For Quick Alerts
ALLOW NOTIFICATIONS  
For Daily Alerts

ಬ್ರೇಕ್‌ಫಾಸ್ಟ್‌ಗೆ ಫಟಾಫಟ್ ರೆಸಿಪಿ: ರವೆಯ ಪ್ಯಾನ್‌ಕೇಕ್

Posted By:
|

ಬ್ರೇಕ್‌ಫಾಸ್ಟ್‌ಗೆ ಫಟಾಫಟ್‌ ಮಾಡುವ ಬ್ರೇಕ್‌ ಫಾಸ್ಟ್‌ ರೆಸಿಪಿಗಳಲ್ಲೊಂದು ರವೆಯಿಂದ ಮಾಡುವ ಈ ಪ್ಯಾನ್‌ಕೇಕ್. ಏನಾದರು ಅರ್ಜೆಂಟ್‌ವಿದ್ದಾಗ, ದೋಸೆ, ಇಡ್ಲಿಗೆ ಹಿಟ್ಟು ಮನೆಯಲ್ಲಿ ಇಲ್ಲ ಅಂದ್ರೆ ಪಟ್‌ ಅಂತ ಈ ಪ್ಯಾನ್‌ಕೇಕ್‌ ಮಾಡಬಹುದು ನೋಡಿ.

Rava pancake recipe

ಇದಕ್ಕೆ ಬಳಸುವ ಸಾಮಗ್ರಿಗಳು ಸಾಮಾನ್ಯವಾಗಿ ಮನೆಯಲ್ಲಿಯೇ ಇರುತ್ತದೆ, ಇನ್ನು ಇದು ದೋಸೆಗಿಂತ ಸ್ವಲ್ಪ ಭಿನ್ನ ರುಚಿಯಲ್ಲಿ ಇರುವುದರಿಂದ ಮಕ್ಕಳಿಗೂ ತುಂಬಾ ಇಷ್ಟವಾಗುವುದು. ತುಂಬಾ ಮೃದುವಾಗಿರುವ ಈ ಪ್ಯಾನ್‌ಕೇಕ್ 9 ತಿಂಗಳ ನಂತರದ ಮಕ್ಕಳಿಗೆ ತಿನ್ನಲು ಕೈಯಲ್ಲಿಯೇ ಕೊಡಬಹುದು. ರವೆಯಿಂದ ಪ್ಯಾನ್‌ಕೇಕ್ ರೆಸಿಪಿ ನೀಡಿದ್ದೇವೆ ನೋಡಿ.

Rava PanCake Recipe,ರವೆಯ ಪ್ಯಾನ್‌ಕೇಕ್ ರೆಸಿಪಿ
Rava PanCake Recipe,ರವೆಯ ಪ್ಯಾನ್‌ಕೇಕ್ ರೆಸಿಪಿ
Prep Time
30 Mins
Cook Time
15M
Total Time
45 Mins

Recipe By: Reena TK

Recipe Type: Veg

Serves: 4

Ingredients
  • ಬೇಕಾಗುವ ಸಾಮಗ್ರಿ

    ರವೆ 2 ಕಪ್

    ಮೊಸರು 3/4 ಕಪ್

    ಎಲೆಕೋಸು 1/2 ಕಪ್ (ಚಿಕ್ಕದಾಗಿ ಕತ್ತರಿಸಿದ್ದು)

    ಕ್ಯಾರೆಟ್ 1/2 ಕಪ್ (ಚಿಕ್ಕದಾಗಿ ಕತ್ತರಿಸಿದ್ದು)

    ಕೊತ್ತಂಬರಿ ಸೊಪ್ಪು 1/4 ಕಪ್

    ರುಚಿಗೆ ತಕ್ಕ ಉಪ್ಪು

    ಹಸಿ ಮೆಣಸಿನಕಾಯಿ 1

    ಎಣ್ಣೆ 2 ಚಮಚ

    ನೀರು 1 ಕಪ್

    ಸರ್ವ್ ಮಾಡಲು ತೆಂಗಿನಕಾಯಿ ಚಟ್ನಿ

Red Rice Kanda Poha
How to Prepare
  • ಮಾಡುವ ವಿಧಾನ:

