Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗಣೇಶ ಚತುರ್ಥಿ ವಿಶೇಷ: ಸಬ್ಬಕ್ಕಿ ಕಿಚಡಿ ರೆಸಿಪಿ
ಸಬ್ಬಕ್ಕಿ/ಸಾಬುದಾನ ಕಿಚಡಿ ಮಹಾರಾಷ್ಟ್ರದ ಜನಪ್ರಿಯ ಖಾದ್ಯ. ಊಟಕ್ಕಾಗಿ ತಯಾರಿಸುವ ಈ ಪಾಕವಿಧಾನವನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಯಾರಿಸುತ್ತಾರೆ. ಆಲೂಗಡ್ಡೆ, ಕಡಲೆಕಾಯಿ ಮತ್ತು ಇತರ ಮಸಾಲೆಗಳೊಂದಿಗೆ ಸಬ್ಬಕ್ಕಿ/ಸಾಬುದಾನ ಬೆರೆಸಿ ತಯಾರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ವ್ರತ ಹಾಗೂ ಊಟದ ವಿಶೇಷ ಅಡುಗೆಯಾಗಿ ಮಾಡುತ್ತಾರೆ.
ಮಸಾಲೆಯಿಂದ ಕೂಡಿರುವ ಆಲೂಗಡ್ಡೆ, ನಿಂಬೆ ಹುಳಿ, ಸಕ್ಕರೆ ಹಾಗೂ ಸಬ್ಬಕ್ಕಿ/ಸಾಬುದಾನ ಮಿಶ್ರಣದ ಕಿಚಡಿ ಬಾಯಲ್ಲಿ ನೀರನ್ನು ತರಿಸುತ್ತದೆ. ಸವಿಯುವಾಗ ಮಧ್ಯದಲ್ಲಿ ಸಿಗುವ ಹುರಿದ ಕಡಲೆಕಾಯಿ ರುಚಿಯನ್ನು ದ್ವಿಗುಣಗೊಳಿಸುತ್ತದೆ. ಉಪವಾಸದಂದು ಇದನ್ನು ಸೇವಿಸಿದರೆ ದಿನವಿಡೀ ದೈಹಿಕವಾಗಿ ಶಕ್ತಿಯುತವಾಗಿರಬಹುದು.
ನೆನೆಸಿಕೊಂಡ ಸಾಬೂದಾನ/ಸಬ್ಬಕ್ಕಿ ನೆನೆದು ಒಡೆದಂತಾಗಿದ್ದರೆ ಪಾಕವಿಧಾನಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ತಿಳಿಯಬಹುದು. ನೀವೂ ಮನೆಯಲ್ಲಿ ಆರೋಗ್ಯ ಪೂರ್ಣವಾದ ಈ ಪಾಕವಿಧಾನವನ್ನು ಮಾಡಲು ಬಯಸುತ್ತಿದ್ದರೆ ಇಲ್ಲಿರುವುವ ವಿಡಿಯೋ ಪಾಕವಿಧಾನ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಬಹುದು.

