Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬಾಳೆಹಣ್ಣಿನ ಪಾಯಸ ರೆಸಿಪಿ: ಸಕತ್ ರುಚಿ, ಆರೋಗ್ಯಕ್ಕೂ ಒಳ್ಳೆಯದು
ಹಬ್ಬ ಹರಿದಿನಗಳಲ್ಲಿ ಮಾತ್ರವಲ್ಲ, ಕೆಲವೊಮ್ಮೆ ಮಕ್ಕಳಿಗೆ ಸಿಹಿ ತಿನ್ನಲು ಅನಿಸಿದಾಗ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ಸಿಹಿಯೆಂದರೆ ಅದು ಪಾಯಸ. ಇಲ್ಲಿ ನಾವು ಬಾಳೆಹಣ್ಣಿನ ಪಾಯಸ ರೆಸಿಪಿ ನೀಡಿದ್ದೇವೆ.

ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಅಧಿಕವಿರುವುದರಿಂದ ಈ ಪಾಯಸ ಮಕ್ಕಳ ದೇಹಕ್ಕೆ ಅಗ್ಯತವಾದ ಪೋಷಕಾಂಶ ನೀಡುತ್ತದೆ. ಇದರಲ್ಲಿ ತೆಂಗಿನ ಹಾಲು, ಬೆಲ್ಲ, ತುಪ್ಪ ಈ ರೀತಿಯ ಪೋಷಕಾಂಶಗಳುಳ್ಳ ವಸ್ತುಗಳನ್ನೇ ಬಳಸಿರುವುದರಿಂದ ರುಚಿಯ ಜೊತೆಗೆ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಬನ್ನಿ ಈ ಪಾಯಸ ಮಾಡುವುದು ಹೇಗೆ ಎಂದು ನೋಡೋಣ:
Recipe By: Reena T.K
Recipe Type: Sweet
Serves: 4
-
ಬೇಕಾಗುವ ಸಾಮಗ್ರಿ
ಬಾಳೆಹಣ್ಣು 1ಕೆಜಿ
ಬೆಲ್ಲ 1 ಕಪ್
ತೆಂಗಿನಕಾಯಿ 1 ಕಪ್
ತುಪ್ಪ 3 ಚಮಚ
ಏಲಕ್ಕಿ 1-2
ಸ್ವಲ್ಪ ಗೋಡಂಬಿ
ಸ್ವಲ್ಪ ದ್ರಾಕ್ಷಿ
-
ಮಾಡುವ ವಿಧಾನ:
* ಮೊದಲಿಗೆ ಬಾಳೆಹಣ್ಣನ್ನು ಪ್ರೆಶರ್ ಕುಕ್ಕರ್ನಲ್ಲಿ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಬೇಕು.
* ಬಾಳೆಹಣ್ಣಿನ ಒಳಗಡೆ ಇರುವ ಕಪ್ಪು ಬೀಜದ ನೂಲನ್ನು ತೆಗೆಯಬೇಕು, ನಂತರ ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
* ಈಗ ತೆಂಗಿನಕಾಯಿ ತುರಿದು ಅದರಿಂದ ಒಂದು ಕಪ್ ಹಾಲು ತೆಗೆಯಿರಿ. ಮೊದಲಿಗೆ ಗಟ್ಟಿ ಹಾಲು ತೆಗೆದಿಡಿ. ತೆಂಗಿನಕಾಯಿ ಮತ್ತೊಮ್ಮೆ ರುಬ್ಬಿದಾಗ ತೆಳು ಹಾಲು ಬರುತ್ತದೆ, ಅದನ್ನು ಪ್ರತ್ಯೇಕವಾಗಿ ತೆಗೆದಿಡಿ.
* ಸ್ವಲ್ಪ ನೀರಿಗೆ ಬೆಲ್ಲ ಹಾಕಿ, ಪಾಕ ಮಾಡಿ ತೆಗೆದಿಡಿ
* ಈಗ ದಪ್ಪ ತಳವಿರುವ ಪಾತ್ರೆಯನ್ನು ಬಿಸಿ ಮಾಡಿ (ಹುರುಳಿ ಪಾತ್ರೆ ಆದರೆ ಒಳ್ಳೆಯದು)
* ಪಾತ್ರೆ ಬಿಸಿಯಾದ ಬಳಿಕ ಅದಕ್ಕೆ ತೆಳು ತೆಂಗಿನಕಾಯಿ ಹಾಲು ಹಾಕಿ ಕುದಿಸಿ. ಒಂದು ಲೋಟ ಹಾಲು ಹಾಕಿದ್ದರೆ ಅದು ಅರ್ಧ ಲೋಟ ಆಗುವಷ್ಟು ಕುದಿಸಿ.
* ಅದಕ್ಕೆ ರುಬ್ಬಿದ ಬಾಳೆ ಹಣ್ಣು ಹಾಕಿ.
* ಈಗ ಗಟ್ಟಿ ಹಾಲಿಗೆ ಏಲಕ್ಕಿ ಪುಡಿ ಹಾಕಿ ಮಿಶ್ರ ಮಾಡಿ ಅದನ್ನು ಹುರುಳಿಗೆ ಹಾಕಿ, ಇದನ್ನು ಕುದಿಯಲು ಬಿಡಬೇಡಿ, ಸ್ಟೌವ್ ಉರಿ ಕಡಿಮೆ ಮಾಡಿ.
* ಈಗ ತುಪ್ಪದಲ್ಲಿ ಗೋಡಂಬಿ, ದ್ರಾಕ್ಷಿ ಹುರಿದು ಪಾಯಸಕ್ಕೆ ಹಾಕಿ ಮಿಕ್ಸ್ ಮಾಡಿ ಬಾಳೆಹಣ್ಣಿನ ಪಾಯಸ ರೆಡಿ.
ನಿಮಗೆ ಪಾಯಸ ಸ್ವಲ್ಪ ತೆಳುವಾಗಿ ಬೇಕಿದ್ದರೆ ಹಾಲನ್ನು ಕೂಡ ಸೇರಿಸಬಹುದು.
- ಸೂಚನೆ: * ಇದು ಕೇರಳ ಸ್ಟೈಲ್ ರೆಸಿಪಿಯಾಗಿದೆ * ಮನೆಯಲ್ಲಿ ಬಾಳೆಹಣ್ಣುತುಂಬಾ ಹಣ್ಣಾಗಿದ್ದರೆ ಈ ರೀತಿ ಪಾಯಸ ಮಾಡಿ ಸವಿಯಿರಿ. * ಸಿಹಿ ನಿಮ್ಮ ಟೇಸ್ಟ್ಗೆ ತಕ್ಕಂತೆ ಬಳಸಿ, ಬಾಳೆಹಣ್ಣು ಸಿಹಿ ಇರುವುದರಿಂದ ಹೆಚ್ಚಿನ ಸಿಹಿ ಬೇಕಾಗಿಲ್ಲ.
- ಸರ್ವ್ - 1 ಗ್ಲಾಸ್
- ಕ್ಯಾಲೋರಿ - 438ಕ್ಯಾ
- ಕೊಬ್ಬು - 19.76ಗ್ರಾಂ
- ಪ್ರೊಟೀನ್ - 3.44ಗ್ರಾಂ
- ಕಾರ್ಬ್ಸ್ - 61.73ಗ್ರಾಂ



Click it and Unblock the Notifications
