Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಮೂರೇ ಪ್ರಮುಖ ಸಾಮಗ್ರಿ ಸಾಕು ಟೇಸ್ಟಿಯಾಗಿ ಮಾಡಬಹುದು ಹೆಸರುಬೇಳೆ ಪಾಯಸ
ಹೆಸರುಬೇಳೆ ಪಾಯಸ ಹಲವು ರೀತಿಯಲ್ಲಿ ಮಾಡಬಹುದು, ನಾವಿಲ್ಲಿ ತುಂಬಾನೇ ಸರಳವಾಗಿ ಮಾಡಬಹುದಾದ ಪಾಯಸದ ರೆಸಿಪಿ ನೀಡಿದ್ದೇವೆ, ಈ ಪಾಯಸ ರೆಡಿ ಮಾಡಿದರೆ ಬಿಸಿ ಬಿಸಿ ಸವಿಯಲು ಚೆನ್ನಾಗಿರುತ್ತದೆ, ತಣ್ಣಗಾದ ಮೇಲೂ ತುಂಬಾ ರುಚಿಯಾಗಿರುತ್ತದೆ. ಬನ್ನಿ ಈ ಪಾಯಸ ಮಾಡುವುದು ಹೇಗೆ ಎಂದು ನೋಡೋಣ:

ಈ ಪಾಯಸ ಮಾಡಲು ಪ್ರಮುಖವಾಗಿ ಬೇಕಾಗಿರುವುದು ಮೂರೇ ಮೂರು ಸಾಮಗ್ರಿ, ಹಾಲು, ಬೆಲ್ಲ, ಹೆಸರುಬೇಳೆ, ನಂತರ ನೀವು ತುಪ್ಪ, ಡ್ರೈ ಫ್ರೂಟ್ಸ್, ತೆಂಗಿನಕಾಯಿ ಹೋಳು ಇವೆಲ್ಲಾ ಸೇರಿಸವುದರಿಂದ ಪಾಯಸದ ಸ್ವಾದ ಹೆಚ್ಚಾಗುವುದು.
ಬೇಕಾಗುವ ಸಾಮಗ್ರಿ
ಹೆಸರು ಬೇಳೆ 1/4 ಕೆಜಿ
ಬೆಲ್ಲ 1/2 ಕೆಜಿ
ಹಾಲು ಅರ್ಧ ಲೀಟರ್
ಏಲಕ್ಕಿ 2
ತುಪ್ಪ 2 ಚಮಚ
ತೆಂಗಿನಕಾಯಿ ಹೋಳು (ಚಿಕ್ಕದಾಗಿ ಕತ್ತರಿಸಿದ್ದು)
ಮಾಡುವ ವಿಧಾನ
- ಹೆಸರುಬೇಳೆಗೆ ಒಂದು ಕಪ್ ನೀರು ಸೇರಿಸಿ 2-3 ವಿಶಲ್ ಬರುವವರೆಗೆ ಬೇಯಿಸಿ. ಹೀಗೆ ಬೇಯಿಸುವಾಗ ಒಂದು ಕಲ್ಲು ಕಲ್ಲುಪ್ಪು ಸೇರಿಸಿ
- ಮತ್ತೊಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ಅದಕ್ಕೆ 1 ಕಪ್ ನೀರು ಸೇರಿಸಿ ಕಾಯಿಸಿ, ಬೆಲ್ಲದ ಪಾಕ ರೆಡಿಯಾದಾಗ ಆಫ್ ಮಾಡಿ.
