Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬೆಣ್ಣೆಯಂತೆ ಮೃದುವಾದ ಸಿಲ್ಕ್ ದೋಸೆ ರೆಸಿಪಿ ಇಲ್ಲಿದೆ..! ಈ 5 ವಸ್ತು ಇದ್ರೆ ಸಾಕು
ನಿತ್ಯ ಮಾಡಿದರು ಬೇಸರ ಆಗದೇ ಇರುವ ತಿಂಡಿ ಎಂದರೆ ಅದು ದೋಸೆ. ಏಕೆಂದರೆ ಬೆಳಗ್ಗೆ, ಸಂಜೆ, ರಾತ್ರಿ ಹೀಗೆ ಯಾವ ಸಮಯವಾದರು ಈ ದೋಸೆಯನ್ನು ಸವಿಯಬಹುದು. ದೋಸೆಯನ್ನು ನಾನಾ ವಿಧವಾಗಿಯೂ ಮಾಡಬಹುದು. ಮಸಾಲಾ ದೋಸೆ, ಈರುಳ್ಳಿ ದೋಸೆ, ಸೆಟ್ ದೋಸೆ, ನೀರು ದೋಸೆ, ರವೆ ದೋಸೆ, ಖಾಲಿ ದೋಸೆ ಹೀಗೆ ಹತ್ತಾರು ರೀತಿಯಲ್ಲಿ ಸವಿಯಬಹುದು.
ಆದರೆ ಇದೆಲ್ಲದರಕ್ಕಿಂತಲೂ ನೀವು ಸ್ವಲ್ಪ ವಿಭಿನ್ನ ರುಚಿಯ ದೋಸೆ ಮಾಡಲು ಮುಂದಾಗುವುದಾದರೆ ನಾವಿಂದು ನಿಮಗೆ ಸಿಲ್ಕ್ ದೋಸೆ ಬಗ್ಗೆ ತಿಳಿಸುತ್ತೇವೆ. ಹೌದು ಸಿಲ್ಕ್ ದೋಸೆ ಎಂಬ ಹೊಸ ರೀತಿಯ ವಿಧವೊಂದು ಸಿಕ್ಕಾಪಟ್ಟೆ ರುಚಿ ನೀಡುತ್ತಿದೆ. ಇತ್ತಿಚಿಗೆ ಎಲ್ಲಾ ದಕ್ಷಿಣ ಭಾರತದ ಖಾದ್ಯ ನೀಡುವ ಹೋಟೆಲ್‌ಗಳು ಈ ಸಿಲ್ಕ್ ದೋಸೆ ಹಿಂದೆ ಬಿದ್ದಿವೆ.

ಹಾಗಾದರೆ ಈ ಸಿಲ್ಕ್ ದೋಸೆ ಮಾಡುವುದು ಹೇಗೆ? ಸಿಲ್ಕ್ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಸಿಲ್ಕ್ ದೋಸೆ ಮಾಡುವ ಪಾಕವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಿಲ್ಕ್ ದೋಸೆ ಮಾಡಲು ಯಾವೆಲ್ಲಾ ವಸ್ತು ಬೇಕು?
- ಅಕ್ಕಿ- 1 ಕಪ್
- ತೆಂಗಿನಕಾಯಿ ಹಾಲು-1 ಕಪ್
- ಮೊಟ್ಟೆ-2
- ಕ್ಯಾರೆಟ್-1
- ಕೊತ್ತಂಬರಿ ಸೊಪ್ಪು
- ಉಪ್ಪು
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನೀವು ಮೊಟ್ಟೆ ಬಳಸದೆಯೂ ಈ ದೋಸೆ ಮಾಡಬಹುದು. ಆದರೆ ಮೃದುವಾದ ದೋಸೆ ಮಾಡಬೇಕಾದರೆ ಮೊಟ್ಟೆ ಹಾಕಿದರೆ ಉತ್ತಮ. ಮೊಟ್ಟೆ ಸೇವಿಸದೇ ಇರುವವರು ಮೊಟ್ಟೆಯನ್ನು ಹಾಕದೆ ಮಾಡಿ ನೋಡಿ.
ಸಿಲ್ಕ್ ದೋಸೆ ಮಾಡುವ ಪಾಕ ವಿಧಾನ
ಅಕ್ಕಿಯನ್ನು ಕನಿಷ್ಠ 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ಬಳಿಕ ನೀರು ತೆಗೆದು ಅಕ್ಕಿಯನ್ನು ಒಣಗಿಸಿ. ಅಕ್ಕಿ ಒಣಗಿದ ಬಳಿಕ ಮಿಕ್ಸರ್ ಜಾರ್‌ನಲ್ಲಿ ಹಾಕಿ ರುಬ್ಬಿಕೊಳ್ಳಿ. ರುಬ್ಬುವಾಗ ಅದಕ್ಕೆ ಮೊಟ್ಟೆ ಹಾಗೂ ತೆಂಗಿನಕಾಯಿ ಹಾಲು ಹಾಕಿ ಹಿಟ್ಟು ನಯವಾಗಿ ಬರುವಂತೆ ರುಬ್ಬಿಕೊಳ್ಳಿ.
