಿ, ಅದಕ್ಕೆ ಚಿಕನ್ , ರುಬ್ಬಿಟ್ಟ ಮಸಾಲೆ, ಫ್ರಯ ಮಾಡಿಟ್ಟ ಈರುಳ್ಳಿ ಹಾಗೂ ಇದರ ಮಸಾಲೆ ಪಿಡಿ. ಮೊಸರು ಸಾಸ್, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
2. ಎಣ್ಣೆ (ಫ್ರೈ ಮಾಡಿಟ್ಟ ಎಣ್ಣೆ) ಮತ್ತು ಕೊತ್ತಂಬರಿ ಸೊಪ್ಪು ಹಾಕಿ
3. ನಂತರ ಚೆನ್ನಾಗಿ ಮಿಕ್ಸ್ ಮಾಡಿ ಕನಿಷ್ಠ 2 ಗಂಟೆ ಇಡಿ ಅಥವಾ ಮಿಕ್ಸ್ ಮಾಡಿ 5-6 ತಾಸು ಫ್ರಿಡ್ಜ್‌ನಲ್ಲಿ ಇಡಿ.
ಪಾಕ ವಿಧಾನ ಶುರು
1. ಫ್ರಿಡ್ಜ್‌ನಲ್ಲಿ ಇಟ್ಟಿದ್ದರೆ ಅಡುಗೆ ಶುರು ಮಾಡುವ ಒಂದು ಗಂಟೆಯ ಮುನ್ನ
ಫ್ರಿಡ್ಜ್‌ನಿಂದ ತೆಗೆದು ರೂಂನ ಉಷ್ಣತೆಯಲ್ಲಿ ಒಂದು ಗಂಟೆ ಇಡಿ.
2. ನಂತರ ಗ್ಯಾರಿ ಉರಿ ಮೇಲೆ ಕಡಾಯಿ ಇಟ್ಟು ದೊಡ್ಡ ಉರಿಯಲ್ಲಿ 40-45 ನಿಮಿಷ
ಬೇಯಿಸಿ.
3.ಹೀಗೆ ಬೇಯಿಸುವಾಗ ತಳ ಹಿಡಿಯದಂತೆ ಆಗಾಗ ತಿರುಗಿಸುತ್ತಾ ಇರಬೇಕು. ಬೇಕಿದ್ದರೆ
ಉರಿ ಕಡಿಮೆ ಮಾಡಿ.
4. ಚಿಕನ್ ಹೀಗೆ ಬೇಯಿಸುವಾಗ ಚಿಕನ್ ಎಣ್ಣೆ ಬೇರ್ಪಟ್ಟು ಮೇಲ್ಭಾಗದಲ್ಲಿ
ತೇಲುವುದು ನಿಮ್ಮ ಗಮನಕ್ಕೆ ಬರುತ್ತದೆ.
5. ಚಿಕನ್ ಬೇಯಲು ಇಟ್ಟು 25 ನಿಮಿಷದ ನಂತರ ಪಾತ್ರೆಯ ಬಾಯಿ ಮುಚ್ಚದೆ ಬೇಯೊಸಿ, ಹೀಗೆ ಮಾಡುವುದರಿಂದ ಗ್ರೇವಿ ದಪ್ಪಗಾಗುವುದು.
6. ನಿಮಗೆ ಗ್ರೇವಿ ತುಂಬಾ ಗಟ್ಟಿ ಬೇಡ ಎಂದಾದರೆ 1/4 ಕಪ್ ನೀರು ಸೇರಿಸಬಹುದು, ಆದರೆ ಈ ಗ್ರೇವಿ ಗಟ್ಟಿಯಾಗಿದ್ದರೆ ಸೂಪರ್.
ನಂತರ ಇದನ್ನು ಅನ್ನ, ತುಪ್ಪದನ್ನ, ಚಪಾತಿ, ರೊಟ್ಟಿ ಇವುಗಳ ಜೊತೆ ಸರ್ವ್ ಮಾಡಬಹುದು.
ಇತರ ಟಿಪ್ಸ್
ಬಳಸುವ ಸಾಮಗ್ರಿಯನ್ನು ನಿಮಗೆ ಬೇಕಾದಂತೆ ಬಳಸಬಹುದು, ಖಾರ ಹೆಚ್ಚು ಬೇಕೆಂದರೆ ಹೆಚ್ಚು ಖಾರದ ಪುಡಿ, ಕಡಿಮೆ ಬೇಕೆಂದರೆ ಕಡಿಮೆ ಹಾಕಬಹುದು.
ಮಸಾಲೆ ಮಿಕ್ಸ್ ಮಾಡಿ ನೀವು ಕನಿಷ್ಠ 2 ಗಂಟೆಯಾದರೂ ಇಡಲೇಬೇಕು, ಆದರೆ ಮಾತ್ರ
ಚಿಕನ್ ಟೇಸ್ಟ್ ಸ್ಪೆಷಲ್ ಅನಿಸುವುದು
ಬೋನ್‌ಲೆಸ್ ಚಿಕನ್ ಬಳಸುವುದಾದರೆ ಬೇಯಲು ಹೆಚ್ಚು ಸಮಯ ಬೇಕಾಗಿಲ್ಲ.
ಸಾಸ್‌ಗಳನ್ನು ಬೇಡ ಅಂದರೆ ಬಳಸಬೇಡಿ
ವಿನೆಗರ್ ಇಲ್ಲ ಅಂದರೆ ನಿಂಬೆರಸ ಬಳಸಬಹುದು
ನೀವು ಬೇಕಿದ್ದರೆ ಇದಕ್ಕೆ ತೆಂಗಿನಕಾಯಿ ಹಾಲು ಸೇರಿಸಬಹುದು, ಕೊನೆಗೆ ಹಾಕಿ ಒಂದು
ಕುದಿ ಬರಿಸಿದರೆ ರುಚಿ ಇನ್ನೂ ಭಿನ್ನ.



Click it and Unblock the Notifications
