Just In
- 3 hrs ago
Today Rashi Bhavishya: ಶನಿವಾರದ ದಿನ ಭವಿಷ್ಯ: ಕನ್ಯಾ, ವೃಶ್ಚಿಕ, ಕುಂಭ ರಾಶಿಯವರು ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
- 11 hrs ago
ಮಳೆಗಾಲದಲ್ಲಿ ಉಲ್ಬಣವಾಗುವ ಅಸ್ತಮಾ ನಿಯಂತ್ರಣಕ್ಕೆ ಇಲ್ಲಿವೆ ಟಿಪ್ಸ್
- 15 hrs ago
ಮಳೆಗಾಲದಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೀಗಿದ್ದರೆ ಉತ್ತಮ
- 16 hrs ago
ಸಂಖ್ಯಾಶಾಸ್ತ್ರ: ಈ ಜನ್ಮ ಸಂಖ್ಯೆ ಹೊಂದಿರುವವರ ದಾಂಪಾತ್ಯದಲ್ಲಿ ಸಮಸ್ಯೆಗಳೇ ಹೆಚ್ಚು
Don't Miss
- Sports
IPL 2022: ಕ್ವಾಲಿಫೈಯರ್ 1 ಪಂದ್ಯ ನಿಗದಿ, ಗುಜರಾತ್ ಜೊತೆ ಸೆಣಸಾಡಲಿದೆ ಈ ತಂಡ; ಇಲ್ಲಿದೆ ವಿವರ
- News
ಅಂತರಾಷ್ಟ್ರೀಯ ಯೋಗ ದಿನಾಚರಣೆ: ಸಾಂಸ್ಕೃತಿಕ ನಗರಿ ಮೈಸೂರಿಗೆ ಮೋದಿ ಭೇಟಿ
- Movies
ಕಾನ್ ಫೆಸ್ಟಿವಲ್ ಬಗ್ಗೆ ಕಿರುತೆರೆ ನಟಿ ಶ್ವೇತಾ ಬಸು ಪ್ರಸಾದ್ ಅಸಮಾಧಾನ
- Technology
ಕಡಿಮೆ ಬೆಲೆಯಲ್ಲಿ ಆಕರ್ಷಕ ಪ್ರಯೋಜನ ಪಡೆದ ಟಾಪ್ ಏರ್ಟೆಲ್ ಪ್ಲ್ಯಾನ್ಗಳು!
- Finance
ಮೇ 20ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಕಾಯುವಿಕೆ ಅಂತ್ಯ: ಭಾರೀ ಬದಲಾವಣೆಗಳೊಂದಿಗೆ ಬಿಡುಗಡೆಗೆ ಸಿದ್ದವಾದ ನ್ಯೂ ಜನರೇಷನ್ ಮಹೀಂದ್ರಾ ಸ್ಕಾರ್ಪಿಯೋ
- Education
ESIC Karnataka Recruitment 2022 : 5 ಸಹಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಂಕ್ರಾಂತಿ : ಎಳ್ಳು-ಬೆಲ್ಲದ ಲಡ್ಡು ರೆಸಿಪಿ
ಸಂಕ್ರಾಂತಿಗೆ ಎಳ್ಳು-ಬೆಲ್ಲ ತಯಾರಿಸಲಾಗುವುದು, ಇದರ ಜೊತೆಗೆ ನೀವು ಅನೇಕ ಬಗೆಯ ಸಿಹಿ ತಿಂಡಿ ಕೂಡ ಮಾಡಬಹುದು. ನಾವಿಲ್ಲಿ ಸಂಕ್ರಾಂತಿಗೆ ಎಳ್ಳು-ಬೆಲ್ಲದ ಲಡ್ಡು ಮಾಡುವ ರೆಸಿಪಿ ನೀಡಿದ್ದೇವೆ. ಚಳಿಗಾಲದಲ್ಲಿ ಆರೋಗ್ಯಕ್ಕೆ ಹೇಳಿ ಮಾಡಿಸಿದ ರೆಸಿಪಿ ಇದಾಗಿದೆ. ಈ ಎಳ್ಳು-ಬೆಲ್ಲದ ಉಂಡೆ ಮಾಡಿಟ್ಟು ದಿನಾ ಒಂದು ಸವಿದರೆ ಆರೋಗ್ಯಕ್ಕೆ, ತ್ವಚೆಗೆ ತುಂಬಾನೇ ಒಳ್ಳೆಯದು. ನೆಲಗಡಲೆ, ಎಳ್ಳಿನಲ್ಲಿರುವ ಎಣ್ಣೆಯಂಶ ತ್ವಚೆ ರಕ್ಷಣೆ ಮಾಡಿದರೆ ಬೆಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.
