For Quick Alerts
ALLOW NOTIFICATIONS  
For Daily Alerts

ಅಕ್ಕಿ ಪಾಯಸ ರೆಸಿಪಿ

Posted By: Divya Pandit
|

ದಕ್ಷಿಣ ಭಾರತದಲ್ಲಿ ಅಕ್ಕಿ ಪಾಯಸ (ಚಾವಲ್ ಕಿ ಖೀರ್) ಬಹಳ ಪ್ರಸಿದ್ಧಿ ಪಡೆದ ಸಿಹಿ ತಿಂಡಿ. ಹೆಚ್ಚು ಮಾನ್ಯತೆ ಪಡೆದ ಈ ಸಿಹಿ ತಿಂಡಿಯನ್ನು ಕೆನೆ ಭರಿತವಾದ ಹಾಲು, ಅಕ್ಕಿ ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ. ಅಲ್ಲದೆ ಇದಕ್ಕೆ ಹಾಕುವ ಕೆಲವು ಮೇಲೋಗರ(ಅಲಂಕಾರಿ ಪದಾರ್ಥ)ಗಳು ಇದರ ಪರಿಮಳವನ್ನು ಹೆಚ್ಚಿಸುತ್ತವೆ.

ದಕ್ಷಿಣ ಭಾರತದಲ್ಲಿ ಉತ್ಸವ, ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ಈ ಸಿಹಿಯನ್ನು ತಯಾರಿಸುತ್ತಾರೆ. ದಕ್ಷಿಣ ಭಾರತದ ಥಾಲಿ ಊಟ(ತಟ್ಟೆ ಊಟ)ದಲ್ಲಿ ಇದೊಂದು ವಿಶೇಷವಾದ ಸಿಹಿ ತಿಂಡಿ. ಉತ್ತರ ಭಾರತದಲ್ಲಿ ತೇಜೆಯ ಹಬ್ಬದ ಸಂದರ್ಭದಲ್ಲಿ ಈ ಸಿಹಿಯನ್ನು ಮಾಡುತ್ತಾರೆ. ಇದು ಹಬ್ಬಕ್ಕೆ ಹೆಚ್ಚು ಪ್ರಶಸ್ತವಾದದ್ದು ಎಂದು ಪರಿಗಣಿಸಲಾಗಿದೆ. ಚಿಕ್ಕವರು ಮತ್ತು ವಯಸ್ಕರೆಲ್ಲರೂ ಇಷ್ಟ ಪಡುವ ಈ ಸಿಹಿ ತಿಂಡಿ ಬಾಯಿ ಚಪ್ಪರಿಸುವಂತೆ ಮಾಡುತ್ತದೆ.

ಈ ಸಿಹಿ ಪಾಕವಿಧಾನ ಬಹಳ ಸರಳ ಹಾಗೂ ಸುಲಭವಾದದ್ದು. ಹಬ್ಬಗಳ ಗಡಿ-ಬಿಡಿ ಸಮಯದಲ್ಲಿ ಹಾಗೂ ಅಚಾನಕ್ ಬಂಧುಗಳ ಆಗಮನವಾದರೆ ಬಹುಬೇಗ ಈ ತಿಂಡಿಯನ್ನು ತಯಾರಿಸಬಹುದು. ನಿಮಗೂ ಇದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯಿದ್ದರೆ ಮುಂದೆ ನೋಡಿ... ವಿವರವಾದ ಮಾಹಿತಿಯೊಂದಿಗೆ ಹಂತ ಹಂತವಾಗಿ ಹೇಳಲಾಗಿದೆ.