Recipe By: ಮೀನಾ ಭಂಡಾರಿ
Recipe Type: ಪ್ರಮುಖ ಉಪಹಾರ
Serves: 2-3 ಮಂದಿಗೆ
-
ಸಾಬೂದಾನ/ಸಬ್ಬಕ್ಕಿ - 1 ಕಪ್
ನೀರು - 1 ಕಪ್+ ತೊಳೆಯಲು
ಎಣ್ಣೆ - 1 ಟೇಬಲ್ ಚಮಚ
ಜೀರಿಗೆ - 1 ಟೀಚಮಚ
ಹೆಚ್ಚಿಕೊಂಡ ಮೆಣಸಿನಕಾಯಿ -2 ಟೀಚಮಚ
ಕರಿಬೇವಿನ ಎಲೆ - 6-10
ಬೇಯಿಸಿದ ಆಲೂಗಡ್ಡೆ (ಸಿಪ್ಪೆ ತೆಗೆದು ಹೋಳು ಹೋಳಾಗಿ ಹೆಚ್ಚಿಕೊಂಡಿರುವುದು) - 2
ಸಕ್ಕರೆ ಹಿಟ್ಟು - 3 ಟೀಚಮಚ
ನಿಂಬೆ ರಸ - 1 ನಿಂಬೆ
ರುಚಿಗೆ ತಕ್ಕಷ್ಟು ಉಪ್ಪು
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - ಅಲಂಕಾರಕ್ಕೆ
ಹುರಿದ ಕಡಲೆಕಾಯಿ - ಅಲಂಕಾರಕ್ಕೆ
-
1. ಸಬ್ಬಕ್ಕಿ ಜರಡಿ ಹಿಡಿದು, ನಂತರ ಗಂಜಿ ಹೋಗುವವರೆಗೆ ಚೆನ್ನಾಗಿ ತೊಳೆಯಿರಿ.
2. ನಂತರ ಒಂದು ಬೌಲ್‍ಗೆ ವರ್ಗಾಯಿಸಿ. ಒಂದು ಕಪ್ ನೀರನ್ನು ಬೆರೆಸಿ, ನೆನೆಯಲು ಬಿಡಿ.
3. ಇದು ಸುಮಾರು 6-8 ಗಂಟೆಗಳ ಕಾಲ ನೆನೆಯಬೇಕು. ಹೆಚ್ಚುವರಿ ನೀರನ್ನು ತೆಗೆಯಿರಿ.
4. ಒಂದು ಸಬ್ಬಕ್ಕಿ/ಸಾಬುದಾನವನ್ನು ಬೆರಳಿನಲ್ಲಿ ಹಿಚುಕಿ ನೋಡಿ. ಅದು ಒಡೆದರೆ ನೆನೆದಿದೆ ಎಂದರ್ಥ.
5. ನಂತರ ಹುರಿದುಕೊಂದ ಕಡಲೆಕಾಯಿ ಮತ್ತು ಸಕ್ಕರೆ ಹಿಟ್ಟನ್ನು ಸೇರಿಸಿ.
6. ಇದರ ಮೇಲೆ ನಿಂಬೆ ರಸವನ್ನು ಹಿಂಡಿ ಚೆನ್ನಾಗಿ ಮಿಶ್ರ ಗೊಳಿಸಿ.
7. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
8. ಜೀರಿಗೆ ಮತ್ತು ಬೇಯಿಸಿ ಹೆಚ್ಚಿಕೊಂಡ ಆಲೂಗಡ್ಡೆಯನ್ನು ಹಾಕಿ, 2 ನಿಮಿಷಗಳಕಾಲ ಹುರಿಯಿರಿ.
9. ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ ಮತ್ತು ಕರಿ ಬೇವಿನ ಎಲೆಯನ್ನು ಹಾಕಿ 2 ನಿಮಿಷ ಹುರಿಯಿರಿ.
10. ನಂತರ ಸಾಬೂದಾನ/ಸಬ್ಬಕ್ಕಿ ಮಿಶ್ರಣವನ್ನು ಆಲೂಗಡ್ಡೆಯೊಂದಿಗೆ ಬೆರೆಸಿ ಚೆನ್ನಾಗಿ ಕಲುಕಿ.
11. ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
12. ಇದನ್ನು ಮುಚ್ಚಿಟ್ಟು 7-8 ನಿಮಿಷಗಳ ಕಾಲ ಬೇಯಲು ಬಿಡಿ.
13. ಹೆಚ್ಚಿಕೊಂಡ ಕೊತ್ತಂಬರಿ ಹಾಗೂ ಹುರಿದುಕೊಂಡ ಕಡಲೆಕಾಯಿಯಿಂದ ಅಲಂಕಾರ ಮಾಡಿ ಸವಿಯಲು ನೀಡಿ.
- 1. ಸಬ್ಬಕ್ಕಿ/ಸಾಬುದಾನ ನೆನೆಯಿಡುವಾಗ ಮಿತವಾದ ನೀರನ್ನು ಬಳಸಿ. ಅತಿಹೆಚ್ಚು ನೀರಿನಲ್ಲಿ ನೆನೆಯಿಟ್ಟರೆ ಸಬ್ಬಕ್ಕಿ ಅಂಟಿನಂತೆ ಮುದ್ದೆಯಾಗಿ ಬಿಡುತ್ತದೆ.
- 2. ಸಬ್ಬಕ್ಕಿ ಸರಿ ಪ್ರಮಾಣದ ನೀರಿನೊಂದಿಗೆ ಚೆನ್ನಾಗಿ ನೆನೆದುಕೊಳ್ಳುವುದು ಈ ಪಾಕವಿಧಾನಕ್ಕೆ ಪ್ರಮುಖವಾದ ವಿಚಾರವಾಗಿದೆ.
- 3. ಉಪವಾಸದ ಸಿದ್ಧತೆಗಾಗಿ ಈ ಪಾಕವಿಧಾನವನ್ನು ಮಾಡುವುದಾದರೆ ಸಾಮಾನ್ಯ ಉಪ್ಪಿನ ಬದಲು ಸೈಂಧವ ಉಪ್ಪನ್ನು ಬಳಸಬಹುದು.
- ಸರ್ವಿಂಗ್ ಸೈಜ್ - 1 ಬೌಲ್
- ಕ್ಯಾಲೋರಿ - 486 ಕ್ಯಾಲ್
- ಫ್ಯಾಟ್ - 20 ಗ್ರಾಂ.
- ಪ್ರೋಟೀನ್ - 8 ಗ್ರಾಂ.
- ಕಾರ್ಬೋಹೈಡ್ರೇಟ್ - 71 ಗ್ರಾಂ.
- ಸಕ್ಕರೆ - 5 ಗ್ರಾಂ
- ಫೈಬರ್ - 5 ಗ್ರಾಂ
ವ್ರತಕ್ಕೆ ಸ್ಟೆಪ್ ಬೈ ಸ್ಟೆಪ್ ಸಬ್ಬಕ್ಕಿ ಕಿಚಡಿ ರೆಸಿಪಿ
1. ಸಬ್ಬಕ್ಕಿ ಜರಡಿ ಹಿಡಿದು, ನಂತರ ಗಂಜಿ ಹೋಗುವವರೆಗೆ ಚೆನ್ನಾಗಿ ತೊಳೆಯಿರಿ.

