Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಶಿವರಾತ್ರಿಗೆ ಶಿವನಿಗೆ ನೈವೇದ್ಯ ಅರ್ಪಿಸಲು ತಂಬಿಟ್ಟು ರೆಸಿಪಿ
ಶಿವರಾತ್ರಿ ಹಬ್ಬದಲ್ಲಿ ಮಾಡುವ ಪ್ರಮುಖ ಸಿಹಿ ತಿಂಡಿಗಳಲ್ಲೊಂದು ತಂಬಿಟ್ಟು, ಈ ತಂಬಿಟ್ಟು ಹಲವರು ಹಲವು ರುಚಿಯಲ್ಲಿ ತಯಾರಿಸುತ್ತಾರೆ, ಇಲ್ಲಿ ಉರುಗಡಲೆ, ನೆಲಗಡಲೆ ಎಲ್ಲಾ ಸೇರಿಸಿ ಮಾಡುವ ತಂಬಿಟ್ಟು ರೆಸಿಪಿ ನೀಡಿದ್ದೇವೆ, ಇದನ್ನು ಒಮ್ಮೆ ತಿಂದರೆ ಮತ್ತೆ-ಮತ್ತೆ ತಿನ್ನಬೇಕೆನಿಸುತ್ತೆ ನೋಡಿ:

ಬೇಕಾಗುವ ಸಾಮಗ್ರಿ
2 ಕಪ್ ಹುರಿಗಡಲೆ
1 ಕಪ್ ನೆಲಗಡಲೆ
8-10 ಚಮಚ ಎಳ್ಳು
3-4 ಚಮಚ ಗಸೆಗಸೆ
1 ಕಪ್ ಕೊಬ್ಬರಿ
2-3 ಏಲಕ್ಕಿ
ಬೆಲ್ಲ(ಒಂದೂವರೆ ಅಥವಾ 2 ಕಪ್,ಪುಡಿ ಮಾಡಿದ್ದು)
ಮಾಡುವ ವಿಧಾನ
1ಕಪ್ ನೆಲಗಡಲೆಯನ್ನು ಹುರಿಯಿರಿ, ಕಡಿಮೆ ಉರಿಯಲ್ಲಿ ರೋಸ್ಟ್ ಮಡಿ.
ನಂತರ ಅದೇ ಪಾತ್ರೆ 8 ಚಮಚ ಎಳ್ಳು ಹಾಕಿ ರೋಸ್ಟ್ ಮಾಡಿ, ಎಳ್ಳು ರೋಸ್ಟ್
ಮಾಡುವಾಗ ಸೌಟ್‌ನಿಂದ ಆಡಿಸುತ್ತಾ ಇರಿ, ಎಳ್ಳು ಒಂದು ಪಾತ್ರೆಗೆ ಹಾಕಿ
ಈಗ 3 ಚಮಚ ಗಸೆಗಸೆ ಹಾಕಿ.
ನೆಲಗಡಲೆ ತಣ್ಣಗಾದ ಕೈಯಿಂದ ಒಮ್ಮೆ ರಬ್ ಮಾಡಿದರೆ ಅದರ ಸಿಪ್ಪೆ ಬರುತ್ತದೆ,
ಸಿಪ್ಪೆ ತೆಗೆದ ನೆಲಗಡಲೆಯಲ್ಲಿ ಸ್ವಲ್ಪ
ಮಿಕ್ಸಿ ಜಾರ್‌ಗೆ ಹಾಕಿ, ನಂತರ ರೋಸ್ಟ್ ಮಾಡಿದ ಗಸೆ ಗಸೆ ಸೇರಿಸಿ, 2 ಏಲಕ್ಕಿ
ಹಾಕಿ, 2 ಕಪ್ ಹುರಿಗಡಲೆ ಹಾಕಿ
ಈಗ ನೀವು ಈ ಮಿಶ್ರಣವನ್ನು ತುಂಬಾ ನುಣ್ಣಗೆ ಪುಡಿ ಮಾಡಬೇಕು.
ಈಗ ರೆಡಿಯಾದ ಪುಡಿಯನ್ನು ಒಂದು ಬೌಲ್‌ಗೆ ಹಾಕಿ. ಈಗ ಈ ಬೌಲ್‌ಗೆ ಸಿಪ್ಪೆ ಸುಲಿದ
ನೆಲ ಗಡಲೆ ಹಾಕಿ,ಹುರಿದ ಎಳ್ಳು ಸೇರಿಸಿ, 1 ಕಪ್ ಕೊಬ್ಬರಿ ತುರಿ ಸೇರಿಸಿ ಮಿಕ್ಸ್
ಮಾಡಿ
ನಂತರ ಈ ಮಿಶ್ರಣ ಮಿಕ್ಸ್ ಮಾಡಿ
ಈಗ ನೀವು 2 ಕಪ್ ಬೆಲ್ಲ ಹಾಕಿ, ಸ್ವಲ್ಪ ನೀರು ಹಾಕಿ ಕರಗಿಸಿ, ಬೆಲ್ಲದ ಪಾಕ
ರೆಡಿಯಾದಾಗ ಉರಿ ಆಫ್ ಮಾಡಿ, ಇದನ್ನು ಸೋಸಿ.
ಈಗ ರೆಡಿ ಮಾಡಿಟ್ಟ ಪುಡಿ ಬೆಲ್ಲದ ಪಾಕ ಸ್ವಲ್ಪ-ಸ್ವಲ್ಪ ಹಾಕಿ ಮಿಕ್ಸ್ ಮಾಡಿ, 2
ಚಮಚ ತುಪ್ಪ ಕೂಡ ಸೇರಿಸಿ, ಹೀಗೆ ಮಿಕ್ಸ್ ಮಾಡಿದ ಬಳಿಕ ಉಂಡೆ ಕಟ್ಟಿದರೆ ತಂಬಿಟ್ಟು
ರೆಡಿ.



Click it and Unblock the Notifications
