Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ತೆಂಗಿನಕಾಯಿ ಹುರಿದು ಮಾಡುವ ಚಿಕನ್ ಸಾರು ಬೊಂಬಾಟ್ ಆಗಿರುತ್ತೆ
ಚಿಕನ್ ಸಾರನ್ನು ನೀವು ತೆಂಗಿನಕಾಯಿ ಹಾಕಿ ಮಾಡಲು ಇಷ್ಟಪಡುವುದಾದರೆ, ತೆಂಗಿನಕಾಯಿಯನ್ನು ಹುರಿದು ಟ್ರೈ ಮಾಡಿ, ತುಂಬಾ ಟೇಸ್ಟಿಯಾಗಿರುತ್ತೆ. ಕೇರಳ, ಮಂಗಳೂರು ಕಡೆ ಈ ರೀತಿಯ ಚಿಕನ್ ಸಾರು ಹೆಚ್ಚಾಗಿ ಮಾಡುತ್ತಾರೆ.

ಈ ಸಾರು ಅನ್ನ, ರೊಟ್ಟಿ, ಚಪಾತಿ ಜೊತೆ ಸವಿಯಲು ತುಂಬಾ ರುಚಿಯಾಗಿರುತ್ತೆ, ಅಲ್ಲದೆ ಈ ಚಿಕನ್ ಸಾರು ತೆಂಗಿನಕಾಯಿ ಹುರಿದು ಮಾಡುವುದರಿಂದ ಬೇಗನೆ ಹಾಳಾಗುವುದಿಲ್ಲ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Recipe By: Reena TK
Recipe Type: Curry
Serves: 8
-
ಬೇಕಾಗುವ ಸಾಮಗ್ರಿ
ಚಿಕನ್ 2 ಕೆಜಿ
ಖಾರದ ಪುಡಿ 3 ಚಮಚ
ಮೀಟ್ ಮಸಾಲ 1 ಚಮಚ
ತುರಿದ ತೆಂಗಿನಕಾಯಿ 2 ಕಪ್
ಒಣ ಮೆಣಸು 2
ಈರುಳ್ಳಿ 5
ಕಾಳು ಮೆಣಸು 11/2 ಚಮಚ
ಚಕ್ಕೆ ಒಂದು ಇಂಚಿನಷ್ಟು ದೊಡ್ಡದು
ಕರಿಬೇವು
ಹಸಿ ಮೆಣಸಿನಕಾಯಿ
ನೀರು 3/4 ಕಪ್
ತೆಂಗಿನೆಣ್ಣೆ 2 ಚಮಚ
ತೆಂಗಿನಕಾಯಿ ತುಂಡು 3 ಚಮಚ
ಅರಿಶಿಣ ಪುಡಿ 1 ಚಮಚ
ಕೊತ್ತಂಬರಿ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ಕೊತ್ತಂಬರಿ ಬೀಜ 2 ಚಮಚ
ಬೆಳ್ಳುಳ್ಳಿ ಎಸಳು 10
ತೆಂಗಿನೆಣ್ಣೆ 3 ಚಮಚ
ಬೆಳ್ಳುಳ್ಳಿ 15 ಎಸಳು
ಸ್ವಲ್ಪ ಶುಂಠಿ
ಈರುಳ್ಳಿ 2
ಟೊಮೆಟೊ 1
ಕಾಳು ಮೆಣಸಿನ ಪುಡಿ 1 ಚಮಚ
ಚಿಕ್ಕ ಈರುಳ್ಳಿ 4
ಸ್ವಲ್ಪ ಕರಿಬೇವು
-
ಮಾಡುವ ವಿಧಾನ
* ಚಿಕನ್ ಅನ್ನು ಚೆನ್ನಾಗಿ ತೊಳೆದು ಅದರಲ್ಲಿ 1 ಚಮಚ ಅರಿಶಿಣ ಪುಡಿ 3 ಚಮಚ ಖಾರದ ಪುಡಿ, 2 ಚಮಚ ಕೊತ್ತಂಬರಿ ಪುಡಿ, 1 ಚಮಚ ಮೀಟ್ ಮಸಾಲ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ 30 ನಿಮಿಷಗಳ ಕಾಲ ಇಡಿ.