- ಈಗ ನೀವು ಹಾಲನ್ನು ಕುದಿಸಿ, ಹಾಲು ಕುದಿ ಬರುವಾಗ ಸಿಮ್ ಮಾಡಿ ಹಾಲಿಗೆ ಏಲಕ್ಕಿ ಸೇರಿಸಿ
- ನಂತರ ಬೆಲ್ಲದ ಪಾಕ ಸೇರಿಸಿ ಕುದಿಸಿ
- ನಂತರ ಬೇಯಿಸಿದ ಹೆಸರು ಬೇಳೆಯನ್ನು ಸೌಟ್ನಿಂದ ಮ್ಯಾಶ್ ಮಾಡಿ ಹಾಲು ಬೆಲ್ಲದ ಮಿಶ್ರಣಕ್ಕೆ ಸೇರಿಸಿ
- ನಂತರ ಏಲಕ್ಕಿ ಸೇರಿಸಿ
- ಈಗ ಮತ್ತೊಂದು ಬಾಣಲೆಯಲ್ಲಿ 2 ಚಮಚ ತುಪ್ಪ ಹಾಕಿ ಅದರಲ್ಲಿ ತೆಂಗಿನಕಾಯಿ ಹೋಳು ಸೇರಿಸಿ ಅದು ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ(ತುಂಬಾ ಕಪ್ಪಾಗುವವಷ್ಟು ಫ್ರೈ ಮಾಡಬೇಡಿ)
- ನಂತರ ತೆಂಗಿನಕಾಯಿ ಹೋಳನ್ನು ಪಾಯಸಕ್ಕೆ ಸೇರಿಸಿ
- ಇಷ್ಟು ಮಾಡಿದರೆ ಹೆಸರು ಬೇಳೆ ಪಾಯಸ ರೆಡಿ.
ಎಷ್ಟು ಜನಕ್ಕೆ ಸರ್ವ್ ಮಾಡಬಹುದು?
ನೀವು ಇಲ್ಲಿ ನೀಡಿರುವ ಅಳತೆಯಲ್ಲಿ ಮಾಡಿದರೆ 15-20 ಜನಕ್ಕೆ ಸರ್ವ್
ಮಾಡಬಹುದು.
ಹೆಸರು ಬೇಳೆ ಪ್ರತ್ಯೇಕ ಬೇಯಿಸಿ ಸೇರಿಸಿ
ಹೆಸರು ಬೇಳೆ ಬೇಯಿಸಿ ಹಾಲು ಹಾಕುವುದಕ್ಕಿಂತ, ಗೆಸರು ಬೇಳೆ ಪ್ರತ್ಯೇಕವಾಗಿ
ಕುಕ್ಕರ್ನಲ್ಲಿ ಬೇಯಸಿ, ಅದನ್ನು ಹಾಲಿನ ಮಿಶ್ರಣಕ್ಕೆ ಸೇರಿಸಿ.
ಯಾವ ಬೆಲ್ಲ ಒಳ್ಳೆಯದು?
ಯಾವುದೇ ಬೆಲ್ಲ ಬಳಸಬಹುದು, ಈ ಪಾಯಸಕ್ಕೆ ಸಕ್ಕರೆಗಿಂತ ಎಲ್ಲ ಬಳಸುವುದೇ
ಸೂಕ್ತ.
ಅರ್ಧ ಲೀಟರ್ ಹಾಲಿಗೆ , ಮತ್ತೆ ಅರ್ಧ ಲೀಟರ್ ನೀರು ಸೇರಿಸಬಹುದು.
ತೆಂಗಿನಕಾಯಿ ಹಾಲು ಹಾಕಿದರೆ ಇನ್ನೂ ಟೇಸ್ಟ್?
ನಾವು ನೀಡಿರುವುದು ಹಾಲು ಮಾತ್ರ ಹಾಕಿ ಮಾಡಿರುವ ಸಿಂಪಲ್ ರೆಸಿಪಿ, ನೀವು
ಬೇಕಿದ್ದರೆ ಒಂದು ಕಪ್ ತೆಂಗಿನಕಾಯಿ ಹಾಲು ಕೂಡ ಸೇರಿಸಬಹುದು.
ಈ ಪಾಯಸ ಗಟ್ಟಿಯಾಗಿ ಮಾಡುವುದಕ್ಕಿಂತ ಗ್ಲಾಸ್ನಲ್ಲಿ ಹಾಕಿ ಕುಡಿಯುವ ರೀತಿ ನೀರು ನೀರಾಗಿ ಮಾಡಿದರೆ ಒಳ್ಳೆಯದು, ಇದನ್ನು ಬಿಸಿ ಬಿಸಿಯಾಗಿ ಸವಿಯಬಹುದು ಅಥವಾ ಫ್ರಿಡ್ಜ್ನಲ್ಲಿಟ್ಟು ಕೂಡ ಸರ್ವ್ ಮಾಡಬಹುದು.



Click it and Unblock the Notifications
