Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಶ್ವೇತಾ ಚೆಂಗಪ್ಪರವರು ಮಾಡಿರುವ ಈ ಬಿರಿಯಾನಿ ನೀವೂ ಸುಲಭದಲ್ಲಿ ಮಾಡಬಹುದು
ನೀವು ಬಿರಿಯಾನಿ ಪ್ರಿಯರೇ, ಆದರೆ ಅದನ್ನು ಹೇಗೆ ಮಾಡಬೇಕು ಎಂದು ಗೊತ್ತಿಲ್ಲವೇ ಶ್ವೇತಾ ಚೆಂಗಪ್ಪ ಶೇರ್ ಮಾಡಿರುವ ಈ ಸಿಂಪಲ್ ಚಿಕನ್ ಬಿರಿಯಾನಿ ರೆಸಿಪಿ ಟ್ರೈ ಮಾಡಬಹುದು.

ಇದನ್ನು ಅಡುಗೆ ಗೊತ್ತೇ ಇಲ್ಲ ಎನ್ನುವವರು ಕೂಡ ಟ್ರೈ ಮಾಡಬಹುದು, ಉಪ್ಪು ಅಳತೆಯಲ್ಲಿ ಹಾಕಿದರಷ್ಟೇ ಸಾಕು, ಉಳಿದಂತೆ ಯಾರೇ ಟ್ರೈ ಮಾಡಿದರೂ ಬಿರಿಯಾನಿ ಮಾಡುವ ಪ್ರಯತ್ನದಲ್ಲಿ ಯಶಸ್ವಿಯಾಗುವಲ್ಲಿ ನೋ ಡೌಟ್.
ಮತ್ಯಾಕೆ ತಡ ರೆಸಿಪಿಯತ್ತ ಕಣ್ಣಾಡಿಸೋಣ:
Recipe By: Shweta changappa
Recipe Type: non veg
Serves: 4
-
ಬೇಕಾಗುವ ಸಾಮಗ್ರಿ
ಟೆಂಡರ್ ಚಿಕನ್ 750 ಗ್ರಾಂ
ಒಂದು ದೊಡ್ಡ ಬೌಲ್ ತುಂಬಾ ಈರುಳ್ಳಿ
1 ಕಪ್ ಟೊಮೆಟೊ
ಪುದೀನಾ ಎಲೆ ಸ್ವಲ್ಪ
ಕೊತ್ತಂಬರಿ ಸೊಪ್ಪು 1 ಕಪ್
(ಎರಡೂ ಸೊಪ್ಪು ರುಬ್ಬಿಡಿ)
ಸ್ವಲ್ಪ ಕರಿಬೇವು
3 ಹಸಿ ಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
1 ಚಮಚ ತುಪ್ಪ
ಎಣ್ಣೆ 1 ಚಮಚ
ಅರ್ಧ ನಿಂಬೆ ಹಣ್ಣು
ಚಕ್ಕೆ
ಲವಂಗ
ಏಲಕ್ಕಿ 2
ಪಲಾವ್ ಎಲೆ 2
ಅರಿಶಿಣ ಪುಡಿ 1/2 ಚಮಚ
ಖಾರದ ಪುಡಿ 1/2 ಚಮಚ
ಕೊತ್ತಂಬರಿ ಪುಡಿ 1 ಚಮಚ
ಸೋಂಪು 1 ಚಮಚ
ಕಸೂರಿ ಮೇತಿ 1 ಟೀ ಸ್ಪೂನ್
ರುಚಿಗೆ ತಕ್ಕ ಉಪ್ಪು
ಜೀರಿಗೆ ಪುಡಿ 1 ಚಮಚ
ಗರಂ ಮಸಾಲೆ 1/2 ಟೀ ಚಮಚ
ಬಿರಿಯಾನಿ ಪುಡಿ 1 ಚಮಚ
ಚಿಕನ್ ಮಸಾಲೆ 1 ಚಮಚ
ಸೋನಾ ಮಸೂರಿ ಒಂದೂವರೆ ಕಪ್
-
ಮಾಡುವ ವಿಧಾನ
* ಕುಕ್ಕರ್ ಬಿಸಿ ಮಾಡಿ, ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ.