* ಈಗ ದಪ್ಪ ತಳವಿರುವ ಪಾತ್ರೆ ತೆಗೆದು ಅದರಲ್ಲಿ 2 ಕಪ್ ತೆಂಗಿನ ತುರಿ, ಕೊತ್ತಂಬರಿ ಬೀಜ, ಒಣ ಮೆಣಸು, 10 ಎಸಳು ಬೆಳ್ಳುಳ್ಳಿ, ಚಿಕ್ಕ ಈರುಳ್ಳಿ 2, ಸ್ವಲ್ಪ ಕರಿಬೇವು, ಒಂದೂವರೆ ಚಮಚ ಕಾಳು ಮೆಣಸು ಹಾಕಿ ತೆಂಗಿನಕಾಯಿ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವಷ್ಟು ಹೊತ್ತು ಫ್ರೈ ಮಾಡಿ.
* ಈಗ ಹುರಿದ ತೆಂಗಿನ ತುರಿಗೆ ಸ್ವಲ್ಪ ನೀರು ಹಾಕಿ ನುಣ್ಣನೆ ರುಬ್ಬಿ.
* ದಪ್ಪವಿರುವ ಪಾತ್ರೆಗೆ 3 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಒಂದು ಇಂಚಿನಷ್ಟು ಚಕ್ಕೆ ಹಾಕಿ, ಬೆಳ್ಳುಳ್ಳಿ ಎಸಳು, ಚಿಕ್ಕ ಈರುಳ್ಳಿ, ಶುಂಠಿ, ಕರಿಬೇವು ಹಾಕಿ 3-4 ನಿಮಿಷ ಸೌಟ್‌ನಿಂದ ಆಡಿಸಿ.
* ನಂತರ ಈರುಳ್ಳಿ, ಹಸಿ ಮೆಣಸು ಹಾಕಿ ಅವು ಸ್ವಲ್ಪ ಮೆತ್ತಗಾಗುವವರೆಗೆ ಆಡಿಸಿ.
* ಈಗ ಕತ್ತರಿಸಿದ ಟೊಮೆಟೊ ಹಾಕಿ.
* ಟೊಮೆಟೊ ಮೆತ್ತಗಾದ ಮೇಲೆ ಮಿಕ್ಸ್ ಮಾಡಿಟ್ಟ ಚಿಕನ್ ಹಾಕಿ.
* ಈಗ ಪಾತ್ರೆಯ ಬಾಯಿ ಮುಚ್ಚಿ10 ನಿಮಿಷ ಬೇಯಿಸಿ, ಆಗಾಗ ಸೌಟ್‌ನಿಂದ ಆಡಿಸಿ.
* ಈಗ ರುಬ್ಬಿದ ತೆಂಗಿನಕಾಯಿ 3/4 ಕಪ್ ನೀರು ಹಾಕಿ ಮಿಕ್ಸ್ ಮಾಡಿ.
* ಈಗ ಪಾತ್ರೆಯ ಬಾಯಿ ಮುಚ್ಚಿ 15 ನಿಮಿಷ ಮುಚ್ಚಿ ಬೇಯಿಸಿ. ಹೀಗೆ ಬೇಯಿಸುವಾಗ ಸೌಟ್‌ನಿಂದ ಆಗಾಗ ಆಡಿಸುತ್ತಾ ಇರು.
* ಒಂದು ಚಮಚ ಕಾಳು ಮೆಣಸಿನ ಪುಡಿ ಹಾಕಿ ಮತ್ತೆ ಎರಡು ನಿಮಿಷ ಬೇಯಿಸಿ.
*ಈಗ ಒಗ್ಗರಣೆ ಪಾತ್ರೆಗೆ ಸ್ವಲ್ಪ ಎಣ್ಣೆ ಹಾಕಿ ಅದರಲ್ಲಿ ಒಣ ಮೆಣಸು ಮತ್ತು ಕರಿಬೇವು ಹಾಕಿ ಒಗ್ಗರಣೆ ನೀಡಿದರೆ ಚಿಕನ್ ರೆಡಿ.
- ನೀವು ಸಾರು ರೀತಿ ಬೇಕಿದ್ದರೆ ಸ್ವಲ್ಪ ನೀರು ಅಧಿಕ ಹಾಕಿ, ಟ್ರೈ ರೀತಿ ಬೇಕಿದ್ದರೆ ನೀರು ಆವಿಯಾಗುವವರೆಗೆ, ಪಾತ್ರೆಯ ಬಾಯಿ ತೆರೆದು ಹಿಟ್ಟು ಬೇಯಿಸಿ.
- ಕೊಬ್ಬು - 21 ಗ್ರಾಂ
- ಕಾರ್ಬ್ಸ್ - 6 ಗ್ರಾಂ



Click it and Unblock the Notifications
