Related Articles
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಕೃಷ್ಣ ಜನ್ಮಾಷ್ಟಮಿ ವಿಶೇಷ- ರವಾ ಕೇಸರಿ ರೆಸಿಪಿ
ರವೆಯಿಂದ ತಯಾರಿಸುವ ಸಜ್ಜಿಗೆ ಎನ್ನುವ ಸಿಹಿ ತಿಂಡಿಯನ್ನು ಮಂಗಳಕರ ಉತ್ಸವದಲ್ಲಿ, ಸಮಾರಂಭಗಳಲ್ಲಿ ಹಾಗೂ ಕೌಟುಂಬಿಕ ಕಾರ್ಯಗಳಲ್ಲಿ ಅಧಿಕೃತವಾಗಿ ತಯಾರಿಸುತ್ತಾರೆ. ಕರ್ನಾಟಕದ ಜನಪ್ರಿಯ ಸಿಹಿ ತಿಂಡಿ ಎನಿಸಿಕೊಂಡಿರುವ ಸಜ್ಜಿಗೆಗೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಕೇಸರಿ ಬಾತ್, ಶೀರಾ, ಸೂಜಿ ಹಲ್ವಾ ಎಂತಲೂ ಸಹ ಕರೆಯುತ್ತಾರೆ. ರವಾ ಕೇಸರಿ ಹಾಗೂ ಸಜ್ಜಿಗೆಗೆ ಇರುವ ವ್ಯತಾಸವೆಂದರೆ ಬಣ್ಣ. ಕೇಸರಿಗೆ ಬಣ್ಣವನ್ನು ಸೇರಿಸಲಾಗಿರುತ್ತದೆ ಅಷ್ಟೆ.
ರವಾ ಶೀರಾವನ್ನು ದೇವರ ಪ್ರಸಾದವನ್ನಾಗಿಯೂ ತಯಾರಿಸುತ್ತಾರೆ. ತುಪ್ಪದಲ್ಲಿ ಹುರಿದ ಸೂಜಿ ರವೆ, ಏಲಕ್ಕಿ ಪುಡಿಯ ಸುಗಂಧದಿಂದ ಸಿಹಿ ತಿಂಡಿಗೆ ಹೆಚ್ಚಿನ ಮೆರಗನ್ನು ನೀಡುತ್ತದೆ. ಸಜ್ಜಿಗೆ ಬಹು ಬೇಗ ತಯಾರಿಸಬಹುದಾದ ಸರಳ ಪಾಕವಿಧಾನ. ಗಂಟುಗಳಾಗದಂತೆ ಇದನ್ನು ತಯಾರಿಸುವುದು ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಿಮ್ಮ ಅನುಕೂಲಕ್ಕೆ ಅಗತ್ಯವಾಗುವಂತೆ ವಿಡಿಯೋ ಹಾಗೂ ಚಿತ್ರ ವಿವರಣೆಯನ್ನು ಹಂತ ಹಂತವಾಗಿ ನೀಡಲಾಗಿದೆ.
Recipe By: ಮೀನಾ ಭಂಡಾರಿ
Recipe Type: ಸಿಹಿ ತಿಂಡಿ
Serves: 2 ಮಂದಿಗೆ
-
ಸೂಜಿ ರವೆ - 1 ಕಪ್
ತುಪ್ಪ - 1 ಕಪ್
ಸಕ್ಕರೆ - 3/4 ಕಪ್
ಬಿಸಿ ನೀರು - 1 1/2 ಕಪ್‍ಗಳು
ಏಲಕ್ಕಿ ಪುಡಿ - 1 ಟಿ ಚಮಚ
ಹೆಚ್ಚಿಕೊಂಡ ಬಾದಾಮಿ - ಅಲಂಕಾರಕ್ಕೆ
ಹೆಚ್ಚಿಕೊಂಡ ಗೋಡಂಬಿ - ಅಲಂಕಾರಕ್ಕೆ
ಕೇಸರಿ ಎಳೆ - 4-8 ಅಲಂಕಾರಕ್ಕೆ
-
1. ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ.
