Latest Updates
-
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ!
ರುಚಿ ರುಚಿಯ ಸೋರೆಕಾಯಿ ದೋಸೆ ತಿಂದಿದ್ದೀರಾ? ಮಾಡೋದು ತುಂಬಾನೆ ಸುಲಭ!
ದೋಸೆ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಮಕ್ಕಳಿಂದು ಹಿಡಿದು ಎಲ್ಲಾ ವಯಸ್ಸಿನವರು ಸಾಮಾನ್ಯವಾಗಿ ದೋಸೆಯನ್ನು ಇಷ್ಟಪಡುತ್ತಾರೆ. ಅದು ಮನೆಯಲ್ಲಿ ಮಾಡಿದರೂ ಅಷ್ಟೇ ಅಥಾವ ಹೊರಗೆ ಹೋಟೆಲ್ಗೆ ಹೋದರು ಅಲ್ಲಿಯೂ ಸಹ ದೋಸೆಯನ್ನೇ ಸವಿಯಲು ಇಷ್ಟಪಡುತ್ತಾರೆ.
ಇಷ್ಟೊಂದು ಫೇಮಸ್ ದೋಸೆಯಲ್ಲಿ ಹತ್ತು ಹಲವು ವಿಧಗಳಿವೆ. ಅದರಲ್ಲೂ ಕೆಲವೊಂದು ವಿಧಗಳಂತು ಎಲ್ಲರಲ್ಲೂ ಇಷ್ಟವಾಗುತ್ತದೆ. ಮಸಾಲ ದೋಸೆ, ಖಾಲಿ ದೋಸೆ, ಈರುಳ್ಳಿ ದೋಸೆ, ಬಟರ್ ದೋಸೆ, ತುಪ್ಪದ ದೋಸೆ ಹೀಗೆ ಹತ್ತಾರು ವಿಧಗಳು ಎಲ್ಲರಿಗೂ ಇಷ್ಟವಾಗುವ ಖಾದ್ಯವಾಗಿವೆ.

ಇನ್ನು ಈ ದೋಸೆಯಲ್ಲಿ ಹೊಸ ಹೊಸ ರೀತಿಯ ರುಚಿಕರ ದೋಸೆ ವಿಧಾನಗಳು ನಮ್ಮ ಮುಂದಿವೆ ನಾವು ಸಹ ಇಂದು ಹೊಸ ತರವಾದ ದೋಸೆ ರೆಸಿಪಿಯನ್ನು ಮಾಡಿ ನೋಡೋಣ. ಇಂದು ನಾವು ಸೋರೆಕಾಯಿಯಿಂದ ಮಾಡುವಂತಹ ದೋಸೆಯನ್ನು ಸವಿಯುವ ಪ್ರಯತ್ನ ಮಾಡೋಣ.
ಹಾಗಾದ್ರೆ ಸೋರೆಕಾಯಿಯಿಂದ ರುಚಿಕರ ದೋಸೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಸೋರೆಕಾಯಿ ದೋಸೆ ಮಾಡುವುದು ಹೇಗೆ? ಈ ದೋಸೆ ಮಾಡಲು ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ನೋಡೋಣ.
ಸೋರೆಕಾಯಿ ದೋಸೆ ಮಾಡಲು ಬೇಕಾಗುವ ವಸ್ತುಗಳು
- ಅಕ್ಕಿ
- ಹೆಸರು ಬೇಳೆ
- ಸೋರೆಕಾಯಿ- 1
- ಶುಂಠಿ
- ಕೊತಂಬರಿ ಸೊಪ್ಪು
- ಹಸಿ ಮೆಣಸಿನ ಕಾಯಿ
- ಎಣ್ಣೆ
- ನೀರು
ಸೋರೆಕಾಯಿ ದೋಸೆ ಮಾಡುವ ವಿಧಾನ
ಮೊದಲು ಒಂದು ಕಪ್ ಅಕ್ಕಿ ಹಾಗೂ ಅರ್ಧ ಕಪ್ ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಒಂದು ಬೌಲ್ನಲ್ಲಿ ಹಾಕಿಕೊಂಡು ನೆನೆಸಿಡಬೇಕು. ಸುಮಾರು 4ರಿಂದ 5 ಗಂಟೆಗಳ ಕಾಲ ನೆನೆಸಿಟ್ಟುಕೊಳ್ಳಬೇಕು. ನೆನೆಸಿಟ್ಟ ಬಳಿಕ ಅದನ್ನು ನೀರಿನಿಂದ ತೆಗೆದು ಚೆನ್ನಾಗಿ ತೊಳೆದು ಒಂದು ಬೌಲ್ಗೆ ಹಾಕಿಕೊಳ್ಳಿ.