ಅಕ್ಕಿ ಪಾಯಸ ರೆಸಿಪಿ

ಅಕ್ಕಿ ಪಾಯಸ
Akki Payasa | Rice Kheer Recipe: How To Make Chawal Ki Kheer
akki payasa | rice kheer recipe: how to make chawal ki kheer
Prep Time
30 Mins
Cook Time
20M
Total Time
50 Mins

Recipe By: ಮೀನಾ ಭಂಡಾರಿ

Recipe Type: ಸಿಹಿ ತಿಂಡಿ

Serves: ನಾಲ್ಕು ಮಂದಿ

Ingredients
  • 1.ಕೆನೆ ಭರಿತ/ಗಟ್ಟಿ ಹಾಲು - 1 ಲೀಟರ್

    2.ನೆನೆಸಿಕೊಂಡ ಬಾಸುಮತಿ ಅಕ್ಕಿ -1/4 ಸಣ್ಣ ಬಟ್ಟಲು(ಬೌಲ್)

    3. ಸಕ್ಕರೆ -7 ಚಮಚ

    4. ಏಲಕ್ಕಿ ಪುಡಿ - 1 ಚಮಚ

    5.ಹೆಚ್ಚಿಕೊಂಡ ಬಾದಾಮಿ -2 ಚಮಚ

    6. ಗುಲಾಬಿ ನೀರಿನಲ್ಲಿ ನೆನೆಸಿಕೊಂಡ ಕೇಸರಿ - 5-6 ಕೇಸರಿ ಎಳೆಗಳು ಒಂದು ಚಮಚ ಗುಲಾಬಿ ನೀರು

Red Rice Kanda Poha
How to Prepare
  • 1. ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಕುದಿಯಲು ಇಡಿ.

    2. ಹಾಲು ಕುದಿಯಲು ಆರಂಭಿಸಿದ ಮೇಲೆ, ನೆನೆಸಿಕೊಂಡ ಅಕ್ಕಿಯನ್ನು ಸೇರಿಸಿ. ಚೆನ್ನಾಗಿ ಕಲುಕುತ್ತಿರಿ.

    3. ಬೇಯುತ್ತಾ ಬಂದಂತೆ ಉರಿಯನ್ನು ಸ್ವಲ್ಪ ಕಡಿಮೆ ಮಾಡಿ. ಹೀಗೆ ಮಾಡುವುದರಿಂದ ಅಕ್ಕಿ ತಳ ಹಿಡಿಯುವುದನ್ನು ತಡೆಯಬಹುದು.

    4. ಹಾಲಿನ ಪ್ರಮಾಣ ಕಡಿಮೆಯಾಗುತ್ತ ಬಂದ ನಂತರ ಸಕ್ಕರೆಯನ್ನು ಸೇರಿಸಿ. ಹಾಗೇ ಎರಡು ನಿಮಿಷ ಕುದಿಯಲು ಬಿಡಿ.

    5. ಈಗ ಏಲಕ್ಕಿ ಪುಡಿ, ಹೆಚ್ಚಿಕೊಂಡ ಬಾದಾಮಿ ಮತ್ತು ನೆನೆಸಿಕೊಂಡ ಕೇಸರಿ ಎಳೆಗಳನ್ನು ಸೇರಿಸಿ.

    6. ಅಕ್ಕಿ ಸಂಪೂರ್ಣವಾಗಿ ಬೆಂದಿದೆ ಅಥವಾ ಪಾಯಸ ತಯಾರಾಗಿದೆ ಎಂದ ತಕ್ಷಣ ಪಾತ್ರೆಯನ್ನು ಉರಿಯಿಂದ ಕೆಳಗಿಳಿಸಿ.