2. ಒಮ್ಮೆ ತುಪ್ಪ ಕರಗಿದ ಮೇಲೆ ಸೂಜಿ ರವೆಯನ್ನು ಹಾಕಿ ಹುರಿಯಿರಿ. ಇದು ಹೊಂಬಣ್ಣಕ್ಕೆ ತಿರುಗಿದ ಮೇಲೆ, ಹುರಿದ ಪರಿಮಳ ಬರುವುದು.
3. ಹುರಿದ ಸೂಜಿ ರವೆಗೆ ನೀರನ್ನು ಸೇರಿಸಿ. ಚೆನ್ನಾಗಿ ಹಿಗ್ಗಿಸ ಬೇಕು(ಬೇಯಬೇಕು)
4. ನಂತರ ಸಕ್ಕರೆಯನ್ನು ಸೇರಿಸಿ. ಗಂಟಾಗದಂತೆ ನಿರಂತರವಾಗಿ ಕೈಯಾಡಿಸುತ್ತಲೇ ಇರಬೇಕು.
5. ಸಕ್ಕರೆಯು ಕರಗಿ ಹೊಂದಿಕೊಳ್ಳುವಾಗ ಮಿಶ್ರಣವು ದಪ್ಪವಾಗುವುದು.
6. ಈಗ ಏಲಕ್ಕಿ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
7. ಮಿಶ್ರಣವನ್ನು ಹಾಗೆ ಕೈಯಾಡಿಸುತ್ತಿದ್ದರೆ, ಪಾತ್ರೆಯ ತಳ ಹಾಗೂ ಸುತ್ತಲು ಬಿಡಲು ಪ್ರಾರಂಭಿಸುವುದು.
8. ಉರಿಯನ್ನು ಆರಿಸಿ. ಮಿಶ್ರಣವನ್ನು ಒಂದು ಬೌಲ್‍ಗೆ ವರ್ಗಾಯಿಸಿ.
9. ಹಚ್ಚಿಕೊಂಡ ಬಾದಾಮಿ, ಗೋಡಂಬಿ ಹಾಗೂ ಕೇಸರಿ ಎಳೆಯಿಂದ ಅಲಂಕರಿಸಿ.
- 1. ಸೂಜಿ ರವೆಯನ್ನು ಹುರಿದ ಪರಿಮಳ ಬರುವವರೆಗೂ ಹುರಿದುಕೊಳ್ಳಬೇಕು.
- 2. ಬಿಸಿ ನೀರನ್ನು ಹಾಕುವುದರಿಂದ ಸಜ್ಜಿಗೆ/ಹಲ್ವಾ ಅತಿಯಾಗಿ ಮೃದುವಾಗುವುದು ಅಥವಾ ಮೇಣದಂತಹ ಮುದ್ದೆ ಆಗುವುದನ್ನು ತಡೆಯಬಹುದು.
- ಸರ್ವಿಂಗ್ ಸೈಜ್ - 1 ಕಪ್
- ಕ್ಯಾಲೋರಿ - 447 ಕ್ಯಾಲ್
- ಫ್ಯಾಟ್ - 28 ಗ್ರಾಂ.
- ಪ್ರೋಟೀನ್ - 4 ಗ್ರಾಂ.
- ಕಾರ್ಬೋಹೈಡ್ರೇಟ್ - 48 ಗ್ರಾಂ.
- ಸಕ್ಕರೆ - 27 ಗ್ರಾಂ.
- ಫೈಬರ್ - 1 ಗ್ರಾಂ.
ಸಜ್ಜಿಗೆ ಪಾಕವಿಧಾನ
1. ದಪ್ಪ ತಳದ ಪಾತ್ರೆಯಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿ.
2. ಒಮ್ಮೆ ತುಪ್ಪ ಕರಗಿದ ಮೇಲೆ ಸೂಜಿ ರವೆಯನ್ನು ಹಾಕಿ ಹುರಿಯಿರಿ. ಇದು ಹೊಂಬಣ್ಣಕ್ಕೆ ತಿರುಗಿದ ಮೇಲೆ, ಹುರಿದ ಪರಿಮಳ ಬರುವುದು.
3. ಹುರಿದ ಸೂಜಿ ರವೆಗೆ ನೀರನ್ನು ಸೇರಿಸಿ. ಚೆನ್ನಾಗಿ ಹಿಗ್ಗಿಸ ಬೇಕು(ಬೇಯಬೇಕು).