ನುಣ್ಣಗೆ ಕತ್ತರಿಸಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು ಮತ್ತು ಉಪ್ಪನ್ನು ದೋಸೆ ಹಿಟ್ಟಿನಲ್ಲಿ ಸೇರಿಸಿ. ಸಂಪೂರ್ಣವಾಗಿ ಮಿಶ್ರಣ ಮಾಡಿ. ಒಲೆ ಮೇಲೆ ಪಾತ್ರೆಯಿಟ್ಟು ತುಪ್ಪ ಇಲ್ಲವೆ ಎಣ್ಣೆ ಸವರಿ, ಕಾದ ಬಳಿಕ ರುಬ್ಬಿಕೊಂಡಿರುವ ನಯವಾದ ಹಿಟ್ಟನ್ನು ಅದರ ಮೇಲೆ ಹಾಕಿ ಚೆನ್ನಾಗಿ ಹರಡಿ. ಎರಡೂ ಕಡೆ ಗೋಲ್ಡನ್ ಬ್ರೌನ್ ಕಲರ್ ಬರುವವರೆಗೂ ದೋಸೆಯನ್ನು ಕಾಯಿಸಿ. ಇಷ್ಟೇ ಇದಿಷ್ಟು ಮಾಡಿದರೆ ನಿಮ್ಮ ಮುಂದೆ ರೇಷ್ಮೆಯಂತಹ ದೋಸೆ ರೆಡಿಯಾಗುತ್ತದೆ.
ಈ ದೋಸೆಯನ್ನು ಕಾಯಿ ಚಟ್ನಿ ಜೊತೆ ಸವಿಯಲು ನೀಡಿದರೆ 3ರಿಂದ 4 ದೋಸೆ ಸವಿಯಬಹುದು. ಇದು ಹೆಚ್ಚು ಮೃಧುವಾಗಿರುತ್ತದೆ. ಜೊತೆಗೆ ಫೈಬರ್ ಮತ್ತು ಮೊಟ್ಟೆಯ ಅಂಶದಿಂದ ಆರೋಗ್ಯಕರವೂ ಹೌದು. ಚಟ್ನಿಯ ಜೊತೆ ಆಲೂಗಡ್ಡೆಯ ಪಲ್ಯವೂ ಈ ದೋಸೆಗೆ ಮತ್ತಷ್ಟು ರುಚಿತರಲಿದೆ.
ಆಲೂಗಡ್ಡೆ ಪಲ್ಯ ಮಾಡುವುದು ಹೇಗೆ?
ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿಕೊಳ್ಳಿ ಬಳಿಕ ಆಲೂಗಡ್ಡೆಯನ್ನು ಹಿಸುಕಿ
ಪುಡಿ ಮಾಡಿಕೊಳ್ಳಿ. ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ ಇದಕ್ಕೆ ಜೀರಿಗೆ
ಸೇರಿಸಿ. ಉಪ್ಪು ಹಾಗೂ ಮೆಣಸಿನ ಹುಡಿ ಮಿಶ್ರ ಮಾಡಿಕೊಳ್ಳಿ. ಇದೆಲ್ಲವನ್ನೂ
ಚೆನ್ನಾಗಿ ಮಿಶ್ರ ಮಾಡಿಕೊಂಡು ಬೇಯಿಸಿದ ಆಲೂಗಡ್ಡೆ ಚಿನ್ನದ ಬಣ್ಣಕ್ಕೆ
ತಿರುಗುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ.ಇನ್ನು ಇದಕ್ಕೆ ಅರಶಿನ, ಬೆಳ್ಳುಳ್ಳಿ
ಹುಡಿ, ಮೆಣಸು ಮತ್ತು ಉಪ್ಪು ಚಿಮುಕಿಸಿ. ಇದೆಲ್ಲವನ್ನೂ ಚೆನ್ನಾಗಿ ಮಿಶ್ರಣ
ಮಾಡಿಕೊಂಡು ಸ್ವಲ್ಪ ನೀರು ಹಾಕಿ ಬೇಯಿಸಿ. ಇದನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ
ಮತ್ತು ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
ರುಚಿಯನ್ನು ನಿಯಂತ್ರಿಸಿಕೊಳ್ಳಲು ಸ್ವಲ್ಪ ಸಕ್ಕರೆಯನ್ನು ಇದಕ್ಕೆ ಸೇರಿಸಿದರೆ
ಆಲೂಗಡ್ಡೆ ಪಲ್ಯ ರೆಡಿ.



Click it and Unblock the Notifications
