Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹಳ್ಳಿ ಸ್ಟೈಲ್ ಸುಟ್ಟ ಬದನೆಕಾಯಿ ಚಟ್ನಿ! ಈ ರೀತಿ ಮಾಡಿ ಊಟದ ರುಚಿ 10 ಪಟ್ಟು ಹೆಚ್ಚುತ್ತೆ.. ಅಜ್ಜಿ ನೆನಪಾಗ್ತಾರೆ!
ಈ ಚಟ್ನಿ ಇದ್ದರೆ ಊಟದ ರುಚಿ ಹತ್ತು ಪಟ್ಟು ಹೆಚ್ಚಾಗುತ್ತೆ! ಮೈ ಕೊರೆಯುವ ಚಳಿಯಲ್ಲಿ ಬಿಸಿ ಅನ್ನದ ಜೊತೆ ಈ ಚಟ್ನಿ ಸವಿಯಿರಿ, ಮಸ್ತ್ ಇರುತ್ತೆ. ಹೌದು, ಅನ್ನ, ರೊಟ್ಟಿ ಅಥವಾ ಚಪಾತಿ ಜೊತೆಗೆ ಸೂಕ್ತವಾದ ಈ ಚಟ್ನಿ (Chutney), ವಿಶೇಷವಾಗಿ ಚಳಿಗಾಲದಲ್ಲಿ ಊಟದ ಸವಿಯನ್ನು ಡಬಲ್ ಮಾಡುತ್ತದೆ. ಯಾವುದೇ ಮಸಾಲೆಗಳನ್ನು ಅರೆಯುವ ಜಂಜಾಟವಿಲ್ಲದೆ, ಸುಲಭ ವಿಧಾನದಲ್ಲಿ ಇದನ್ನು ತಯಾರಿಸಬಹುದು.
ಚಳಿಗಾಲದ ಆಗಮನದೊಂದಿಗೆ, ಬಿಸಿಬಿಸಿಯಾದ, ದೇಸಿ ರುಚಿಗಳತ್ತ ನಮ್ಮ ಮನಸ್ಸು ಸಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚು ಜನಪ್ರಿಯವಾಗಿರುವ ತಿನಿಸುಗಳಲ್ಲಿ 'ಸುಟ್ಟ ಬದನೆಕಾಯಿ ಚಟ್ನಿ' (Roasted Baingan Chutney) ಪ್ರಮುಖವಾದುದು. ಒಲೆಯಲ್ಲಿ ಅಥವಾ ನೇರ ಬೆಂಕಿಯಲ್ಲಿ ಸುಟ್ಟ ಬದನೆಕಾಯಿಯ ಹೊಗೆಯ ಪರಿಮಳ, ಸಾಸಿವೆ ಎಣ್ಣೆಯ ವಿಶಿಷ್ಟ ಘಾಟು ಹಾಗೂ ಬೆಳ್ಳುಳ್ಳಿ-ಮೆಣಸಿನಕಾಯಿಯ ಖಾರ ಸಂಯೋಜನೆ ಈ ಚಟ್ನಿಗೆ ಅದ್ಭುತ ಸ್ವಾದ ನೀಡುತ್ತದೆ. ಇದನ್ನು ಉತ್ತರ ಭಾರತದಲ್ಲಿ "ಬೈಂಗನ್ ಭರ್ತಾ" ಎಂದು ಕರೆಯಲಾಗುತ್ತದೆ.
ಸುಟ್ಟ ಬದನೆಕಾಯಿ ಚಟ್ನಿಯು ಕೇವಲ ಬಾಯಿ ರುಚಿಯನ್ನು ಹೆಚ್ಚಿಸುವುದಲ್ಲದೆ, ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಿರುವ ಉಷ್ಣತೆಯನ್ನೂ ನೀಡುತ್ತದೆ. ಬಿಸಿಬಿಸಿ ರೊಟ್ಟಿ, ಚಪಾತಿ ಅಥವಾ ಅನ್ನದ ಜೊತೆಗೆ ಈ ಚಟ್ನಿ ಇದ್ದರೆ ಬೇರೆ ಯಾವುದೇ ಪಲ್ಯ ಅಥವಾ ಸಾರಿನ ಅವಶ್ಯಕತೆಯೇ ಇರಲ್ಲ. ಕಡಿಮೆ ಪದಾರ್ಥಗಳನ್ನು ಬಳಸಿ ತಯಾರಿಸುವ ಈ ದೇಸಿ ಚಟ್ನಿ ಆರೋಗ್ಯ ದೃಷ್ಟಿಯಿಂದಲೂ ಪ್ರಯೋಜನಕಾರಿ. ಹಳ್ಳಿ ಶೈಲಿಯ ಸುಟ್ಟ ಬದನೆಕಾಯಿ ಚಟ್ನಿ ತಯಾರಿಸುವ ವಿಧಾನ (Roasted Baingan Chutney Recipe) ಇಲ್ಲಿದೆ.
