Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಅಕ್ಕಿ ಇಲ್ಲದೆ ಇಡ್ಲಿ.. ಫುಲ್ ಸಾಫ್ಟ್ & ಟೇಸ್ಟಿ ಪಾಲಕ್-ಸಜ್ಜೆ ಇಡ್ಲಿ ಮಾಡಿ! ತೂಕವೂ ಇಳಿಯುತ್ತೆ, ಹೆಲ್ತ್ ಡಬಲ್
ಅಕ್ಕಿ ಇಲ್ಲದೆ ಇಡ್ಲಿ! ಫುಲ್ ಸಾಫ್ಟ್ & ಟೇಸ್ಟಿ ಪಾಲಕ್-ಸಜ್ಜೆ ಇಡ್ಲಿ ಮಾಡಿ ನೋಡಿ.. ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುವ ಹೆಲ್ತಿ ಇಡ್ಲಿ. ಹೌದು, ಚಳಿಗಾಲದಲ್ಲಿ ದೇಹಕ್ಕೆ ಹೆಚ್ಚು ಉಷ್ಣತೆ ಮತ್ತು ಪೋಷಕಾಂಶಗಳ ಅವಶ್ಯಕತೆಯಿರುತ್ತದೆ. ಸಾಮಾನ್ಯವಾಗಿ ಅಕ್ಕಿ ಇಡ್ಲಿಗೆ ಪರ್ಯಾಯವಾಗಿ, ಸಜ್ಜೆ (ಬಾಜ್ರಾ - Bajra) ಮತ್ತು ಪಾಲಕ್ (Palak) ಸೊಪ್ಪಿನಿಂದ ತಯಾರಿಸುವ ಇಡ್ಲಿ (Palak Bajra Idli) ಅತ್ಯುತ್ತಮ ಆಯ್ಕೆಯಾಗಿದೆ.
ಇದು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರಿಗೂ ಇಷ್ಟವಾಗುವ, ಪೌಷ್ಟಿಕಾಂಶಭರಿತ ಉಪಾಹಾರವಾಗಿದೆ. ಪಾಲಕ್ ಸೊಪ್ಪು ತಿನ್ನಲು ನಿರಾಕರಿಸುವ ಮಕ್ಕಳಿಗೆ ಇದು ಪೌಷ್ಟಿಕಾಂಶ ನೀಡುವ ಉತ್ತಮ ಮಾರ್ಗ. ಅಲ್ಲದೆ, ತೂಕ ಇಳಿಸಿಕೊಳ್ಳಲು ಬಯಸುವವರು ಮತ್ತು ಮಧುಮೇಹಿಗಳಿಗೂ ಇದು ಸೂಕ್ತವಾಗಿದೆ. ಅಕ್ಕಿರಹಿತ ಈ ಪಾಕವಿಧಾನವು ಸುಲಭವಾಗಿ ತಯಾರಿಸಬಹುದಾಗಿದ್ದು, ಹಲವಾರು ಆರೋಗ್ಯ ಲಾಭಗಳನ್ನು ಒದಗಿಸುತ್ತದೆ. ಈ ಬಗ್ಗೆ ತಿಳಿಯಲು ಮುಂದೆ ಓದಿ.
ಪಾಲಕ್-ಸಜ್ಜೆ ಇಡ್ಲಿಯ ಆರೋಗ್ಯ ಪ್ರಯೋಜನಗಳು
ಸಜ್ಜೆ (ಬಾಜ್ರಾ): ಇದು ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿದ್ದು, ದೇಹಕ್ಕೆ ಉಷ್ಣತೆ ನೀಡಲು ಸಹಕಾರಿ.
ಪಾಲಕ್: ಕಬ್ಬಿಣಾಂಶ ಮತ್ತು ವಿಟಮಿನ್‌ಗಳ ಆಗರವಾಗಿದ್ದು, ರಕ್ತಹೀನತೆ ತಡೆಯಲು ನೆರವಾಗುತ್ತದೆ.
ತೂಕ ಇಳಿಕೆ: ಅಕ್ಕಿರಹಿತವಾಗಿರುವುದರಿಂದ ಕಡಿಮೆ ಕ್ಯಾಲೊರಿ ಹೊಂದಿ, ಹೊಟ್ಟೆ ತುಂಬಿದ ಭಾವನೆ ನೀಡಿ ತೂಕ ನಿರ್ವಹಣೆಗೆ ನೆರವಾಗುತ್ತದೆ.
ಅಕ್ಕಿ ಇಲ್ಲದೆ, ಪೌಷ್ಟಿಕಾಂಶಭರಿತ 'ಪಾಲಕ್ ಬಾಜ್ರಾ ಇಡ್ಲಿ' ತಯಾರಿಸುವುದು ತುಂಬಾ ಸುಲಭ. ಸಜ್ಜೆ ಹಿಟ್ಟು ಮತ್ತು ಪಾಲಕ್ ಸೊಪ್ಪಿನ ಸಮ್ಮಿಲನದಿಂದ ಮೂಡಿಬರುವ ಈ ಮೃದುವಾದ ಇಡ್ಲಿ, ಡಯಟ್ ಮಾಡುವವರಿಗೂ ಅತ್ಯುತ್ತಮ ಬೆಳಗಿನ ಉಪಾಹಾರ. ಪಾಲಕ್-ಸಜ್ಜೆ ಇಡ್ಲಿ ತಯಾರಿಕೆಗೆ ಬೇಕಾಗುವ ಪದಾರ್ಥಗಳು ಮತ್ತು ಮಾಡುವ ಸರಳ ವಿಧಾನ (Palak Bajra Idli Recipe) ಇಲ್ಲಿದೆ.
