Latest Updates
-
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್! -
ನವರಾತ್ರಿ 4ನೇ ದಿನ: ಉಪವಾಸದ ನಡುವೆಯೂ ಗರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯದ ರಹಸ್ಯ ಇಲ್ಲಿದೆ!
ರೆಸಿಪಿ: ಸಿಜ್ವಾನ್ ಚಿಕನ್ ನೂಡಲ್ಸ್ ನೀವೂ ಟ್ರೈ ಮಾಡಿ
ನೀವು ನೂಡಲ್ಸ್ ಪ್ರಿಯರೇ? ಹಾಗಾದರೆ ಸಿಜ್ವಾನ್ ನೂಡಲ್ಸ್ ಬಗ್ಗೆ ಪ್ರೀತಿ ತುಸು ಜಾಸ್ತಿನೇ ಇರಬೇಕು ಅಲ್ವಾ? ನೀವು ಮನಸ್ಸು ಮಾಡಿದರೆ ರೆಸ್ಟೋರೆಂಟ್ ರುಚಿಯ ಸಿಜ್ವಾನ್ ನೂಡಲ್ಸ್ ಮನೆಯಲ್ಲಿಯೇ ಮಾಡಿ ಸವಿಯಬಹುದು.

ಈ ಚಿಕನ್ ಸಿಜ್ವಾನ್ ನೂಡಲ್ಸ್ಗೆ ನೀವು ಟೊಮೆಟೊ ಸಾಸ್ಗಿಂತ ಹೆಚ್ಚು ಬಳಸಬೇಕಾಗಿರುವುದು ಗಾರ್ಲಿಕ್ ಸಾಸ್. ಈ ಸಂಜೆ ನೀವು ಸಿಜ್ವಾನ್ ನೂಡಲ್ಸ್ ಸವಿಯ ಬಯಸುವುದಾದರೆ ಇಲ್ಲಿದೆ ನೋಡಿ ರೆಸಿಪಿ:
Recipe By: Reena TK
Recipe Type: Noodles
Serves: 4
-
ಬೇಕಾಗುವ ಸಾಮಗ್ರಿ
ಹಕ್ಕಾ ನೂಡಲ್ಸ್ 4 ಕಪ್ (ಬೇಯಿಸಿದ್ದು)
ಚಿಕನ್ 500ಗ್ರಾಂ (ಬೇಯಿಸಿ, ಎಳೆ ಎಳೆಯಾಗಿ ಬಿಡಿಸಿ)
ಬೆಳ್ಳುಳ್ಳಿ ಚಿಕ್ಕದಾಗಿ ಕತ್ತರಿಸಿ.
ಸೆಲರಿ 1 ಚಮಚ
ತರಕಾರಿಗಳು 3 ಕಪ್ (ಕ್ಯಾರೆಟ್, ಕ್ಯಾಪ್ಸಿಕಂ, ಬೀನ್ಸ್ ಮತ್ತು ಕ್ಯಾಬೇಜ್)
ಸಿಜ್ವಾನ್ ಸಾಸ್ 1/2 ಕಪ್
ಮೊಳಕೆ ಕಾಳು 1/4
ಟೋಫು 1/2 ಕಪ್
ಎಣ್ಣೆ 2 ಚಮಚ
ಚಿಲ್ಲಿ ಆಯಿಲ್ 1 ಚಮಚ (optional)
ರುಚಿಗೆ ತಕ್ಕ ಉಪ್ಪು
-
ಮಾಡುವ ವಿಧಾನ:
* ನೀವು ಎಣ್ಣೆಯನ್ನು ಬಿಸಿ ಮಾಡಿ, ನಂತರ ಚಿಲ್ಲಿ ಸೇರಿಸಿ, ಬೆಳ್ಳುಳ್ಳಿ ಹಾಕಿ ಸೌಟ್ನಿಂದ ಆಡಿಸಿ.
(ಗ್ಯಾಸ್ ಅನ್ನು ಅಧಿಕ ಉರಿಯಲ್ಲಿ ಇಟ್ಟು ಬಳಸಿ)
* ಈಗ ಸೆಲರಿ ಮತ್ತು ತರಕಾರಿ ಹಾಕಿ 4-5 ನಿಮಿಷ ಸೌಟ್ನಿಂದ ಆಡಿಸಿ.
* ಈಗ ಚಿಕನ್ ತುಂಡುಗಳನ್ನು ಹಾಕಿ 5 ನಿಮಿಷ ಫ್ರೈ ಮಾಡಿ.
* ಈಗ ಸಿಜ್ವಾನ್ ಸಾಸ್ ಸೇರಿಸಿ ಒಂದೆರಡು ನಿಮಿಷ ಬಿಸಿ ಮಾಡಿ, ಈಗ ಬೇಯಿಸಿದ ನೂಡಲ್ಸ್, ಮೊಳಕೆ ಕಾಳುಗಳು, ಟೋಫು ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ.
* ರೆಡಿಯಾದ ಚಿಕನ್ ಸಿಜ್ವಾನ್ ನೂಡಲ್ಸ್ ಅನ್ನು ಬಿಸಿ-ಬಿಸಿಯಾಗಿ ಸರ್ವ್ ಮಾಡಿ.
- ಚಿಲ್ಲಿ ಆಯಿಲ್ ಇಲ್ಲದಿದ್ದರೆ ಚಿಲ್ಲಿ ಸಾಸ್ ಬಳಸಿ, ಆದರೆ ಚಿಲ್ಲಿ ಆಯಿಲ್ ಯಾವುದೇ ಆಹಾರದ ಟೇಸ್ಟ್ ಹೆಚ್ಚಿಸುವುದು.



Click it and Unblock the Notifications