ಇನ್ನೊಂದು ಕಡೆ ಒಂದು ಸೋರೆಕಾಯಿ ತೆಗೆದುಕೊಂಡು ಅದರ ಸಿಪ್ಪೆಯನ್ನು ತೆಗೆದು ಸಾಂಬಾರ್ಗೆ ಹೆಚ್ಚಿಕೊಳ್ಳುವಂತೆ ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಕಾಲು ಭಾಗದಷ್ಟು ಸೋರೆ ಕಾಯಿ ತೆಗೆದುಕೊಂಡರೆ ಸಾಕು. ಈಗ ಮಿಕ್ಸಿ ಜಾರ್ ತೆಗೆದುಕೊಂಡು ಅಕ್ಕಿ, ಹೆಸರು ಬೇಳೆ ಹಾಕಿ, ಅದಕ್ಕೆ ಕತ್ತರಿಸಿಕೊಂಡ ಸೋರೆ ಕಾಯಿ ಹಾಕಿ, ಜೊತೆಗೆ ಹಸಿರು ಮೆಣಸಿನ ಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು ಹಾಗೂ ಸ್ವಲ್ಪ ನೀರು ಹಾಕಿಕೊಂಡಿ ರುಬ್ಬಿಕೊಳ್ಳಿ. ಹಿಟ್ಟು ರುಬ್ಬಿಕೊಂಡ ಬಳಿಕ ಅದಕ್ಕೆ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈ ಹಿಟ್ಟು ದಪ್ಪಗಿದ್ದರೆ ಒಳ್ಳೆಯದು ಹೆಚ್ಚು ನೀರು ಮಾಡಿಕೊಳ್ಳಬೇಡಿ. ಈಗ ಒಲೆ ಮೇಲೆ ದೋಸೆ ಕಾವಲಿ ಇಟ್ಟು, ಅದಕ್ಕೆ ಎಣ್ಣೆ ಹಚ್ಚಿಕೊಂಡು ಅದಕ್ಕೆ ರುಬ್ಬಿಕೊಂಡು ಸಿದ್ದ ಮಾಡಿಕೊಂಡಿರುವ ಹಿಟ್ಟನ್ನು ಹಾಕಿ ಕೊಳ್ಳಿ,. ಸಾಮಾನ್ಯವಾಗಿ ದೋಸೆ ಮಾಡುವಂತೆಯೇ ಇದನ್ನು ಸಹ ಮಾಡಿಕೊಳ್ಳಿ. ಎರಡು ಕಡೆ ದೋಸೆಯನ್ನು ಕಾಯಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಸೋರೆಕಾಯಿ ದೋಸೆ ಸವಿಯಲು ಸಿದ್ದವಾಗುತ್ತದೆ. ಇದನ್ನು ಕೆಲವೆ ಹೊತ್ತಿನಲ್ಲಿ ಸಿದ್ಧ ಮಾಡಬಹುದು. ಇದರ ಜೊತೆ ಕಾಯಿ ಚಟ್ನಿ ಅಥವಾ ಕಡಲೆ ಬೀಜದ ಚಟ್ನಿ ಇದ್ದರೆ ಅದರ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.
ಇನ್ನು ಇದೇ ರೀತಿ ಸೋರೆಕಾಯಿಯ ಬದಲು ನೀವು ಟೊಮೆಟೋ ಬಳಸಬಹುದು. ಅಲ್ಲದೆ ಬೇಯಿಸಿದ ಆಲೂ ಗಡ್ಡೆಯನ್ನು ಸಹ ಹಾಕಿ ದೋಸೆ ಮಾಡಬಹುದು. ಈ ದೋಸೆ ಹಿಟ್ಟು ಮಾಡಿಕೊಳ್ಳುವುದು ಸಹ ತುಂಬಾನೆ ಸುಲಭ. ಹಾಗೆ ರುಚಿಯು ಅತ್ಯುತ್ತಮ. ನೀವು ಕಡಿಮೆ ಸಮಯದಲ್ಲಿ ರುಚಿಕರ ದೋಸೆ ಮಾಡಬೇಕು ಎಂದುಕೊಂಡಿದ್ದರೆ ಈ ರೆಸಿಪಿ ಟ್ರೈ ಮಾಡಬಹುದು.



Click it and Unblock the Notifications