Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹಬ್ಬದ ದಿನಕ್ಕೆ ರುಚಿ ರುಚಿಯ ಸಬ್ಬಕ್ಕಿ ಪಾಯಸ..! ಮಾಡೋದು ತುಂಬಾ ಸುಲಭ
ದೇಶದ ಮೂಲೆ ಮೂಲೆಯಲ್ಲೂ ಹೋಳಿ ಆಚರಣೆ ಭರ್ಜರಿಯಾಗಿದೆ. ಕಳೆದ ಎರಡು ಮೂರು ವರ್ಷದಿಂದಿಂದಲೂ ಹೋಳಿ ಆಚರಣೆ ಸೀಮಿತವಾಗಿತ್ತು, ಕೋವಿಡ್ ಹಿನ್ನೆಲೆಯಲ್ಲಿ ಹೋಳಿ ಆಚರಣೆ ಅಷ್ಟೇನು ವಿಜೃಂಭಣೆಯಿಂದ ಕೂಡಿರಲಿಲ್ಲ. ಆದರೆ ಈ ಬಾರಿ ಹೋಳಿ ಮತ್ತಷ್ಟು ರಂಗು ಪಡೆದಿದೆ.
ಇನ್ನು ಈ ಹಬ್ಬದಂದು ಹಲವು ರೀತಿಯ ಸಿಹಿ ತಿಂಡಿಗಳ ಮಾಡುವುದು ಸಹ ಆಚರಣೆಯಲ್ಲಿ. ಅದರಲ್ಲೂ ಹೋಳಿಯಲ್ಲಿ ಸಿಹಿಗಾಗಿ ಪಾಯಸ ಮಾಡುವುದು ಸಾಮಾನ್ಯ. ಹೀಗಾಗಿ ನಾವಿಂದು ವಿಶಿಷ್ಟವಾದ ಪಾಯಸ ಮಾಡುವುದನ್ನು ತಿಳಿದುಕೊಳ್ಳೋಣ. ಸಬ್ಬಕ್ಕಿ ಪಾಯಸ ಅಂದರೇನೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅಷ್ಟೊಂದು ರುಚಿಕರ ಪಾಯಸವಿದು. ಚಿಕ್ಕವರಿಂದ ಹಿಡಿದು ಹಿರಿಯರ ವರೆಗೂ ಎಲ್ಲರೂ ಇಷ್ಟಪಡುವ ಸಿಹಿ ಖಾದ್ಯವಿದು.

ಹಾಗಾದರೆ ಬಾವಿಂದು ಹೋಳಿಯ ಸಂದರ್ಭದಲ್ಲಿ ರುಚಿರುಚಿಯ ಸಬ್ಬಕ್ಕಿ ಪಾಯಸ ಮಾಡುವುದು ಹೇಗೆ? ಸಬ್ಬಕ್ಕಿ ಪಾಯಸ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಸಬ್ಬಕ್ಕಿ ಪಾಯಸದ ಪಾಕವಿಧಾನವೇನು ಎಂಬುದನ್ನು ತಿಳಿದುಕೊಳ್ಳೋಣ.
ಸಬ್ಬಕ್ಕಿ ಪಾಯಸ ಮಾಡಲು ಬೇಕಾಗುವ ಪದಾರ್ಥಗಳು
- ಸಬ್ಬಕ್ಕಿ -ಅರ್ಧ ಕಪ್ (5ರಿಂದ 6 ಜನಕ್ಕೆ)
- ತುಪ್ಪ
- ಬಾದಾಮಿ
- ಪಿಸ್ತ
- ಗೊಂಡಂಬಿ
- ಹಾಲು
- ಸಕ್ಕರೆ
- ಏಲಕ್ಕಿ
- ಬಾದಾಮ್ ಪೌಡರ್
- ಕಂಡೆನ್ಸಡ್ ಮಿಲ್ (ಮಿಲ್ಕ್ಮೇಡ್)
ಸಬ್ಬಕ್ಕಿ ಪಾಯಸ ಮಾಡುವ ವಿಧಾನ
ಮೊದಲು ಒಂದು ಪಾತ್ರೆಯಲ್ಲಿ ತುಪ್ಪ ಹಾಕಿ. ತುಪ್ಪ ಬಿಸಿಯಾದ ಬಳಿಕ ಅದಕ್ಕೆ ಒಣದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತವನ್ನು ತುಂಡು ಮಾಡಿ ಅದಕ್ಕೆ ಹಾಕಿ ಹುರಿದುಕೊಳ್ಳಿ. ಈ ವೇಳೆ ಮಧ್ಯಮ ಉರಿಯಲ್ಲಿ ಕಾಯಿಸಿ ಬಳಿಕ ಈ ಡ್ರೈ ಫ್ರೂಟ್ಸ್ ಅನ್ನು ಎತ್ತಿ ಬದುಗಿಟ್ಟುಕೊಳ್ಳಿ.
ಒಂದು ಪಾತ್ರೆಯಲ್ಲಿ ಸಬ್ಬಕ್ಕಿ ತೆಗೆದುಕೊಂಡು ಚೆನ್ನಾಗಿ ತೊಳೆದುಕೊಳ್ಳಿ. ಬಳಿಕ ಅದನ್ನು ತುಪ್ಪದ ಪಾತ್ರೆಗೆ ಹಾಕಿ ಫ್ರೈ ಮಾಡಿಕೊಳ್ಳಿ. 5ರಿಂದ 6 ನಿಮಿಷ ಫ್ರೈ ಮಾಡಿದರೆ ಸಾಕು. ಅರ್ಧ ಕಪ್ ಸಬ್ಬಕ್ಕಿ ಹಾಕಿದರೆ ಒಂದೂವರೆ ಕಪ್ ನೀರು ಹಾಕಿ. ನಿಮಗೆ ತಳುವಾದ ಪಾಯಸ ಬೇಕಾದರೆ ಇನ್ನು ಹೆಚ್ಚು ನೀರು ಹಾಕಿ. 5 ನಿಮಿಷದ ಬಳಿಕ ಸಬ್ಬಕ್ಕಿ ಬೇಯುತ್ತದೆ.