ಈ ಎಳ್ಳು-ಬೆಲ್ಲದ ರೆಸಿಪಿ ಮಾಡುವುದು ದೊಡ್ಡ ಕಷ್ಟವೇನಿಲ್ಲ, ತುಂಬಾ ಸುಲಭವಾಗಿ ಮಾಡಬಹುದು ನೋಡಿ:
Recipe By: Reena TK
Recipe Type: snacks
Serves: 5
-
ಬೇಕಾಗುವ ಸಾಮಗ್ರಿ
*145ಗ್ರಾಂ ಅಥವಾ 1 ಕಪ್ ಬಿಳಿ ಎಳ್ಳು
* 40 ಗ್ರಾಂ ನೆಲಗಡಲೆ
* 1/2 ಕಪ್ ತೆಂಗಿನ ತುರಿ
* 100ಗ್ರಾಂ ಅಥವಾ ಮುಕ್ಕಾಲು ಕಪ್ ತುರಿದ ಬೆಲ್ಲ
* 1/2 ಚಮಚ ಏಲಕ್ಕಿ ಪುಡಿ
-
ಮಾಡುವುದು ಹೇಗೆ?
1. ಎಳ್ಳನ್ನು ಹುರಿಯಿರಿ
* ಎಳ್ಳನ್ನು ಸ್ವಚ್ಛ ಮಾಡಿ, ಕಲ್ಲು ಇದ್ದರೆ ತೆಗೆಯಿರಿ. ಪ್ಯಾನ್ ಬಿಸಿ ಮಾಡಿ ಕಡಿಮೆ ಉರಿಯಲ್ಲಿ ಹುರಿಯಿರಿ.
* ಎಳ್ಳು ಚೆನ್ನಾಗಿ ರೋಸ್ಟ್ ಮಾಡಬೇಕು, ಎಳ್ಳನ್ನು ಹುರಿದಾಗ ಚಟ್ಪಟ್ ಅಂತ ಶಬ್ದ ಬರುತ್ತದೆ ಅಷ್ಟು ಹೊತ್ತು ಹುರಿಯಬೇಕು, ನಂತರ ಅದನ್ನು ಒಂದು ಪ್ಲೇಟ್ನಲ್ಲಿ ಹಾಕಿಡಿ.
2. ನೆಲಗಡಲೆ ಹುಡಿಯಿರಿ
* ನೆಲಗಡಲೆಯನ್ನು ಕೂಡ ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ನಂತರ ತಣ್ಣಗಾಗಲು ಪ್ಲೇಟ್ನಲ್ಲಿ ಹಾಕಿ.
3. ತೆಂಗಿನ ತುರಿಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ತೆಂಗಿನ ತುರಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವಾಗ ತಣ್ಣಗಾಗಲು ತಟ್ಟೆಯಲ್ಲಿ ಹಾಕಿಡಿ.
4. ವಿಧಾನ
* ಈಗ ಎಳ್ಳು, ನೆಲಗಡಲೆ, ತೆಮಗಿನ ತುರಿ ತರಿ-ತರಿಯಾಗಿ ರುಬ್ಬಿ, ನಂತರ ಬೆಲ್ಲವನ್ನು ಪುಡಿ ಮಾಡಿ.
* ಈಗ ಒಂದು ಬೌಲ್ಗೆ ಬೆಲ್ಲ, ರುಬ್ಬಿದ ಮಿಶ್ರಣ ಹಾಕಿ, ಏಲಕ್ಕಿ ಪುಡಿ ಮಿಕ್ಸ್ ಮಾಡಿ, ಚಿಕ್ಕ-ಚಿಕ್ಕ ಉಂಡೆ ಕಟ್ಟಿದರೆ ಎಳ್ಳು-ಬೆಲ್ಲದ ಲಡ್ಡು ರೆಡಿ.
- ಇದರ ಜೊತೆಗೆ ಡ್ರೈ ಫ್ರೂಟ್ಸ್ ಪುಡಿ ಮಾಡಿ ಸೇರಿಸಬಹುದು