Instructions
  • ಹಾಲು ಕುದಿಯುತ್ತಾ, ಕಡಿಮೆಯಾಗುತ್ತಿದ್ದ ಹಾಗೆ, ಅಕ್ಕಿ ಸರಿಯಾಗಿ ಬೆಂದಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ
  • ಖೀರ್ ದಪ್ಪವಾಗುತ್ತಾ ಬಂದ ಹಾಗೆ, ಸಕ್ಕರೆಯನ್ನು ಹಾಲಿಗೆ ಸೇರಿಸಿಕೊಳ್ಳಬೇಕು
  • ಒಂದು ವೇಳೆ, ಸಕ್ಕೆರೆಯ ರುಚಿ ನಿಮಗೆ ಇಷ್ಟವಾಗದಿದ್ದಲ್ಲಿ, ಅದರ ಬದಲಿಗೆ ಬೆಲ್ಲವನ್ನೂ ಬಳಸಬಹುದು
  • ಅನ್ನ ಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದರಿಂದ, ಬೇಯಿಸಿದ ಅನ್ನವನ್ನೂ ಕೂಡ ನೀವು ಬಳಸಬಹುದು
Nutritional Information
  • ಬಡಿಸುವ ಪ್ರಮಾಣ - 1 ಸಣ್ಣ ಬಟ್ಟಲು
  • ಕ್ಯಾಲೋರಿ - 185
  • ಕೊಬ್ಬು - 7.2 ಗ್ರಾಂ
  • ಪ್ರೋಟೀನ್ - 4.3 ಗ್ರಾಂ
  • ಕಾರ್ಬೋಹೈಡ್ರೇಟ್ - 26.5 ಗ್ರಾಂ
  • ಸಕ್ಕರೆ - 18 ಗ್ರಾಂ
  • ನಾರಿನಂಶ - 0.8 ಗ್ರಾಂ

1.ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಕುದಿಯಲು ಇಡಿ.

ಅಕ್ಕಿ ಪಾಯಸ

2. ಹಾಲು ಕುದಿಯಲು ಆರಂಭಿಸಿದ ಮೇಲೆ, ನೆನೆಸಿಕೊಂಡ ಅಕ್ಕಿಯನ್ನು ಸೇರಿಸಿ. ಚೆನ್ನಾಗಿ ಕಲುಕುತ್ತಿರಿ.

ಅಕ್ಕಿ ಪಾಯಸ
ಅಕ್ಕಿ ಪಾಯಸ

3. ಬೇಯುತ್ತಾ ಬಂದಂತೆ ಉರಿಯನ್ನು ಸ್ವಲ್ಪ ಕಡಿಮೆ ಮಾಡಿ. ಹೀಗೆ ಮಾಡುವುದರಿಂದ ಅಕ್ಕಿ ತಳ ಹಿಡಿಯುವುದನ್ನು ತಡೆಯಬಹುದು.

ಅಕ್ಕಿ ಪಾಯಸ
ಅಕ್ಕಿ ಪಾಯಸ
ಅಕ್ಕಿ ಪಾಯಸ

4. ಹಾಲಿನ ಪ್ರಮಾಣ ಕಡಿಮೆಯಾಗುತ್ತ ಬಂದ ನಂತರ ಸಕ್ಕರೆಯನ್ನು ಸೇರಿಸಿ. ಹಾಗೇ ಎರಡು ನಿಮಿಷ ಕುದಿಯಲು ಬಿಡಿ.

ಅಕ್ಕಿ ಪಾಯಸ
ಅಕ್ಕಿ ಪಾಯಸ

5. ಈಗ ಏಲಕ್ಕಿ ಪುಡಿ, ಹೆಚ್ಚಿಕೊಂಡ ಬಾದಾಮಿ ಮತ್ತು ನೆನೆಸಿಕೊಂಡ ಕೇಸರಿ ಎಳೆಗಳನ್ನು ಸೇರಿಸಿ.

ಅಕ್ಕಿ ಪಾಯಸ
ಅಕ್ಕಿ ಪಾಯಸ
ಅಕ್ಕಿ ಪಾಯಸ

6. ಅಕ್ಕಿ ಸಂಪೂರ್ಣವಾಗಿ ಬೆಂದಿದೆ ಅಥವಾ ಪಾಯಸ ತಯಾರಾಗಿದೆ ಎಂದ ತಕ್ಷಣ ಪಾತ್ರೆಯನ್ನು ಉರಿಯಿಂದ ಕೆಳಗಿಳಿಸಿ.

ಅಕ್ಕಿ ಪಾಯಸ
ಅಕ್ಕಿ ಪಾಯಸ
[ 4 of 5 - 56 Users]
X
Desktop Bottom Promotion