Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಶ್ರಾವಣ ಉಪವಾಸ ಮಾಡುವವರೆಗೆ ಸಾಬುದಾನ ಪಡ್ಡು ರೆಸಿಪಿ
ಶ್ರಾವಣ ಮಾಸದಲ್ಲಿ ಶ್ರಾವಣ ಸೋಮವಾರ, ಶ್ರಾವಣ ಮಂಗಳವಾರ, ಶ್ರಾವಣ ಶುಕ್ರವಾರ, ಶ್ರಾವಣ ಶನಿವಾರ ಉಪವಾಸ ಮಾಡುತ್ತಾರೆ. ಶ್ರಾವಣದಲ್ಲಿ ಉಪವಾಸವಿದ್ದಾಗ ವ್ರತ ನಿಯಮದ ಪ್ರಕಾರ ಆಹಾರ ದಸೇವಿಸಬೇಕು. ಈ ಮಾಸದಲ್ಲಿ ಈರುಳ್ಳಿ- ಬೆಳ್ಳುಳ್ಳಿ ಬಳಸುವಂತಿಲ್ಲ, ಅಲ್ಲದೆ ಶ್ರಾವಣ ಮಾಸದ ಉಪವಾಸದ ದಿನಗಳಲ್ಲಿ ಸವಿಯಲು ಸಾಬುದಾನ-ಆಲೂ ಪಡ್ಡು ರೆಸಿಪಿ ನೀಡಿದ್ದೇವೆ.
ಇದು ತುಂಬಾ ರುಚಿಯಾಗಿರುತ್ತದೆ, ಅಲ್ಲದೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇದು ಉಪವಾಸದ ಸಮಯದಲ್ಲಿ ಸುಸ್ತಾಗುವುದನ್ನು ತಡೆಗಟ್ಟುತ್ತದೆ, ದೇಹಕ್ಕೆ ಶಕ್ತಿ ತುಂಬುವುದು. ಬನ್ನಿ ಈ ರೆಸಿಪಿ ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ನೆನೆ ಹಾಕಿದ ಸಾಬುದಾನ
4 ಬೇಯಿಸಿದ ಆಲೂಗಡ್ಡೆ
1/2 ಚಮಚ ರೋಸ್ಟ್ ಮಾಡಿದ ಪುಡಿ
1 ಚಮಚ ಶುಂಠಿ (ಚಿಕ್ಕದಾಗಿ ಕತ್ತರಿಸಿದ್ದು), ಹಸಿ ಮೆಣಸಿನ ಪೇಸ್ಟ್ 1 ಚಮಚ
2 ಚಮಚ ನೆಲಗಡಲೆ ಪುಡಿ
ಉಪ್ಪು (ಉಪವಾಸ ಸಮಯದಲ್ಲಿ ಬ್ಲ್ಯಾಕ್ ಸಾಲ್ಟ್ ಬಳಸಿ)
1 ಚಮಚ ಎಣ್ಣೆ
ಮಾಡುವ ವಿಧಾನ
ಸಾಬುದಾನವನ್ನು 2-3 ಗಂಟೆ ನೆನೆಹಾಕಿ.
ಆಲೂಗಡ್ಡೆಯನ್ನು ಮ್ಯಾಶ್ ಮಾಡಿ.
ನಂತರ ಮ್ಯಾಶ್ ಮಾಡಿದ ಆಲೂಗಡ್ಡೆಗೆ ಸಾಬುದಾನ, 1/2 ಚಮಚ ರೋಸ್ಟ್ ಮಾಡಿದ ಜೀರಿಗೆ
ಪುಡಿ, ಸುಂಟಿ, ಹಸಿ ಮೆಣಸಿನ ಪೇಸ್ಟ್, 2 ಚಮಚ ನೆಲಗಡಲೆ ಪುಡಿ ಮತ್ತು ಉಪ್ಪು ಹಾಕಿ
ಮಿಕ್ಸ್ ಮಾಡಿ, ವಡೆ ರೀತಿ ಮಾಡಿ.
ಪ್ಯಾನ್ ಬಿಸಿ ಮಾಡಿ ಅದರಲ್ಲಿ ತಟ್ಟಿದ ವಡೆ ಹಾಕಿ ಎರಡೂ ಬದಿ ಕಂದು ಬಣ್ಣಕ್ಕೆ
ಬರುವವರೆಗೆ ರೋಸ್ಟ್ ಮಾಡಿ.
ರುಚಿ ರುಚಿಯಾದ ಸಾಬುದಾನ ವಡೆ ಅಥವಾ ಪಡ್ಡು ರೆಡಿ(ನೀವು ಪಡ್ಡು ತವಾದದಲ್ಲಿ ಬೇಯಸಿದರೆ ಅದರೊಳಗಡೆ ಕೂಡ ಚೆನ್ನಾಗಿ ರೋಸ್ಟ್ ಆಗಿರುತ್ತದೆ.
ಶ್ರಾವಣ ಮಾಸದ ಉಪವಾಸದ ಪ್ರಯೋಜನಗಳು
ಶ್ರಾವಣ ಮಾಸದಲ್ಲಿ ಉಪವಾಸ ಮಾಡುವುದರಿಂದ ಧಾರ್ಮಿಕವಾಗಿ ಮಾತ್ರವಲ್ಲ ಆರೋಗ್ಯದ
ದೃಷ್ಟಿಯಿಂದಲೂ ಒಳ್ಳೆಯದು. ಉಪವಾಸವಿದ್ದು ದೇವರ ಆರೋಗ್ಯವನ್ನು ಮಾಡುವುದರಿಂದ
ನಮ್ಮ ಆರೋಗ್ಯ ಉತ್ತಮವಾಗುತ್ತದೆ ಅಲ್ಲದೆ ದೇವರ ಆರಾಧನೆ ಕಡೆಗೆ
ಗಮನಹರಿಸಬಹುದು.
ಶ್ರಾವಣ ಉಪವಾಸ ಮಾಡುವುದರಿಂದ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ, ಈ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು ಅಲ್ಲದೆ ವಾರದಲ್ಲಿ ಕೆಲ ದಿನಗಳು ಉಪವಾಸ ಮಾಡುವುದರಿಂದ ಆರೋಗ್ಯ ಕಾಪಾಡಲು ತುಂಬಾನೇ ಸಹಕಾರಿ.
ಶ್ರಾವಣ ಮಾಸದ ಆಹಾರಕ್ರಮ ಹೇಗಿರಬೇಕು?ಈ ಅವಧಿಯಲ್ಲಿ ಹಸಿ ತರಕಾರಿ, ಹಣ್ಣುಗಳು, ಲಘ ಆಹಾರವನ್ನು ಸೇವಿಸಬೇಕು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.
ಈ ಅವಧಿಯಲ್ಲಿ ಸಾಬುದಾನ, ಗೋಧಿ ಈ ಬಗೆಯ ವಸ್ತುಗಳನ್ನು ಬಳಸಿ ಆಹಾರ ಮಾಡಿ ಸೇವಿಸಬಹುದು.



Click it and Unblock the Notifications