* ತುಪ್ಪ ಬಿಸಿಯಾದಾಗ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಹಸಿ ಮೆಣಸಿನಕಾಯಿ, ಕರಿಬೇವು ಹಾಕಿ.
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 1 ನಿಮಿಷ ಫ್ರೈ ಮಾಡಿ, ಈಗ ಈರುಳ್ಳಿ ಹಾಕಿ ಅದು ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ. ನಂತರ ಕೊತ್ತಂಬರಿ -ಪುದೀನಾ ಸೊಪ್ಪು ಪೇಸ್ಟ್ ಹಾಕಿ ಕೂಡ 2-3 ನಿಮಿಷ ಫ್ರೈ ಮಾಡಿ.
*ಈಗ ಚಿಕನ್ ಹಾಕಿ, ಕಸೂರಿ ಮೇತಿ ಸೇರಿಸಿ.
*ಈಗ ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಅರಿಶಿಣ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಚಿಕನ್ ಮಸಾಲೆ ಪುಡಿ ಹಾಕಿ ಮಿಕ್ಸ್ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಒಂದು 5 ನಿಮಿಷ ಬೇಯಿಸಿ.
* ನಂತರ ಬಿರಿಯಾನಿ ಮಸಾಲೆ ಹಾಕಿ.
* ಈಗ ಟೊಮೆಟೊ ಹಾಕಿ ಮಿಕ್ಸ್ ಮಾಡಿ.
* ಸ್ವಲ್ಪ ನಿಂಬೆ ರಸ ಸೇರಿಸಿ, ಮಿಕ್ಸ್ ಮಾಡಿ.
* ಈಗ ಅಕ್ಕಿ ತೊಳೆಯಿರಿ. ಈಗ ಅಕ್ಕಿಯನ್ನು ಚಿಕನ್ ಮಿಶ್ರಣಕ್ಕೆ ಹಾಕಿ ಮತ್ತೆ 3-4 ಆ ಮಸಾಲೆಯಲ್ಲಿಯೇ ಬೇಯಲು ಬಿಟ್ಟು, ಈಗ ಅಕ್ಕಿ ಬೇಯಲು ತಕ್ಕ ನೀರು ಸೇರಿಸಿ ಕುಕ್ಕರ್ ಬಾಯಿ ಮುಚ್ಚಿ ಒಂದು ವಿಶಲ್ ಬರುವವರೆಗೆ ಬೇಯಿಸಿ.
ಕೆಲವು ಕುಕ್ಕರ್‌ನಲ್ಲಿ ಒಂದು ವಿಶಲ್ ಸಾಕು, ಇನ್ನು ಕಲವು ಕುಕ್ಕರ್‌ನಲ್ಲಿ 2 ವಿಶಲ್ ಬೇಕು, ನೀವು ಪಲಾವ್ ಬೇಯಿಸಲು ಎಷ್ಟು ವಿಶಲ್ ಹಾಕಿಸುತ್ತೀರೋ ಅಷ್ಟು ಹಾಕಿಸಿ.
ಕುಕ್ಕರ್‌ನ ಆವಿ ಹೋದ ಮೇಲೆ ಬಿರಿಯಾನಿ ಒಮ್ಮೆ ಮಿಕ್ಸ್ ಮಾಡಿ ಅದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಯಮ್ಮೀ ಚಿಕನ್ ಬಿರಿಯಾನಿ ರೆಡಿ.
- ನೀವು ಬೇಕಿದ್ದರೆ ಕೊನೆಗೆ ಈರುಳ್ಳಿ ಸ್ವಲ್ಪ ತುಪ್ಪದಲ್ಲಿ ಫ್ರೈ ಮಾಡಿ ಸೇರಿಸಿದರೆ ಇನ್ನೂ ಸೂಪರ್ ಆಗಿರುತ್ತದೆ
ಮಾಡುವ ವಿಧಾನ
* ಕುಕ್ಕರ್ ಬಿಸಿ ಮಾಡಿ, ಅದಕ್ಕೆ ತುಪ್ಪ ಹಾಕಿ ಬಿಸಿ ಮಾಡಿ.
