For Quick Alerts
ALLOW NOTIFICATIONS  
For Daily Alerts

Navratri Recipe: ಸಾಬುದಾನ ಕಿಚಡಿ ಟೇಸ್ಟಿಯಾಗಿ ಮಾಡುವುದು ಹೇಗೆ?

Posted By:
|

ನವರಾತ್ರಿ ವ್ರತ ಮಾಡುವ ಅಕ್ಕಿಯಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸುವಂತಿಲ್ಲ, ಹಾಗಾಗಿ ಸಾಬುದಾನ ಕಿಚಡಿ ಮಾಡುತ್ತಾರೆ. ಸಾಬುದಾನ ಕಿಚಡಿ ಬಾಯಿಗೆ ರುಚಿಯಾಗಿರುತ್ತದೆ, ಹೊಟ್ಟೆಯೂ ತುಂಬುವುದು ಹಾಗೂ ಆರೋಗ್ಯಕ್ಕೂ ತುಂಬಾ ಒಳ್ಳೆಯದು.

Navratri Special Recipe

ಸಾಬುದಾನ ಕಿಚಡಿ ಸ್ವಲ್ಪ ಹೆಚ್ಚು-ಕಮ್ಮಿಯಾದರೆ ತಿನ್ನಲು ಚೆನ್ನಾಗಿರುವುದಿಲ್ಲ. ಅದನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ರುಚಿ ಸೂಪರ್‌ ಆಗಿರುತ್ತದೆ. ನಾವಿಲ್ಲಿ ಟೇಸ್ಟಿ ಸಾಬುದಾನ ಕಿಚಡಿಯನ್ನು ಸ್ಟೆಪ್ ಬೈ ಸ್ಟೆಪ್ ಮಾಡುವುದು ಹೇಗೆ ಎಂದು ಹೇಳಿದ್ದೇವೆ ನೋಡಿ:

Sabudana Khichdi Recipe, ಸಾಬುದಾನ ಕಿಚಡಿ ರೆಸಿಪಿ
Sabudana Khichdi Recipe, ಸಾಬುದಾನ ಕಿಚಡಿ ರೆಸಿಪಿ
Prep Time
10 Mins
Cook Time
10M
Total Time
20 Mins

Recipe By: Reena TK

Recipe Type: Breakfast

Serves: 4

Ingredients
  • ಬೇಕಾಗುವ ಸಾಮಗ್ರಿ

    1 ಕಪ್ ಸಾಬದಾನ 200ಗ್ರಾಂ

    1 ಕಪ್ ನೀರು

    1 ಚಮಚ ಎಣ್ಣೆ

    ಅರ್ಧ ಚಮಚ ಜೀರಿಗೆ

    1 ದೊಡ್ಡ ಆಲೂಗಡ್ಡೆ

    2 ಚಮಚ ಹಸಿ ನೆಲಗಡಲೆ

    1-2 ಹಸಿ ಮೆಣಸಿನಕಾಯಿ

    6-7 ಕರಿಬೇವು

    ಅರ್ಧ ಚಮಚ ಉಪ್ಪು (ರುಚಿಗೆ ತಕ್ಕ ಉಪ್ಪು)

    ಅರ್ಧ ಚಮಚ ಸಕ್ಕರೆ (Optional)

    ನಿಂಬೆರಸ ಅರ್ಧ ಚಮಚ

    1 ಚಮಚ ಕೊತ್ತಂಬರಿ ಸೊಪ್ಪು

Red Rice Kanda Poha
How to Prepare
  • ಬೇಕಾಗುವ ಸಾಮಗ್ರಿ

    * ಸಾಬುದಾನವನ್ನು ನೀರಿನಲ್ಲಿ 2 ಗಂಟೆ ನೆನೆಹಾಕಿ, ಅದರಲ್ಲಿರುವ ಪಿಷ್ಠ ಅಂಶ ಹೋಗಬೇಕು. ನಂತರ ಆ ನೀರನ್ನು ಸೋಸಿ.

    * ಈಗ ನೆನೆಹಾಕಿದ ಸಾಬುದಾನವನ್ನು ತೆಗೆದು ಒಂದು ಬೌಲ್‌ಗೆ ಹಾಕಿ ಅದರಲ್ಲಿ 1 ಕಪ್ ನೀರು ಹಾಕಿ ಒಂದು ರಾತ್ರಿ ಇಡಿ.