2. ನಂತರ ಒಂದು ಬೌಲ್‍ಗೆ ವರ್ಗಾಯಿಸಿ. ಒಂದು ಕಪ್ ನೀರನ್ನು ಬೆರೆಸಿ, ನೆನೆಯಲು ಬಿಡಿ.

3. ಇದು ಸುಮಾರು 6-8 ಗಂಟೆಗಳ ಕಾಲ ನೆನೆಯಬೇಕು. ಹೆಚ್ಚುವರಿ ನೀರನ್ನು ತೆಗೆಯಿರಿ.

4. ಒಂದು ಸಬ್ಬಕ್ಕಿ/ಸಾಬುದಾನವನ್ನು ಬೆರಳಿನಲ್ಲಿ ಹಿಚುಕಿ ನೋಡಿ. ಅದು ಒಡೆದರೆ ನೆನೆದಿದೆ ಎಂದರ್ಥ.

5. ನಂತರ ಹುರಿದುಕೊಂದ ಕಡಲೆಕಾಯಿ ಮತ್ತು ಸಕ್ಕರೆ ಹಿಟ್ಟನ್ನು ಸೇರಿಸಿ.

6. ಇದರ ಮೇಲೆ ನಿಂಬೆ ರಸವನ್ನು ಹಿಂಡಿ ಚೆನ್ನಾಗಿ ಮಿಶ್ರ ಗೊಳಿಸಿ.

7. ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

8. ಜೀರಿಗೆ ಮತ್ತು ಬೇಯಿಸಿ ಹೆಚ್ಚಿಕೊಂಡ ಆಲೂಗಡ್ಡೆಯನ್ನು ಹಾಕಿ, 2 ನಿಮಿಷಗಳಕಾಲ ಹುರಿಯಿರಿ.

9. ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ ಮತ್ತು ಕರಿ ಬೇವಿನ ಎಲೆಯನ್ನು ಹಾಕಿ 2 ನಿಮಿಷ ಹುರಿಯಿರಿ.

10. ನಂತರ ಸಾಬೂದಾನ/ಸಬ್ಬಕ್ಕಿ ಮಿಶ್ರಣವನ್ನು ಆಲೂಗಡ್ಡೆಯೊಂದಿಗೆ ಬೆರೆಸಿ ಚೆನ್ನಾಗಿ ಕಲುಕಿ.

11. ಉಪ್ಪನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.

12. ಇದನ್ನು ಮುಚ್ಚಿಟ್ಟು 7-8 ನಿಮಿಷಗಳ ಕಾಲ ಬೇಯಲು ಬಿಡಿ.

13. ಹೆಚ್ಚಿಕೊಂಡ ಕೊತ್ತಂಬರಿ ಹಾಗೂ ಹುರಿದುಕೊಂಡ ಕಡಲೆಕಾಯಿಯಿಂದ ಅಲಂಕಾರ ಮಾಡಿ ಸವಿಯಲು ನೀಡಿ.

Click it and Unblock the Notifications