ಚಟ್ನಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಬದನೆಕಾಯಿ
• ಬೆಳ್ಳುಳ್ಳಿ ಎಸಳು
• ಹಸಿ ಮೆಣಸಿನಕಾಯಿ
• ಈರುಳ್ಳಿ,
• ಟೊಮೆಟೊ
• ಕೊತ್ತಂಬರಿ ಸೊಪ್ಪು
• ಎಣ್ಣೆ / ಸಾಸಿವೆ ಎಣ್ಣೆ
• ರುಚಿಗೆ ತಕ್ಕಷ್ಟು ಉಪ್ಪು
• ಜೀರಿಗೆ ಪುಡಿ
• ಅಚ್ಚಖಾರದ ಪುಡಿ
• ನಿಂಬೆ ರಸ
ಸುಟ್ಟ ಬದನೆಕಾಯಿ ಚಟ್ನಿ ತಯಾರಿಸುವ ವಿಧಾನ
- ಮೊದಲಿಗೆ ದೊಡ್ಡ ಬದನೆಕಾಯಿಯನ್ನು ಶುಚಿಯಾಗಿ ತೊಳೆದು ಒಣಗಿಸಿ. ನಂತರ ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಸವರಿ.
- ಗ್ಯಾಸ್ ಒಲೆಯ ಮೇಲೆ ಅಥವಾ ನೇರ ಬೆಂಕಿಯಲ್ಲಿ ಬದನೆಕಾಯಿಯನ್ನು ಸುತ್ತಲೂ ತಿರುಗಿಸುತ್ತಾ ಸಮನಾಗಿ ಸುಡಬೇಕು. ಹೊರ ಪದರ ಸಂಪೂರ್ಣ ಕಪ್ಪಾಗಿ, ಒಳಗಿನ ಭಾಗ ಮೃದುವಾಗುವವರೆಗೂ ಬೇಯಿಸಿ.
- ಸುಟ್ಟ ಬದನೆಕಾಯಿ ತಣ್ಣಗಾದ ಮೇಲೆ ಅದರ ಕಪ್ಪಾದ ಸಿಪ್ಪೆಯನ್ನು ತೆಗೆದುಹಾಕಿ. ನಂತರ ಇದನ್ನು ಒಂದು ಪಾತ್ರೆಗೆ ಹಾಕಿ.
- ಈಗ ಕೈಯಿಂದ ಅಥವಾ ಸ್ಮ್ಯಾಷರ್ ಬಳಸಿ ನುಣ್ಣಗೆ ಹಿಸುಕಿಕೊಳ್ಳಿ (ಮ್ಯಾಶ್ ಮಾಡಿ). ಇದು ಚಟ್ನಿಯ ಮೃದು ತಳಹದಿಗೆ ಸಹಕಾರಿ.
- ಈಗ ಹಿಸುಕಿದ ಬದನೆಕಾಯಿಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
- ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು, ಅಚ್ಚಖಾರದ ಪುಡಿ ಮತ್ತು ಹುರಿದ ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
- ಒಂದು ಸಣ್ಣ ಬಾಣಲೆಯಲ್ಲಿ ಸಾಸಿವೆ ಎಣ್ಣೆಯನ್ನು ಹೊಗೆ ಬರುವವರೆಗೆ ಕಾದಿರಿಸಿ. ಈ ಬಿಸಿ ಎಣ್ಣೆಯನ್ನು ತಕ್ಷಣವೇ ಚಟ್ನಿಯ ಮೇಲ್ಭಾಗಕ್ಕೆ ಸುರಿಯಿರಿ. ಇದು ಚಟ್ನಿಗೆ ಅದ್ಭುತವಾದ ಹಳ್ಳಿಗಾಡಿನ ಪರಿಮಳ ಹಾಗೂ ಸ್ಮೋಕಿ ರುಚಿಯನ್ನು ನೀಡುತ್ತದೆ.
- ಅಂತಿಮವಾಗಿ ನಿಮಗೆ ಸ್ವಲ್ಪ ಹುಳಿ ಬೇಕು ಎನಿಸಿದರೆ, ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ಇಷ್ಟು ಮಾಡಿದರೆ ಸಾಕು, ಬಾಯಲ್ಲಿ ನೀರೂರಿಸುವ ಹಳ್ಳಿಯ ಶೈಲಿಯ ಸುಟ್ಟ ಬದನೆಕಾಯಿ ಚಟ್ನಿ ಸವಿಯಲು ಸಿದ್ಧ.
ಸವಿಯುವುದು ಹೇಗೆ?
ಈ ಚಟ್ನಿಯನ್ನು ಬಿಸಿಬಿಸಿ ರೊಟ್ಟಿ, ಚಪಾತಿ ಅಥವಾ ಪರೋಟದೊಂದಿಗೆ ಸವಿಯಬಹುದು. ಬಿಸಿ ಅನ್ನ ಹಾಗೂ ಮುದ್ದೆಯೊಂದಿಗೂ ಇದು ಅತ್ಯುತ್ತಮ ಜೋಡಿ ಆಗುತ್ತದೆ. ಯಾವುದೇ ಗ್ರೈಂಡರ್ ಅಥವಾ ಮಿಕ್ಸಿ ಬಳಸುವ ಅಗತ್ಯವಿಲ್ಲದೆ, ನಿಮ್ಮ ಮನೆಯಲ್ಲಿಯೇ ಹಳೆಯ ಕಾಲದ ದೇಸಿ ರುಚಿಯನ್ನು ಪಡೆಯಲು ಈ ಚಟ್ನಿ ಅತ್ಯಂತ ಸುಲಭ ವಿಧಾನ.



Click it and Unblock the Notifications

