Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಅನ್ನದ ಜೊತೆ ಸವಿಯಲು ಕಾಯಿರಸ: ಇದು ಇದ್ದರೆ ಯಾವ ಸಾಂಬಾರ್ ಕೂಡಬೇಕಾಗಿಲ್ಲ, ಹತ್ತೇ ನಿಮಿಷ ಸಾಕು ಅಡುಗೆಗೆ
ತರಕಾರಿ ಏನೂ ಇಲ್ಲ ಏನು ಮಾಡ್ಲಿ ಇವತ್ತು ಎಂದು ಯೋಚಿಸಬೇಡಿ, ಸುಮ್ಮನೆ ಕಾಯಿರಸ ಮಾಡಿಬಿಡಿ, ಸಾಂಬಾರ್ ಮಾಡಿರುವಾಗ ತಿನ್ನುವತೆ ತುಸು ಹೆಚ್ಚೇ ಆಹಾರ ಸೇವಿಸುತ್ತೇವೆ. ಈ ಕಾಯಿರಸ ಮಾಡುವುದು ಕೂಡ ಸುಲಭ, ಚಟ್ನಿಯಷ್ಟೇ ಸುಲಭದಲ್ಲಿ ಮಾಡಬಹುದು, ಆದರೆ ಅನ್ನದ ಜೊತೆ ತಿನ್ನಲು ಮಾತ್ರ ಸೂಪರ್ ಆಗಿರುತ್ತದೆ, ಇನ್ನು ಇದನ್ನು ಮಾಡಲು ಹೆಚ್ಚು ಸಮಯ ಕೂಡ ಬೇಕಾಗಿಲ್ಲ, ಬರಿ ಹತ್ತು ನಿಮಿಷಕ್ಕಲ್ಲ ಅಡುಗೆ ಮಾಡಿ ಮುಗಿಸಿ ಆರಾಮವಾಗಿ ಕೂರಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ತೆಂಗಿನ ತುರಿ 1ಕಪ್
ಸ್ವಲ್ಪ ಶುಂಠಿ
1 ಚಮಚ ಜೀರಿಗೆ
1-2 ಬೆಳ್ಳುಳ್ಳಿ (10-12 ಎಸಳು)
ಎಣ್ಣೆಯಲ್ಲಿ ಸ್ವಲ್ಪ ಫ್ರೈ ಮಾಡಿದ ಹಸಿ ಮೆಣಸು 5-6 (ನಿಮ್ಮ ಖಾರಕ್ಕೆ
ತಕ್ಕಷ್ಟು)
ಸ್ವಲ್ಪ ಕರಿಬೇವು
ಸ್ವಲ್ಪ ಕೊತ್ತಂಬರಿ ಸೊಪ್ಪು
1/2 ಚಮಚ ಕಾಳುಮೆಣಸು
1 ಚಮಚ ಹುಣಸೆ ಪೇಸ್ಟ್ ಅಥವಾ ಚಿಕ್ಕ ನಿಂಬೆಹಣ್ಣು ಗಾತ್ರದಷ್ಟು ಹುಣಸೆಹಣ್ಣು
(ಬಿಸಿ ನೀರಿನಲ್ಲಿ ಹಾಕಿ ರಸ ಹಿಂಡಿ ಆ ರಸ ಸೇರಿಸಿ)
ಈಗ ನೀವು ಈ ಎಲ್ಲಾ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣನೆ ರುಬ್ಬಿಕೊಳ್ಳಿ
ಸ್ಟೆಪ್ 2
- ಈಗ ಪಾತ್ರೆ ಬಿಸಿ ಅದರಲ್ಲಿ 2 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸ್ವಲ್ಪ ಸಾಸಿವೆ ಹಾಕಿ, ನಂತರ ಜೀರಿಗೆ ಹಾಕಿ ಇವುಗಳು ಚಟ್ ಪಟ್ ಶಬ್ದ ಮಾಡುವಾಗ ಸ್ವಲ್ಪ ಉದ್ದಿನ ಬೇಳೆ, ಸ್ಬಲ್ಪ ಕಡ್ಲೆಬೇಳೆ ಹಾಕಿ, ಸ್ವಲ್ಪ ಇಂಗು ಸೇರಿಸಿ, ಕರಿಬೇವು ಹಾಕಿ, ಒಣ ಮೆಣಸು ಮುರಿದು ಹಾಕಿ.
- ಈಗ ರುಬ್ಬಿದ ಮಿಶ್ರಣ ಸೇರಿಸಿ 2 ನಿಮಿಷ ಸೌಟ್‌ನಿಂದ ಆಡಿಸಿ ನಂತರ ಒಂದೂವರೆ ಕಪ್ ನೀರು, ರುಚಿಗೆ ತಕ್ಕ ಉಪ್ಪು ಸೇರಿಸಿ ಕುದಿಸಿ, ಇಷ್ಟ ಮಾಡಿದರೆ ಅನ್ನದ ಜೊತೆ ತಿನ್ನಲು ರುಚಿಯಾದ ಕಾಯಿರಸ ರೆಡಿ. ಈ ಕಾಯಿರಸ ಗ್ಲಾಸ್‌ಗೆ ಹಾಕಿ ರಸಂ ತರ ಹೀರಿ ಕುಡಿಯಲು ಕೂಡ ತುಂಬಾನೇ ಚೆನ್ನಾಗಿರುತ್ತದೆ.
ಇತರ ಸಲಹೆ
- ಈ ಕಾಯಿರಸ ನೀವು ಬೇಕಿದ್ದರೆ ನೀರು-ನೀರಾಗಿಯೂ ಮಾಡಬಹುದು ಅಥವಾ ಸಾಂಬಾರ್‌ನಂತೆ ಸ್ವಲ್ಪ ಗಟ್ಟಿಯಾಗಿಯೂ ಮಾಡಬಹುದು. ನೀರು ಸೇರಿಸುವಾಗ ನಿಮಗೆ ಯಾವ ಹದಕ್ಕೆ ಬೇಕೋಅಷ್ಟು ನೀರು ಸೇರಿಸಿ.
- ಈ ಕಾಯಿರಸ ಕುಚಲಕ್ಕಿ ಅನ್ನಕ್ಕಿಂತ ಬೆಳ್ತಕ್ಕಿ ಅನ್ನಕ್ಕೆ ತುಂಬಾನೇ ರುಚಿಯಾಗಿರುತ್ತದೆ.
- ಕಾಯಿರಸ ಮಾಡಿ, ಒಂದು ಪಲ್ಯ ಮಾಡಿದರೆ ಮತ್ಯಾವ ಸಾರು ಕೂಡ ಬೇಕಾಗಿಲ್ಲ, ಊಟದ ರುಚಿ ಬೊಂಬಾಟ್ ಆಗಿರುತ್ತದೆ. ಈ ಕಾಯಿರಸ ಇದುವರೆಗೆ ಟ್ರೈ ಮಾಡಿಯೇ ನೋಡಿ, ಟೇಸ್ಟ್ ಇಷ್ಟ ಆಗಿಲ್ಲ ಎಂತ ಖಂಡಿತ ನೀವು ಹೇಳಲ್ಲ ಅಷ್ಟೊಂದು ರುಚಿಯಾಗಿರುತ್ತೆ.



Click it and Unblock the Notifications