    1. ಒಂದು ದೊಡ್ಡ ಬೌಲ್‌ ತೆಗೆದುಕೊಂಡು ಅದರಲ್ಲಿ ಮೊಸರು, ನೀರು ಹಾಕಿ ಅದಕ್ಕೆ ರವೆ ಹಾಕಿ ಕಲೆಸಿ, ಮಿಶ್ರಣ ಗಟ್ಟಿಯಾದರೆ ಇನ್ನೂ ಸ್ವಲ್ಪ ನೀರು ಹಾಕಿ ಕಲೆಸಿ 30 ನಿಮಿಷ ಇಡಿ.

    2.ಈಗ ಕ್ಯಾಬೇಜ್, ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಉಪ್ಪು ಹಾಕಿ ಮಿಶ್ರ ಮಾಡಿ, ಈ ಸಾಮಗ್ರಿ ಸೇರಿಸಿದ ಮೇಲೆ ಸ್ವಲ್ಪ ನೀರು ಹಾಕಿ ಮತ್ತೊಮ್ಮೆ ಕಲೆಸಿ. ಮಿಶ್ರಣ ತುಂಬಾ ಮೃದುವಾಗಲು ಅದಕ್ಕೆ 1-2 ಚಮಚ ಎಣ್ಣೆ ಹಾಕಿ.

    3. ಈಗ ಪ್ಯಾನ್‌ಕೇಕ್ ಬಿಸಿ ಮಾಡಿ ಅದಕ್ಕೆ ಎಣ್ಣೆ ಸವರಿ ಅದಕ್ಕೆ ಹುಯ್ಯಿರಿ, ನಂತರ ಪಾತ್ರೆಯ ಬಾಯಿ ಮುಚ್ಚಿ 2 ನಿಮಿಷ ಬೇಯಿಸಿ. ಅದರ ಒಂದು ಬದಿ ಬೆಂದ ಮೇಲೆ ಮಗುಚಿ ಹಾಕಿ.

    4. ಈಗ ರೆಡಿಯಾದ ಪ್ಯಾನ್‌ಕೇಕ್ ಬಿಸಿ ಬಿಸಿ ಇರುವಾಗಲೇ ಚಟ್ನಿ ಜೊತೆ ಸರ್ವ್ ಮಾಡಿ.

Instructions
  • ಸೂಚನೆ: * ಪ್ಯಾನ್‌ಕೇಕ್ ಇಲ್ಲಾ ಅಂದ್ರೆ ಸಾಧಾರಣ ತವಾದಲ್ಲೂ ಮಾಡಬಹುದು. ಹಿಟ್ಟು ಹುಯ್ಯುವಾಗ ದೊಡ್ಡದಾಗಿ ಹುಯ್ಯಬೇಡಿ ಅಷ್ಟೆ. * ಇದಕ್ಕೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ ಬೇಕಿದ್ದರೆ ಸೇರಿಸಬಹುದು. *ಗ್ರೇವಿಗೂ ಈ ಪ್ಯಾನ್‌ಕೇಕ್ ಸೂಪರ್‌ ಕಾಂಬಿನೇಷನ್ * ಸಂಜೆ ಸ್ನ್ಯಾಕ್ಸ್ ಆಗಿಯೂ ಬಳಸಬಹುದು.
Nutritional Information
  • ಸರ್ವ್ - 1 ಪ್ಯಾನ್‌ಕೇಕ್
  • ಕೊಬ್ಬು - 1.3ಗ್ರಾಂ
  • ಪ್ರೊಟೀನ್ - 1.2 ಗ್ರಾಂ
  • ಕಾರ್ಬ್ಸ್ - 7.2 ಗ್ರಾಂ
  • ನಾರಿನಂಶ - 0.2ಗ್ರಾಂ
[ 4 of 5 - 61 Users]
X
Desktop Bottom Promotion