Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ರುಚಿಯಾದ ಮಾವಿನ ಹಣ್ಣಿನ ಸಾರಿನ ಸರಳ ರೆಸಿಪಿ
ಮಾವಿನ ಹಣ್ಣಿನ ಸಮಯದಲ್ಲಿ ಅದರಿಂದ ತರಾವರಿ ಅಡುಗೆ ಮಾಡುವ ಖುಷಿಯೇ ಬೇರೆ. ಮಾವಿನ ಹಣ್ಣಿನ ಸಾರು ಅನ್ನದ ಜೊತೆ ಸವಿಯಲು ತುಂಬಾನೇ ರುಚಿಯಾಗಿರುತ್ತೆ.

ಮಾವಿನ ಹಣ್ಣನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಮಾಡುತ್ತಾರೆ, ನಾವಿಲ್ಲಿ ತುಂಬಾ ರುಚಿಕರವಾಗಿ ಮಾವಿನ ಹಣ್ಣಿನ ಸಾರು ಮಾಡುವ ಸರಳ ರೆಸಿಪಿ ನೀಡಿದ್ದೇವೆ ನೋಡಿ:
Recipe By: Reena
Recipe Type: Vegetarian
Serves: 3
-
ಬೇಕಾಗುವ ಸಾಮಗ್ರಿ
5-6 ಮಾವಿನ ಹಣ್ಣು
(ಕಾಡು ಮಾವಿನ ಹಣ್ಣಾದರೆ ಇನ್ನೂ ರುಚಿಯಾಗಿರುತ್ತೆ)
1/ 2 ಚಮಚ ಜೀರಿಗೆ ಪುಡಿ
1 ಚಮಚ ಖಾರದ ಪುಡಿ
1/2 ಚಮಚ ಕೊತ್ತಂಬರಿ ಪುಡಿ
ಸ್ವಲ್ಪ ಬೆಲ್ಲದ ತುಂಡು ಅಥವಾ 1 ಚಮಚ ಸಕ್ಕರೆ
ಎಣ್ಣೆ 4 ಚಮಚ
ಸಾಸಿವೆ 1/2 ಚಮಚ
1/2 ಚಮಚ ಅರಿಶಿಣ ಪುಡಿ
ಕಾಳು ಮೆಣಸಿನ ಪುಡಿ 1 ಚಮಚ
ಸ್ವಲ್ಪ ಕರಿಬೇವಿನ ಎಲೆ
ಬೆಳ್ಳುಳ್ಳಿ 8-10 ಎಸಳು
-
ಮಾಡುವ ವಿಧಾನ:
* ಮಾವಿನ ಹಣ್ಣು ತೊಳೆದು ಸಿಪ್ಪೆ ಸಹಿತ ಅದನ್ನು ಎರಡು ಡೊಡ್ಡ ಭಾಗ ಮಾಡಿ, ಗೊರಟೆ ಕೂಡ ಇರಲಿ.
* ತವಾಗೆ ಖಾರದ ಪುಡಿ, ಕೊತ್ತಂಬರಿ ಪುಡಿ , ಜೀರಿಗೆ ಪುಡಿ ಹಾಕಿ ಹುರಿಯಿರಿ. ಬಣ್ಣ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.
* ಈಗ ಸಾರು ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ, ನಂತರ ಕರಿಬೇವು ಹಾಕಿ, ಮಾವಿನ ಹಣ್ಣು ಹಾಕಿ, ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ ಹಾಕಿ.
* ಮಾವಿನ ಹಣ್ಣು ಎಣ್ಣೆಯಲ್ಲೇ ಬೇಯಲಿ, ಬೇಯುವಾಗ ರೋಸ್ಟ್ ಮಾಡಿಟ್ಟ ಮಸಾಲೆ ಪುಡಿ ಹಾಕಿ 5 ನಿಮಿಷ ಬೇಯಿಸಿ, ನಂತರ ಬೆಲ್ಲದ ಚೂರು ಅಥವಾ ಸಕ್ಕರೆ ಹಾಕಿ ಮಿಕ್ಸ್ ಮಾಡಿ 2-3 ನಿಮಿಷ ಬೇಯಿಸಿ ಉರಿಯಿಂದ ಇಳಿಸಿ.
ಇಷ್ಟು ಮಾಡಿದರೆ ಬಿಸಿ ಬಿಸಿ ಅನ್ನದ ಜೊತೆ ಸವಿಯಲು ರುಚಿಯಾದ ಮಾವಿನ ಹಣ್ಣಿನ ಸಾರು ರೆಡಿ.
ಮಾವಿನ ಹಣ್ಣಿನ ಸಾರನ್ನು ಸ್ವಲ್ಪ ನೀರಾಗಿ ಮಾಡ ಬಯಸುವುದಾದರೆ ಸ್ವಲ್ಪ ನೀರು ಸೇರಿಸಿ.
- People - 3
- Calories - 99 calories
- Fat - 0.63g
- Protein - 1.35 g
- Carbohydrate - 24.7 g
- Sugar - 22.5 g
- Fiber - 2.64 g



Click it and Unblock the Notifications
