Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಸಿಂಗಾರೆ ಹಿಟ್ಟಿನಿಂದ ಮಾಡಿದ ಬಿಸಿ ಬಿಸಿ ಪಕೋಡ ರೆಸಿಪಿ
ಸಿಂಗಾರೆ ಹಿಟ್ಟಿನಿಂದ ಮಾಡಿರುವ ಪಕೋಡ ಉತ್ತರ ಭಾರತೀಯರ ತಿನಿಸಾಗಿದ್ದು ಹೆಚ್ಚಾಗಿ ಇದನ್ನು ವೃತ ಇಲ್ಲವೇ ಉಪವಾಸ ಸಮಯಗಳಲ್ಲಿ ಸೇವಿಸುತ್ತಾರೆ. ಇದರಿಂದ ಹಿಟ್ಟನ್ನು ತಯಾರಿಸಿಕೊಂಡು ವ್ರತದ ದಿನದಂದು ಸೇವಿಸಲು ಬಳಸಿಕೊಳ್ಳುತ್ತಾರೆ. ಇಂದಿನ ಲೇಖನದಲ್ಲಿ ಬಿಸಿಬಿಸಿಯಾಗಿ ಸವಿಯಬಹುದಾದ ಸಿಂಗಾರೆ ಪಕೋಡಾವನ್ನು ತಯಾರಿಸುವ ವಿಧಾನವನ್ನು ನಾವು ತಿಳಿಸಿಕೊಡುತ್ತಿದ್ದೇವೆ. ಇದರ ಜೊತೆಗೆ ಆಲೂಗಡ್ಡೆ, ಮತ್ತು ಇನ್ನಿತರ ಮಸಾಲೆ ಸಾಮಾಗ್ರಿಗಳನ್ನು ಬಳಸಿಕೊಂಡು ಈ ಪಕೋಡಾವನ್ನು ತಯಾರಿಸಲಾಗುತ್ತದೆ.
ಈ ಪಕೋಡಾದೊಂದಿಗೆ ಫಲಹಾರಿ ಚಟ್ನಿಯನ್ನು ತಯಾರಿಸಿ ಸೇವಿಸಬಹುದಾಗಿದ್ದು ಉತ್ತಮ ಕಾಂಬಿನೇಶನ್ ಎಂದೆನಿಸಿದೆ. ನವರಾತ್ರಿ, ಏಕಾದಶಿ ಮತ್ತು ಇತರ ಹಬ್ಬಗಳ ಉಪವಾಸ ಕ್ರಮಕ್ಕಾಗಿ ಸಿಂಗಾರೆ ಹುಡಿಯಿಂದ ಮಾಡಿದ ಆಹಾರಗಳನ್ನು ಸೇವಿಸುತ್ತಾರೆ. ಹೊರಗಿನಿಂದ ಗರಿಗರಿಯಾಗಿ ಒಳಗಿನ ಭಾಗ ಮೃದುವಾಗಿ ಈ ಪಕೋಡಾವನ್ನು ಸಿದ್ಧಪಡಿಸಲಾಗುತ್ತದೆ. ಈ ಹಿಟ್ಟಿಗೆ ಸ್ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ಸೇರಿಸುವುದರಿಂದ ರುಚಿ ಇಮ್ಮಡಿಗೊಳ್ಳುತ್ತದೆ. ಹಾಗಿದ್ದರೆ ಈ ಕೆಳಗೆ ನಾವು ನೀಡಿರುವ ಪಕೋಡಾ ಸಿದ್ಧಪಡಿಸುವ ಹಂತ ಹಂತದ ವಿಧಾನಗಳನ್ನು ಅರಿತುಕೊಳ್ಳಿ.
ಸಿಂಗಾರೆ ಕೇ ಪಕೋಡಾ ವಿಡಿಯೋ ರೆಸಿಪಿ

