Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ಬ್ಯಾಚುಲರ್ಗಳಿಗೆ ರೆಸಿಪಿ: ಈ ಸಾಂಬಾರ್ ರುಚಿ ಸೂಪರ್ ಆಗಿರುತ್ತದೆ, ಆದರೆ ಹೆಚ್ಚು ಶ್ರಮ ಪಡಬೇಕಾಗಿಲ್ಲ
Recipes
oi-Reena TK
Posted By: Reena TK
ಮನೆಯಲ್ಲಿ ಅಮ್ಮ ಮಾಡುವ ಸಾಂಬಾರ್ ಸವಿಯುವಾಗ ಎಷ್ಟು ರುಚಿ ಅನಿಸುತ್ತದೆ, ಆದರೆ ನಾವು ಈಗಷ್ಟೇ ಅಡುಗೆ ಮಾಡಲು ಪ್ರಾರಂಭಿಸಿದರೆ ಈ ಅಡುಗೆ ಮಾಡುವುದು ನಾವು ತಿಂದಷ್ಟು ಸುಲಭವಲ್ಲ ಎಂಬುವುದು ಗೊತ್ತಾಗುವುದು.
ಆದರೆ ಇಲ್ಲಿ ನಾವು ನೀಡಿರುವ ಸಾಂಬಾರ್ ಮಾಡಿದ್ದೇ ಆದರೆ ನೀವು ಮಾಡಿದ ಸಾಂಬಾರ್ ರುಚಿ ನೋಡಿದಾಗ ವಾವ್! ಎಷ್ಟು ರುಚಿಯಾಗಿದೆ ಎಂದು ಅನಿಸದೆ ಇರಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ಮಾಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಮಿಕ್ಸ್ ವೆಜ್
ನೀವು ಯಾವುದೇ ತರಕಾರಿ ಬಳಸಬಹುದು
ಈ ರೆಸಿಪಿಗೆ ತರಕಾರಿಗಳನ್ನು ಬಳಸಲಾಗಿದೆ
ನುಗ್ಗೆಕಾಯಿ 2
ಬದನೆಕಾಯಿ 1-2
ಆಲೂಗೆಡ್ಡೆ 1
ಟೊಮೆಟೊ 1
ಈರುಳ್ಳಿ 1
ಹಸಿ ಮೆಣಸು
ತೊಗರಿಬೇಳೆ 1/2 ಕಪ್
ಸ್ವಲ್ಪ ಹುಣಸೆಹಣ್ಣಿನ ರಸ
ಇಂಗು
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
ಸಾಸಿವೆ 1 ಚಮಚ
ಮೆಂತೆ 1/2 ಚಮಚ
ಸ್ವಲ್ಪ ಕರಿಬೇವು
ಕೊತ್ತಂಬರಿ ಸೊಪ್ಪು
1 ಚಮಚ ಖಾರದ ಪುಡಿ
ಸಾಂಬಾರ್ ಪುಡಿ 3 ಚಮಚ
ತೆಂಗಿನೆಣ್ಣೆ 1 ಚಮಚ
ಸಾಂಬಾರ್ ಮಾಡುವುದು ಹೇಗೆ?
- ನೀವು ಸ್ವಲ್ಪ ಹುಣಸೆಹಣ್ಣು ತೆಗೆದು ಬಿಸಿ ನೀರಿನಲ್ಲಿ ಹಾಕಿಡಿ (ಒಂದ ಚಿಕ್ಕ ನಿಂಬೆ ಗಾತ್ರದಷ್ಟು ಹಣಸೆಹಣ್ಣು)
- ಈಗ ತೊಗರಿ ಬೇಳೆ ತೊಳೆದು ಸಾರಿನ ಪಾತ್ರೆ ಅಥವಾ ಕುಕ್ಕರ್ಗೆ ಹಾಕಿ ಬೆಂಡೆಕಾಯಿ, ನುಗ್ಗೆಕಾಯಿ ಬಿಟ್ಟು ಉಳಿದ ತರಕಾರಿಗಳನ್ನು ತೊಗರಿ ಬೇಳೆ ಜೊತೆ ಹಾಕಿ ರುಚಿಗೆ ತಕ್ಕ ಉಪ್ಪು (1/2 ಚಮಚ ಉಪ್ಪು) ಹಾಕಿ ಬೇಯಿಸಿ. ಕುಕ್ಕರ್ನಲ್ಲಿ ಆದರೆ ಎರಡು ವಿಶಲ್ ಬಂದ ಮೇಲೆ ಆಫ್ ಮಾಡಿ.
- ಈಗ ಬೆಂದ ತರಕಾರಿಗಳ ಜೊತೆಗೆ ನುಗ್ಗೆಕಾಯಿ ಹಾಕಿ ಬೇಯಿಸಿ.
- ನುಗ್ಗೆಕಾಯಿ ಹಾಕಿ ಬೇಯಿಸಿ
- ಈಗ ಪ್ಯಾನ್ಗೆ ಎಣ್ಣೆ ಹಾಕಿ ನಂತರ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಬರುವಾಗ ಮೆಂತೆ ಹಾಕಿ, ಕರಿಬೇವು ಹಾಕಿ ನಂತರ ಉರಿ ಕಡಿಮೆ ಮಾಡಿ ಮೆಣಸಿನ ಪುಡಿ, 1/2 ಚಮಚ ಕೊತ್ತಂಬರಿ ಪುಡಿ, ಸಾಂಬಾರ್ ಪುಡಿ, ಅರಿಶಿಣ ಪುಡಿ ಹಾಕಿ 1 ನಿಮಿಷ ಫ್ರೈ ಮಾಡಿ, ನಂತರ ಬೇಯಿಸಿದ ತರಕಾರಿ ಹಾಕಿ. ಹುಣಸೆ ರಸ ಹಿಂಡಿ ಹಾಕಿ.
- ನಂತರ ತರಕಾರಿ 5 ನಿಮಿಷ ಬೇಯಿಸಿ, ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ರುಚಿಯಾದ ಸಾಂಬಾರ್ ರೆಸಿಪಿ.
Comments
[ of 5 - Users]
Story first published: Wednesday, March 27, 2024, 14:22 [IST]
Other articles published on Mar 27, 2024



Click it and Unblock the Notifications