    * ಬೆಳಗ್ಗೆ ನೋಡಿದಾಗ ಸಾಬುದಾನ ನೀರನ್ನು ಹೀರಿಕೊಂಡಿರುತ್ತದೆ, ಅಧಿಕ ನೀರು ಇದ್ದರೆ ಆ ನೀರನ್ನು ಸೋಸಿ. ಸಾಬುದಾನವನ್ನು ಹಿಡಿದು ಪ್ರೆಸ್‌ ಮಾಡಿದಾಗ ಅದು ಸ್ಮ್ಯಾಶ್‌ ಆಗುವುದು.

    * ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ ಅದರಲ್ಲಿ ಜೀರಿಗೆ ಹಾಕಿ.

    * ಜೀರಿಗೆ ಚಟ್‌ಪಟ್ ಶಬ್ದ ಬರುವಾಗ ಕತ್ತರಿಸಿದ ಆಲೂಗಡ್ಡೆ ಹಾಕಿ 3-4 ನಿಮಿಷ ಸೌಟ್‌ನಿಂದ ಆಡಿಸುತ್ತಾ ಫ್ರೈ ಮಾಡಿ. ಆಲೂಗಡ್ಡೆಯನ್ನು ತುಂಬಾ ತೆಳುವಾಗಿ ಕತ್ತರಿಸಿರಬೇಕು. ಆಗ ಬೇಗ ಬೇಯುತ್ತದೆ.

    * ಈಗ ನೆಲಗಡಲೆ ಹಾಕಿ ಮತ್ತೆ 2-3 ನಿಮಿಷ ಸೌಟ್‌ನಿಂದ ಆಡಿಸುತ್ತಾ ಫ್ರೈ ಮಾಡಿ.

    * ಈಗ ಹಸಿ ಮೆಣಸಿನಕಾಯಿ, ಕರಿಬೇವು ಹಾಕಿ ಸೌಟ್‌ನಿಂದ ಆಡಿಸಿ, ಸಾಬುದಾನ ಹಾಕಿ, ಉಪ್ಪು, ಸಕ್ಕರೆ ಹಾಕಿ ಸೌಟ್‌ನಿಂದ ಒಮ್ಮೆ ತಿರುಗಿಸಿ. ತುಂಬಾ ಬೇಯಿಸಬೇಡಿ, ಅಂಟು-ಅಂಟಾಗುವುದು.

    * ಉರಿಯಿಂದ ಪ್ಯಾನ್‌ ಇಳಿಸಿ, ನಿಂಬೆರಸ ಹಾಕಿ ಮಿಕ್ಸ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಸಾಬುದಾನ ಕಿಚಡಿ ರೆಡಿ.

    * ರೆಡಿಯಾದ ಸಾಬುದಾನ ಕಿಚಡಿಯನ್ನು ತಣ್ಣನೆಯ ಮೊಸರು ಜೊತೆ ಸರ್ವ್ ಮಾಡಿ.

Instructions
  • ನೀವು ಬೇಕಾದರೆ ಕಿಚಡಿಗೆ ಶುಂಠಿ ಸೇರಿಸಬಹುದು, ರುಚಿ ಚೆನ್ನಾಗಿರುತ್ತದೆ. ನೀವು ವ್ರತದ ಸಮಯದಲ್ಲಿ ಅಲ್ಲದೆ ಬೇರೆ ಸಮಯದಲ್ಲಿ ಮಾಡುವುದಾದರೆ ಅರಿಶಿಣ ಹಾಗೂ ಇತರ ಮಸಾಲೆ ಸಾಮಗ್ರಿ ಬಳಸಬಹುದು' *ವ್ರತ ಮಾಡುವುದಾದರೆ ಉಪ್ಪು ಬದಲಿಗೆ ಸಾಬದಾನ ನಮಕ್ (ಉಪ್ಪು) ಬಳಸಿ.
Nutritional Information
  • ಕ್ಯಾಲೋರಿ - 381
  • ಕೊಬ್ಬು - 12ಗ್ರಾಂ
  • ಪ್ರೊಟೀನ್ - 2ಗ್ರಾಂ
  • ಕಾರ್ಬ್ಸ್ - 63ಗ್ರಾಂ
[ 4 of 5 - 110 Users]
X
Desktop Bottom Promotion