Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
ಬ್ರೇಕ್ಫಾಸ್ಟ್ಗೆ ಫಟಾಫಟ್ ರೆಸಿಪಿ: ರವೆಯ ಪ್ಯಾನ್ಕೇಕ್
ಬ್ರೇಕ್ಫಾಸ್ಟ್ಗೆ ಫಟಾಫಟ್ ಮಾಡುವ ಬ್ರೇಕ್ ಫಾಸ್ಟ್ ರೆಸಿಪಿಗಳಲ್ಲೊಂದು ರವೆಯಿಂದ ಮಾಡುವ ಈ ಪ್ಯಾನ್ಕೇಕ್. ಏನಾದರು ಅರ್ಜೆಂಟ್ವಿದ್ದಾಗ, ದೋಸೆ, ಇಡ್ಲಿಗೆ ಹಿಟ್ಟು ಮನೆಯಲ್ಲಿ ಇಲ್ಲ ಅಂದ್ರೆ ಪಟ್ ಅಂತ ಈ ಪ್ಯಾನ್ಕೇಕ್ ಮಾಡಬಹುದು ನೋಡಿ.

ಇದಕ್ಕೆ ಬಳಸುವ ಸಾಮಗ್ರಿಗಳು ಸಾಮಾನ್ಯವಾಗಿ ಮನೆಯಲ್ಲಿಯೇ ಇರುತ್ತದೆ, ಇನ್ನು ಇದು ದೋಸೆಗಿಂತ ಸ್ವಲ್ಪ ಭಿನ್ನ ರುಚಿಯಲ್ಲಿ ಇರುವುದರಿಂದ ಮಕ್ಕಳಿಗೂ ತುಂಬಾ ಇಷ್ಟವಾಗುವುದು. ತುಂಬಾ ಮೃದುವಾಗಿರುವ ಈ ಪ್ಯಾನ್ಕೇಕ್ 9 ತಿಂಗಳ ನಂತರದ ಮಕ್ಕಳಿಗೆ ತಿನ್ನಲು ಕೈಯಲ್ಲಿಯೇ ಕೊಡಬಹುದು. ರವೆಯಿಂದ ಪ್ಯಾನ್ಕೇಕ್ ರೆಸಿಪಿ ನೀಡಿದ್ದೇವೆ ನೋಡಿ.
Recipe By: Reena TK
Recipe Type: Veg
Serves: 4
-
ಬೇಕಾಗುವ ಸಾಮಗ್ರಿ
ರವೆ 2 ಕಪ್
ಮೊಸರು 3/4 ಕಪ್
ಎಲೆಕೋಸು 1/2 ಕಪ್ (ಚಿಕ್ಕದಾಗಿ ಕತ್ತರಿಸಿದ್ದು)
ಕ್ಯಾರೆಟ್ 1/2 ಕಪ್ (ಚಿಕ್ಕದಾಗಿ ಕತ್ತರಿಸಿದ್ದು)
ಕೊತ್ತಂಬರಿ ಸೊಪ್ಪು 1/4 ಕಪ್
ರುಚಿಗೆ ತಕ್ಕ ಉಪ್ಪು
ಹಸಿ ಮೆಣಸಿನಕಾಯಿ 1
ಎಣ್ಣೆ 2 ಚಮಚ
ನೀರು 1 ಕಪ್
ಸರ್ವ್ ಮಾಡಲು ತೆಂಗಿನಕಾಯಿ ಚಟ್ನಿ
-
ಮಾಡುವ ವಿಧಾನ:
1. ಒಂದು ದೊಡ್ಡ ಬೌಲ್ ತೆಗೆದುಕೊಂಡು ಅದರಲ್ಲಿ ಮೊಸರು, ನೀರು ಹಾಕಿ ಅದಕ್ಕೆ ರವೆ ಹಾಕಿ ಕಲೆಸಿ, ಮಿಶ್ರಣ ಗಟ್ಟಿಯಾದರೆ ಇನ್ನೂ ಸ್ವಲ್ಪ ನೀರು ಹಾಕಿ ಕಲೆಸಿ 30 ನಿಮಿಷ ಇಡಿ.
2.ಈಗ ಕ್ಯಾಬೇಜ್, ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಉಪ್ಪು ಹಾಕಿ ಮಿಶ್ರ ಮಾಡಿ, ಈ ಸಾಮಗ್ರಿ ಸೇರಿಸಿದ ಮೇಲೆ ಸ್ವಲ್ಪ ನೀರು ಹಾಕಿ ಮತ್ತೊಮ್ಮೆ ಕಲೆಸಿ. ಮಿಶ್ರಣ ತುಂಬಾ ಮೃದುವಾಗಲು ಅದಕ್ಕೆ 1-2 ಚಮಚ ಎಣ್ಣೆ ಹಾಕಿ.
3. ಈಗ ಪ್ಯಾನ್ಕೇಕ್ ಬಿಸಿ ಮಾಡಿ ಅದಕ್ಕೆ ಎಣ್ಣೆ ಸವರಿ ಅದಕ್ಕೆ ಹುಯ್ಯಿರಿ, ನಂತರ ಪಾತ್ರೆಯ ಬಾಯಿ ಮುಚ್ಚಿ 2 ನಿಮಿಷ ಬೇಯಿಸಿ. ಅದರ ಒಂದು ಬದಿ ಬೆಂದ ಮೇಲೆ ಮಗುಚಿ ಹಾಕಿ.
4. ಈಗ ರೆಡಿಯಾದ ಪ್ಯಾನ್ಕೇಕ್ ಬಿಸಿ ಬಿಸಿ ಇರುವಾಗಲೇ ಚಟ್ನಿ ಜೊತೆ ಸರ್ವ್ ಮಾಡಿ.
- ಸೂಚನೆ: * ಪ್ಯಾನ್ಕೇಕ್ ಇಲ್ಲಾ ಅಂದ್ರೆ ಸಾಧಾರಣ ತವಾದಲ್ಲೂ ಮಾಡಬಹುದು. ಹಿಟ್ಟು ಹುಯ್ಯುವಾಗ ದೊಡ್ಡದಾಗಿ ಹುಯ್ಯಬೇಡಿ ಅಷ್ಟೆ. * ಇದಕ್ಕೆ ಚಿಕ್ಕದಾಗಿ ಹೆಚ್ಚಿದ ಈರುಳ್ಳಿ ಬೇಕಿದ್ದರೆ ಸೇರಿಸಬಹುದು. *ಗ್ರೇವಿಗೂ ಈ ಪ್ಯಾನ್ಕೇಕ್ ಸೂಪರ್ ಕಾಂಬಿನೇಷನ್ * ಸಂಜೆ ಸ್ನ್ಯಾಕ್ಸ್ ಆಗಿಯೂ ಬಳಸಬಹುದು.
- ಸರ್ವ್ - 1 ಪ್ಯಾನ್ಕೇಕ್
- ಕೊಬ್ಬು - 1.3ಗ್ರಾಂ
- ಪ್ರೊಟೀನ್ - 1.2 ಗ್ರಾಂ
- ಕಾರ್ಬ್ಸ್ - 7.2 ಗ್ರಾಂ
- ನಾರಿನಂಶ - 0.2ಗ್ರಾಂ



Click it and Unblock the Notifications