Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹೊಸ ವರ್ಷಕ್ಕೆ ಸಿಹಿ ರೆಸಿಪಿ: ಸಾಬುದಾನ-ಸಿಹಿ ಗೆಣಸಿನ ಪಾಯಸ ರೆಸಿಪಿ
ಹೊಸ ವರ್ಷದಲ್ಲಿ ಮನೆಯಲ್ಲಿ ಏನಾದರೂ ಸಿಹಿ ಮಾಡಿ ಸ್ವೀಕರಿಸಬೇಕೆಂದು ಬಯಸುತ್ತೇವೆ ಅಲ್ವಾ? ಈ ಬಾರಿ ನೀವು ಸಿಹಿ ಗೆಣಸಿನ ಪಾಯಸ ಏಕೆ ಟ್ರೈ ಮಾಡಬಾರದು, ಸಿಹಿ ಗೆಣಸು ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು, ಟೇಸ್ಟ್ ಸೂಪರ್ ಆಗಿರುತ್ತದೆ, ಮಾಡುವುದು ಕೂಡ ಸುಲಭ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಸಾಬುದಾನ 3 ಚಮಚ
ಸಕ್ಕರೆ 2 ಚಮಚ
ಸಿಹಿ ಗೆಣಸು 1
ಗೋಡಂಬಿ 1 ಚಮಚ
ಬಾದಾಮಿ 1 ಚಮಚ
ಹಾಲು 3 ಕಪ್
ಏಲಕ್ಕಿ 1 ಚಮಚ
ಮಾಡುವ ವಿಧಾನ
* ಒಂದು ಕಪ್ ಸಾಬುದಾನವನ್ನು ಒಂದು ಗಂಟೆ ನೀರಿನಲ್ಲಿ ನೆನೆಹಾಕಿ.
* ಈಗ ಬೇಯಿಸಿದ ಸಿಹಿಗೆಣಸನ್ನು ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ ಇಡಿ.
* ಈಗ ಒಂದು ಪ್ಯಾನ್ ತೆಗೆದು ಬಿಸಿ ಮಾಡಿ
* ಪ್ಯಾನ್ ಬಿಸಿಯಾದಾಗ ಹಾಲು ಹಾಕಿ, ಹಾಲು ಕುದಿಯಲು ಆರಂಭಿಸಿದಾಗ ಸಾಬುದಾನ
ಹಾಕಿ, ಹಾಲನ್ನು ಸಿಮ್ಮರ್ನಲ್ಲಿ ಇಟ್ಟು 5 ನಿಮಿಷ ಬೇಯಿಸಿ, ಬೇಯಿಸಿದ ಸಿಹಿಗೆಣಸು
ಸೇರಿಸಿ ಮಿಕ್ಸ್ ಮಾಡಿ.
* ಸಕ್ಕರೆ, ಗೋಡಂಬಿ, ಬಾದಾಮಿ ಹಾಕಿ ಮಿಕ್ಸ್ ಮಾಡಿ,
* ಕೊನೆಗೆ ಏಲಕ್ಕಿ ಹಾಕಿ ಮಿಕ್ಸ್ ಮಾಡು
* ನಂತರ ಸ್ಟೌವ್ ಆಫ್ ಮಾಡಿ ಪಿಸ್ತಾ, ಗೋಡಂಬಿಯಿಂದ ಅಲಂಕರಿಸಿ ಸರ್ವ್
ಮಾಡಿ.
ಸೂಚನೆ
ಸಿಹಿ ಗೆಣಸು ಬೆಂದ ಮೇಲೆ ಮ್ಯಾಶ್ ಮಾಡಿ ಹಾಕುವ ಬದಲಿಗೆ ತುರಿದು ಹಾಕಿ
* ಸಾಬುದಾನ ಮೆತ್ತಗಾಗುವವರೆಗೆ ನೆನೆಹಾಕಿ.
ಸಾಬುದಾನ ಪ್ರಯೋಜನಗಳು
* ಶಕ್ತಿ ಒದಗಿಸುತ್ತದೆ
ಸಾಬುದಾನ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ, ಆದ್ದರಿಂದ ಉಪವಾಸ ವ್ರತ
ಮಾಡುವವರು ಇದನ್ನು ಬಳಸುತ್ತಾರೆ.
* ಜೀರ್ಣಕ್ರಿಯೆಗೆ ಒಳ್ಳೆಯದು
ಸಾಬುದಾನ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
* ಸಾಬುದಾನದಲ್ಲಿ ಪೋಷಕಾಂಶಗಳು ಇರಲಿದೆ
ಕ್ಯಾಲ್ಸಿಂ, ಕಬ್ಬಿಣದಂಶ, ವಿಟಮಿನ್ ಬಿ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ
ಒಳ್ಳೆಯದು.
* ಸಾಬುದಾನ ಗ್ಲುಟೀನ್ ಫ್ರೀ ಕೂಡ ಹೌದು
ಸಿಹಿ ಗೆಣಸಿನಲ್ಲಿ ಅನೇಕ ಗುಣಗಳಿವೆ
* ಸಿಹಿ ಗೆಣಸು ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
* ದೇಹವನ್ನು ಡಿಟಾಕ್ಸ್ ಮಾಡುತ್ತದೆ
* ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು
* ತ್ವಚೆ ಕಾಂತಿಗೂ ಒಳ್ಳೆಯದು.



Click it and Unblock the Notifications