Recipe By: ಮೀನಾ ಭಂಡಾರಿ
Recipe Type: ಸ್ನ್ಯಾಕ್ಸ್
Serves: 3
-
ಬೇಯಿಸಿದ ಆಲೂಗಡ್ಡೆ (ಸಿಪ್ಪೆ ಸುಲಿದು ಇದನ್ನು ಎರಡು ಭಾಗಗಳನ್ನಾಗಿ ತುಂಡರಿಸಿದ್ದು) - 2
ಕಲ್ಲುಪ್ಪು ರುಚಿಗೆ
ಕೊತ್ತಂಬರಿ ಸೊಪ್ಪು (ಕತ್ತರಿಸಿದ್ದು) 1/2 ಕಪ್
ಹಸಿಮೆಣಸು (ಸಣ್ಣಗೆ ಹೆಚ್ಚಿದ್ದು) 2 ಚಮಚ
ಸಿಂಗಾರೆ ಹುಡಿ - 1 ಕಪ್
ನೀರು - 1/4 ಕಪ್
ಎಣ್ಣೆ - ಕರಿಯಲು
-
1. ಮೊದಲಿಗೆ ಮಿಕ್ಸಿಂಗ್ ಬೌಲ್‌ಗೆ ಆಲೂಗಡ್ಡೆಗಳನ್ನು ಹಾಕಿ.
2. ಇದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ಕಲ್ಲುಪ್ಪು ಹಾಕಿ.
3. ಕತ್ತರಿಸಿದ ಹಸಿಮೆಣಸು ಸೇರಿಸಿ.
4. ಚೆನ್ನಾಗಿ ಕಲಸಿಕೊಳ್ಳಿ.
5. ಇದಕ್ಕೆ ಸಿಂಗಾರೆ ಹುಡಿಯನ್ನು ಸೇರಿಸಿಕೊಳ್ಳಿ.
6. ಮೊದಲಿಗೆ ಸ್ವಲ್ಪ ನೀರು ಹಾಕಿ ಮತ್ತು ದಪ್ಪನೆಯ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ.
7. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.
8. ಚಮಚ ಅಥವಾ ಬೆರಳಿನಿಂದ ಹಿಟ್ಟನ್ನು ತೆಗೆದುಕೊಂಡು ಪಕೋಡಾ ಗಾತ್ರದಲ್ಲಿ ಒಂದರ ಮೇಲೊಂದರಂತೆ ಎಣ್ಣೆಗೆ ಬಿಡಿ.
9. ಚಿನ್ನದ ಬಣ್ಣಕ್ಕೆ ತಿರುಗವವರೆಗೆ ಪಕೋಡಾವನ್ನು ಚೆನ್ನಾಗಿ ಕರಿಯಿರಿ.
10. ಎಣ್ಣೆಯಿಂದ ಹೊರತೆಗೆದು ಬಿಸಿಬಿಸಿಯಾಗಿ ಬಡಿಸಿ.
- 1. ಇಡ್ಲಿ ಹಿಟ್ಟಿನಂತೆ ಸಿಂಗಾರೆ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ.
- 2. ಆಲೂಗಡ್ಡೆಯ ಸಿಪ್ಪೆ ಸುಲಿದು ಚೆನ್ನಾಗಿ ಹಿಸುಕಿಕೊಳ್ಳಿ.
- ಬಡಿಸುವ ಪ್ರಮಾಣ - 5 ತುಂಡುಗಳು
- ಕ್ಯಾಲೊರಿ - 402 ಕ್ಯಾಲೊ
- ಕೊಬ್ಬು - 4 ಗ್ರಾಮ್
- ಪ್ರೊಟೀನ್ - 15 ಗ್ರಾಮ್
- ಕಾರ್ಬೊಹೈಡ್ರೇಟ್ಸ್ - 85 ಗ್ರಾಮ್
- ಸಕ್ಕರೆ - 3 ಗ್ರಾಮ್
- ಫೈಬರ್ - 12 ಗ್ರಾಮ್
ಸ್ಟೆಪ್ ಬೈ ಸ್ಟೆಪ್ ಸಿಂಗಾರೆ ಕೇ ಪಕೋಡ ರೆಸಿಪಿ
1. ಮೊದಲಿಗೆ ಮಿಕ್ಸಿಂಗ್ ಬೌಲ್‌ಗೆ ಆಲೂಗಡ್ಡೆಗಳನ್ನು ಹಾಕಿ.

2. ಇದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ಕಲ್ಲುಪ್ಪು ಹಾಕಿ.


3. ಕತ್ತರಿಸಿದ ಹಸಿಮೆಣಸು ಸೇರಿಸಿ.

4. ಚೆನ್ನಾಗಿ ಕಲಸಿಕೊಳ್ಳಿ.

5. ಇದಕ್ಕೆ ಸಿಂಗಾರೆ ಹುಡಿಯನ್ನು ಸೇರಿಸಿಕೊಳ್ಳಿ.


6. ಮೊದಲಿಗೆ ಸ್ವಲ್ಪ ನೀರು ಹಾಕಿ ಮತ್ತು ದಪ್ಪನೆಯ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ.


7. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.

8. ಚಮಚ ಅಥವಾ ಬೆರಳಿನಿಂದ ಹಿಟ್ಟನ್ನು ತೆಗೆದುಕೊಂಡು ಪಕೋಡಾ ಗಾತ್ರದಲ್ಲಿ ಒಂದರ ಮೇಲೊಂದರಂತೆ ಎಣ್ಣೆಗೆ ಬಿಡಿ.


9. ಚಿನ್ನದ ಬಣ್ಣಕ್ಕೆ ತಿರುಗವವರೆಗೆ ಪಕೋಡಾವನ್ನು ಚೆನ್ನಾಗಿ ಕರಿಯಿರಿ.

10. ಎಣ್ಣೆಯಿಂದ ಹೊರತೆಗೆದು ಬಿಸಿಬಿಸಿಯಾಗಿ ಬಡಿಸಿ.





Click it and Unblock the Notifications
