Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ರುಚಿ ರುಚಿಯಾದ ಸಾಂಬಾರ್ ರೆಸಿಪಿ: ಹೀಗೆ ಮಾಡುವುದರಿಂದ ಬೇಗ ಹಾಳಾಗುವುದೂ ಇಲ್ಲ
ಕೆಲವು ಕಡೆ ಸಾಂಬಾರ್ ಸವಿದರೆ ಇನ್ನೂ ಬೇಕೆನಿಸುವುದು, ರುಚಿ ರುಚಿಯಾದ ಸಾಂಬಾರ್ ತಯಾರಿಸುವುದು ಅಷ್ಟೇನು ಕಷ್ಟದ ಕೆಲಸವನ್ನು ಸುಲಭವಾಗಿ ತಯಾರಿಸಬಹುದು. ನಾವಿಲ್ಲಿ ತೆಂಗಿನಕಾಯಿ ಹುರಿದು ಮಾಡುವ ಸಾಂಬಾರ್ ರೆಸಿಪಿ ನೀಡಿದ್ದೇವೆ, ಹೀಗೆ ಮಾಡುವುದರಿಂದ ಸಾಂಬಾರ್ ಬೇಗ ಹಾಳಾಗುವುದಿಲ್ಲ, ಬನ್ನಿ ಇದನ್ನು ಹೇಗೆ ಮಾಡುವುದು ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ನೀವು ಬೇಕಾದರೆ ಯಾವುದೇ ತರಕಾರಿ ಸೇರಿಸಬಹುದು
ಈ ಸಾಂಬರ್ಗೆ ತೊಂಡೆಕಾಯಿ, ಬೀನ್ಸ್, ಈರುಳ್ಳಿ, ಟೊಮೆಟೊ, ನುಗ್ಗೆಕಾಯಿ,
ಕ್ಯಾರೆಟ್ ಹಾಕಿ ಮಾಡಲಾಗಿದೆ.
ಈ ಎಲ್ಲಾ ತರಕಾರಿ ನಿಮಗೆ ಬೇಕಾದ ಪ್ರಮಾಣದಲ್ಲಿ ತೆಗೆದು ಕತ್ತರಿಸಿಡಿ
(8-10 ತೊಂಡೆಕಾಯಿ, 8-10 ಬೀನ್ಸ್, 1 ಕ್ಯಾರೆಟ್, 2 ಟೊಮೆಟೊ, 2 ನುಗ್ಗೆಕಾಯಿ ,
1 ಈರುಳ್ಳಿ)
1/2 ಕಪ್ ಬೇಳೆ
1 ಕಪ್ ತೆಂಗಿನ ಪುರಿ
1 ಚಮಚ ಖಾರದ ಪುಡಿ
ಒಂದೂವರೆ ಚಮಚ ಕೊತ್ತಂಬರಿ ಪುಡಿ
1 ಚಮಚ ಸಾಂಬಾರ್ ಪುಡಿ
1/2 ಚಮಚ ಅರಿಶಿಣ ಪುಡಿ
ಗರಂ ಮಸಾಲ 1/4 ಚಮಚ
ಉಪ್ಪು 1/2 ಚಮಚ (ಕಡಿಮೆ ಬಳಸಿ , ಬೇಕಿದ್ದರೆ ಬಳಸಬಹುದು)
ಸ್ವಲ್ಪ ಕರಿಬೇವು
ಸ್ವಲ್ಪ ಸಾಸಿವೆ
ಇಂಗು (ಚಿಟಿಕೆಯಷ್ಟು)
ಸಾಂಬಾರ್ ಮಾಡುವ ವಿಧಾನ
ಮೊದಲಿಗೆ ನೀವು ಬೇಳೆ ತೊಳೆದು ಕುಕ್ಕರ್ಗೆ ಹಾಕಿ, ನಂತರ ಕತ್ತರಿಸಿದ ತರಕಾರಿ
ಹಾಕಿ (ನುಗ್ಗೆ ಹಕಿ ಹಾಕಬೇಡಿ), ನಂತರ ರುಚಿಗೆ ತಕ್ಕ ಉಪ್ಪು ಸೇರಿಸಿ, ತರಕಾರಿ
ಮುಳುಗುವಷ್ಟು ನೀರು ಹಾಕಿ 2 ವಿಶಲ್ ಬರುವವರೆಗೆ ಬೇಯಿಸಿ.
ಅದೇ ಸಮಯದಲ್ಲಿ ತೆಂಗಿನ ತುರಿಯನ್ನು ಕೆಂಪಗೆ ಬರುವವರೆಗೆ ಫ್ರೈ ಮಾಡಿ, ನಂತರ
ಮಸಾಲೆ ಪುಡಿಗಳನ್ನು ಹಾಕಿ ಮತ್ತೆ 5-6 ನಮಿಷ ಫ್ರೈ ಮಾಡಿ.
ನಂತರ ನುಣ್ಣನೆ ರುಬ್ಬಿ
ಈಗ ಕುಕ್ಕರ್ನ ಮುಚ್ಚಳ ತೆಗೆದು ನುಗ್ಗೆಕಾಯಿ, ಮಸಾಲೆ ಹಾಕಿ ನುಗ್ಗೆಕಾಯಿ
ಬೆಯುವವರೆಗೆ ಬೇಯಿಸಿ.5-8 ನಿಮಿಷ ಬೇಯಿಸಿದರೆ ಸಾಕಾಗುತ್ತೆ
ಈಗ ಒಗ್ಗರಣೆ ಪಾತ್ರೆಗೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸ್ವಲ್ಪ ಇಂಗು ಹಾಕಿ
ನಂತರ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ಶಬ್ದ ಮಾಡುವಾಗ ಕರಿಬೇವು ಹಾಕಿ ಸಾರಿಗೆ
ಸೇರಿಸಿದರೆ ರುಚಿ ರುಚಿಯಾದ ಸಾಂಬಾರ್ ರೆಡಿ.
ತೆಂಗಿನಕಾಯಿ ಹುರಿದು ಮಾಡಿರುವುದರಿಂದ ಎರಡು ದಿನ ಇಟ್ಟರೂ ಹಾಳಾಗುವುದಿಲ್ಲ.



Click it and Unblock the Notifications