ಪಾಲಕ್-ಸಜ್ಜೆ ಇಡ್ಲಿಗೆ ಬೇಕಾಗುವ ಪದಾರ್ಥಗಳು
• ಸಜ್ಜೆ ಹಿಟ್ಟು (ಬಾಜ್ರಾ ಫ್ಲೋರ್) - ಒಂದು ಕಪ್
• ಉದ್ದಿನ ಬೇಳೆ - ಅರ್ಧ ಕಪ್
• ಪಾಲಕ್ ಸೊಪ್ಪು - ಒಂದು ಕಪ್ (ತೊಳೆದು ಸಣ್ಣಗೆ ಹೆಚ್ಚಿದ್ದು ಅಥವಾ ಪ್ಯೂರಿ
ಮಾಡಿದ್ದು)
• ಮೆಂತ್ಯ ಕಾಳು - ಒಂದು ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ನೀರು - ಬೇಕಾದಷ್ಟು
• ಇನೋ (ಫ್ರೂಟ್ ಸಾಲ್ಟ್) - ಒಂದು ಚಮಚ
• ಎಣ್ಣೆ - ಇಡ್ಲಿ ತಟ್ಟೆಗಳಿಗೆ ಸವರಲು
ಪಾಲಕ್ ಸಜ್ಜೆ ಇಡ್ಲಿ ತಯಾರಿಸುವ ವಿಧಾನ
- ಮೊದಲಿಗೆ, ಉದ್ದಿನ ಬೇಳೆ ಮತ್ತು ಮೆಂತ್ಯ ಕಾಳುಗಳನ್ನು ಎರಡರಿಂದ ಮೂರು ಬಾರಿ ತೊಳೆದು ಆರು - ಏಳು ಗಂಟೆಗಳ ಕಾಲ ಸಾಕಷ್ಟು ನೀರಿನಲ್ಲಿ ನೆನೆಸಿಡಿ.
- ಈಗ ನೆನೆದ ಬೇಳೆಗಳಿಂದ ನೀರನ್ನು ಬಸಿದು, ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಸಜ್ಜೆ ಹಿಟ್ಟಿಗೆ ಸೇರಿಸಿ, ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ.
- ಬಳಿಕ ಕಲಸಿದ ಹಿಟ್ಟನ್ನು ಮುಚ್ಚಿಟ್ಟು ಎಂಟು-ಹತ್ತು ಗಂಟೆಗಳು ಅಥವಾ ರಾತ್ರಿಯಿಡೀ ಬೆಚ್ಚಗಿನ ಜಾಗದಲ್ಲಿಡಿ. ಇದರಿಂದ ಹಿಟ್ಟು ಚೆನ್ನಾಗಿ ಹುದುಗಿ ಇಡ್ಲಿ ಮೃದುವಾಗುತ್ತದೆ.
- ಈಗ ಹುದುಗಿದ ಹಿಟ್ಟಿಗೆ ಪಾಲಕ್ ಪ್ಯೂರಿ (ಅಥವಾ ಸಣ್ಣಗೆ ಹೆಚ್ಚಿದ ಸೊಪ್ಪು) ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇಡ್ಲಿ ಬೇಯಿಸುವ ಮೊದಲು ಇನೋ ಬೆರೆಸಿ ಲಘುವಾಗಿ ಕಲಸಿ.
- ನಂತರ ಇಡ್ಲಿ ಬೇಯಿಸುವುದು. ಎಣ್ಣೆ ಸವರಿದ ಇಡ್ಲಿ ತಟ್ಟೆಗಳಿಗೆ ಹಿಟ್ಟು ಸುರಿದು, ಇಡ್ಲಿ ಪಾತ್ರೆಯಲ್ಲಿ ನೀರು ಕಾದ ನಂತರ ಹಬೆಯಲ್ಲಿ ಹತ್ತು-ಹನ್ನೆರಡು ನಿಮಿಷಗಳ ಕಾಲ ಬೇಯಿಸಿದರೆ ರುಚಿಕರ 'ಪಾಲಕ್-ಸಜ್ಜೆ ಇಡ್ಲಿ' ಸಿದ್ಧ.
- ಬಿಸಿಬಿಸಿಯಾದ ಈ ಪಾಲಕ್ - ಸಜ್ಜೆ ಇಡ್ಲಿಯನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆಗೆ ಸವಿಯಿರಿ. ಚಳಿಗಾಲದ ಬೆಳಗಿನ ಜಾವಕ್ಕೆ ಇದು ಹೇಳಿ ಮಾಡಿಸಿದ ಉಪಾಹಾರ.



Click it and Unblock the Notifications