* ತುಪ್ಪ ಬಿಸಿಯಾದಾಗ ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಹಸಿ ಮೆಣಸಿನಕಾಯಿ,
ಕರಿಬೇವು ಹಾಕಿ.
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 1 ನಿಮಿಷ ಫ್ರೈ ಮಾಡಿ, ಈಗ ಈರುಳ್ಳಿ ಹಾಕಿ
ಅದು ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ. ನಂತರ ಕೊತ್ತಂಬರಿ
-ಪುದೀನಾ ಸೊಪ್ಪು ಪೇಸ್ಟ್ ಹಾಕಿ ಕೂಡ 2-3 ನಿಮಿಷ ಫ್ರೈ ಮಾಡಿ.

*ಈಗ ಚಿಕನ್ ಹಾಕಿ, ಕಸೂರಿ ಮೇತಿ ಸೇರಿಸಿ.
*ಈಗ ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಅರಿಶಿಣ ಪುಡಿ, ಗರಂ ಮಸಾಲೆ, ಜೀರಿಗೆ
ಪುಡಿ, ಚಿಕನ್ ಮಸಾಲೆ ಪುಡಿ ಹಾಕಿ ಮಿಕ್ಸ್ ಮಾಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ
ಒಂದು 5 ನಿಮಿಷ ಬೇಯಿಸಿ.
* ನಂತರ ಬಿರಿಯಾನಿ ಮಸಾಲೆ ಹಾಕಿ.
* ಈಗ ಟೊಮೆಟೊ ಹಾಕಿ ಮಿಕ್ಸ್ ಮಾಡಿ.
* ಸ್ವಲ್ಪ ನಿಂಬೆ ರಸ ಸೇರಿಸಿ, ಮಿಕ್ಸ್ ಮಾಡಿ.
* ಈಗ ಅಕ್ಕಿ ತೊಳೆಯಿರಿ. ಈಗ ಅಕ್ಕಿಯನ್ನು ಚಿಕನ್ ಮಿಶ್ರಣಕ್ಕೆ ಹಾಕಿ ಮತ್ತೆ 3-4
ಆ ಮಸಾಲೆಯಲ್ಲಿಯೇ ಬೇಯಲು ಬಿಟ್ಟು, ಈಗ ಅಕ್ಕಿ ಬೇಯಲು ತಕ್ಕ ನೀರು ಸೇರಿಸಿ
ಕುಕ್ಕರ್ ಬಾಯಿ ಮುಚ್ಚಿ ಒಂದು ವಿಶಲ್ ಬರುವವರೆಗೆ ಬೇಯಿಸಿ.
ಕೆಲವು ಕುಕ್ಕರ್‌ನಲ್ಲಿ ಒಂದು ವಿಶಲ್ ಸಾಕು, ಇನ್ನು ಕಲವು ಕುಕ್ಕರ್‌ನಲ್ಲಿ 2
ವಿಶಲ್ ಬೇಕು, ನೀವು ಪಲಾವ್ ಬೇಯಿಸಲು ಎಷ್ಟು ವಿಶಲ್ ಹಾಕಿಸುತ್ತೀರೋ ಅಷ್ಟು
ಹಾಕಿಸಿ.
ಕುಕ್ಕರ್‌ನ ಆವಿ ಹೋದ ಮೇಲೆ ಬಿರಿಯಾನಿ ಒಮ್ಮೆ ಮಿಕ್ಸ್ ಮಾಡಿ ಅದನ್ನು ಕೊತ್ತಂಬರಿ
ಸೊಪ್ಪಿನಿಂದ ಅಲಂಕರಿಸಿದರೆ ಯಮ್ಮೀ ಚಿಕನ್ ಬಿರಿಯಾನಿ ರೆಡಿ.



Click it and Unblock the Notifications