ನಂತರ ಅರ್ಧ ಲೀಟರ್ ಬಿಸಿಯಾದ ಹಾಲನ್ನು ಅದಕ್ಕೆ ಹಾಕಿ 1 ನಿಮಿಷ ಚೆನ್ನಾಗಿ ಕುದಿಸಿ . ಈ ವೇಳೆ ಸಕ್ಕರೆ, ಬಾದಾಮ್, ಏಲಕ್ಕಿ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಕ್ಕರೆ ಹಾಕಿರೋದ್ರಿಂದ ಮಿಲ್ಕ್ ಮೇಡ್ ಬಳಸಬೇಕು ಅಂತೇನಿಲ್ಲ. ರುಚಿಗೆ ಬೇಕಾದರೆ ನೀವು ಸಕ್ಕರೆ ಮತ್ತು ಮಿಲ್ಕ್ ಮೇಡ್ ಎರಡನ್ನೂ ಬಳಸಿ ಇಲ್ಲದಿದ್ದರೆ ಯಾವುದಾದರು ಒಂದನ್ನು ಹಾಕಿ ಸಾಕು. ಇದೆಲ್ಲಾ ಹಾಕಿದ ಬಳಿಕ 1 ನಿಮಿಷ ಕುದಿಸಿದರೆ ಸಾಕು.
ಈಗ ನಿಮ್ಮ ಮುಂದೆ ಬಿಸಿ ಬಿಸಿಯಾದ ಸಬ್ಬಕ್ಕಿ ಪಾಯಸ ರೆಡಿ. ಇದನ್ನು ಊಟದ ಮುನ್ನ, ಊಟದ ಬಳಿಕ ಸವಿಯಬಹುದು. ಬಾಯಿಗೆ ತುಂಬಾನೆ ರುಚಿ ನೀಡುವುದಲ್ಲದೆ ಹಬ್ಬದ ರಂಗು ಹೆಚ್ಚಿದೋದು ಪಕ್ಕ.
ಇದಲ್ಲದೆ ಹಬ್ಬಕ್ಕೆ ಶಾವಿಗೆ ಪಾಯಸವನ್ನೂ ಮಾಡಬುಹುದು ಅದಕ್ಕೂ ಸಹ ಇದೇ ರೀತಿಯ ಪಾಕವಿಧಾನವನ್ನೇ ಬಳಸಬಹುದು. ಆದರೆ ಸಬ್ಬಕ್ಕಿ ಹಾಕುವ ಕಡೆ ಶಾವಿಗೆ ಹಾಕಿಕೊಂಡರಾಯಿತು. ಅದಕ್ಕೂ ಸಹ ಹಾಲು ಸೇರಿದಂತೆ ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳ ಬಳಸಬಹುದು. ಇದರ ಜೊತೆಗೆ ಕೇಸರಿ ಪುಡಿ ಸೇರಿಸಿ ಶಾವಿಗೆ ಪಾಯಸ ಮಾಡಿದರೆ ರುಚಿಯಲ್ಲಿ ಎಲ್ಲಕ್ಕಿಂತ ಉತ್ತಮ ಎನಿಸುತ್ತೆ. ಜೊತೆಗೆ ಒಮ್ಮೆ ನೀವು ಈ ಪಾಯಸಗಳ ಮಾಡಿದ್ರೆ ಪದೇ ಪದೇ ಮಾಡುವ ಮನಸ್ಸಾಗುತ್ತೆ. ಮುಂದೆ ಹಬ್ಬವೇ ಬರಬೇಕು ಎಂದು ನೀವು ಕಾಯುವುದಿಲ್ಲ. ನಿಮ್ಮ ಫ್ರೀ ಟೈಮ್ನಲ್ಲಿಯೂ ಈ ಪಾಯಸಗಳ ಮಾಡಲು ಮುಂದಾಗುತ್ತೀರಿ.



Click it and Unblock the Notifications
