Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಡುಗೆ ಅರಮನೆಯಲ್ಲಿ ಎಲೆಕೋಸಿನ ವಡೆ
ಮನಸ್ವಿನಿ. ನಾರಾವಿ
ಬೇಕಾಗುವ ಸಾಮಾನುಗಳು
ಎಲೆ ಕೋಸು : ಅರ್ಧ ಕಪ್
ಬಟಾಣಿ: 2 ಟೇಬಲ್ ಚಮಚ( ಬೇಕಾದರೆ ಉಪಯೋಗಿಸಿ)
ಉದ್ದಿನಬೇಳೆ: 1 ಕಪ್
ದೊಡ್ಡ ಈರುಳ್ಳಿ: 1
ಹಸಿಮೆಣಸಿನಕಾಯಿ: 4
ಸ್ವಲ್ಪ ಇಂಗಿನ ಪುಡಿ.
ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು
ಉದ್ದಿನ ಬೇಳೆ:50 ಗ್ರಾಂ
ಮಾಡುವ ವಿಧಾನ:
ಸೂಚನೆ: ಎಲೆ ಕೋಸು, ಈರುಳ್ಳಿಯನ್ನು ಸಣ್ಣಗೆ ಕೊಚ್ಚಬೇಕು, ಕೊತ್ತಂಬರಿಸೊಪ್ಪನ್ನು ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಬೇಕು.
ಉದ್ದಿನಬೇಳೆಯನ್ನು 2 ಕಪ್ ನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಿ ನಂತರ ನೀರನು ಬಸಿದಿಡಿ. ನೆಂದ ಬೇಳೆಯನ್ನು ಹಸಿಮೆಣಸಿನಕಾಯಿ, ಉಪ್ಪು ಮತ್ತು ಇಂಗಿನೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಹಿಟ್ಟಿಗೆ ಈರುಳ್ಳಿ, ಎಲೆಕೋಸು, ಕೊತ್ತಂಬರಿ ಸೊಪ್ಪು ಮತ್ತು ಬಟಾಣಿಯನ್ನು ಹಾಕಿ ಚೆನ್ನಾಗಿ ಬೆರೆಸಿರಿ. ಇಡ್ಲಿ ತಟ್ಟೆಯನ್ನು ಬಿಸಿ ಮಾಡಿ ನಂತರ ಹಿಟ್ಟನ್ನು ಎಡ ಅಂಗೈಯಲ್ಲಿ ಹಾಕಿ ಬಲಗೈಗೆ ಸ್ವಲ್ಪ ನೀರು ಮುಟ್ಟಿಸಿಕೊಂಡು ಎಡಗೈಯಲ್ಲಿರುವ ಹಿಟ್ಟನ್ನು ವಡೆಯ ಆಕಾರಕ್ಕೆ ತಂದು ಮಧ್ಯದಲ್ಲಿ ಒಂದು ತೂತನ್ನು ಮಾಡಿ ನಿಧಾನವಾಗಿ ಇಡ್ಲಿ ತಟ್ಟೆಗೆ ಹಾಕಿ, ಎಲ್ಲ ಹಿಟ್ಟನ್ನು ಈ ರೀತಿ ತಟ್ಟೆಗೆ ಹಾಕಿ ಹಬೆಯಲ್ಲಿ ಬೇಯಿಸಿರಿ. ಬಿಸಿ ಇರುವಾಗಲೇ ಚಟ್ನಿಯೊಂದಿಗೆ ತಿನ್ನಲು ಚೆನ್ನ.



Click it and Unblock the Notifications
