Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಕ್ರಿಸ್ಮಸ್ ಸ್ಪೆಷಲ್: ಬಾಯಲ್ಲಿ ನೀರೂರಿಸುವ ಪ್ಯಾನ್ ಕೇಕ್
ಕ್ರಿಸ್ಮಸ್ ಇನ್ನೇನು ಬಂದೇ ಬಿಟ್ಟಿದೆ. ಕ್ರಿಸ್ಮಸ್ ಎಂದಾಗ ನೆನೆಪಾಗುವುದೇ ಚುಮು ಚುಮು ಚಳಿ ಹಾಗೂ ಬಾಯಲ್ಲಿ ನೀರೂರಿಸುವ ಪೆಸ್ಟ್ರಿ, ಚಾಕಲೇಟ್, ಕೇಕ್ಗಳು. ಕ್ರಿಸ್ಮಸ್ನ ಬೆಳಗ್ಗಿನ ಉಪಹಾರಕ್ಕೆ ಪ್ರತ್ಯೇಕ ರುಚಿಯನ್ನು ತರುವುದಕ್ಕಾಗಿಯೇ ನಾವಿಂದಿನ ಲೇಖನದಲ್ಲಿ ಒಂದು ವಿಶೇಷ ಖಾದ್ಯವನ್ನು ನಿಮ್ಮ ಮುಂದೆ ಪ್ರಸ್ತುಪಡಿಸುತ್ತಿದ್ದೇವೆ. ಹಬ್ಬದ ಆಚರಣೆಗೆ ಮನೆಗೆ ಬಂದ ಅತಿಥಿಗಳಿಗೂ ಇದು ಉತ್ತಮ ಸತ್ಕಾರವೆನಿಸಲಿದೆ ಮತ್ತು ನಿಮ್ಮ ಮನೆಮಂದಿ ಕೂಡ ಇದನ್ನು ಇಷ್ಟಪಟ್ಟು ಸೇವಿಸಿ ನಿಮ್ಮ ಕೈಯಡುಗೆಯನ್ನು ಮನಸಾರೆ ಕೊಂಡಾಡುವುದು ಖಚಿತ.
ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವ ವಿಶೇಷ ಖಾದ್ಯ ಪ್ಯಾನ್ ಕೇಕ್ ಆಗಿದೆ. ಕೊಕಾ ಪೌಡರ್, ಸಕ್ಕರೆ, ಮಜ್ಜಿಗೆ, ಮತ್ತು ಆಹಾರ ಕಲರಿಂಗ್ ಅನ್ನು ಬಳಸಿಕೊಂಡು ಈ ಪ್ಯಾನ್ ಕೇಕ್ ತಯಾರಿಸಬಹುದಾಗಿದೆ. ನಿಮ್ಮ ಬ್ರಂಚ್ ಇಲ್ಲವೇ ಉಪಹಾರ ಸಮಯಕ್ಕೆ ಇದು ಸೂಕ್ತವಾಗಿದೆ. ಗುರ್ಗಾವ್ನ ಅಡುಗೆಯವರಾದ ಅನಿಲ್ ಧಹಿಯಾ ಈ ವಿಶೇಷ ಕೇಕ್ ರೆಸಿಪಿಯನ್ನು ನಿಮ್ಮ ಮುಂದೆ ತರುತ್ತಿದ್ದಾರೆ.

Recipe By: ಅನಿಲ್ ದಾಹಿಯಾ
Recipe Type: ಡೆಸರ್ಟ್
Serves: 10
-
ಸಾಮಾಗ್ರಿಗಳು
ಮೈದಾ - 10 ಕಪ್ಗಳು
ಸಕ್ಕರೆ - 1/4 ಕಪ್
ಕೊಕಾ ಪೌಡರ್ - 2/3 ಕಪ್
ಬೇಕಿಂಗ್ ಸೋಡಾ - 6 ಚಮಚ
ಬೇಕಿಂಗ್ ಪೌಡರ್ - 4 ಚಮಚ
ಉಪ್ಪು - 5 ಚಮಚ
ಮಜ್ಜಿಗೆ - 2 ಕಪ್
ಮೊಟ್ಟೆ - 2
ರೆಡ್ ಫುಟ್ ಕಲರಿಂಗ್ - 2 ಚಮಚ
ಬೆಣ್ಣೆ ಮತ್ತು ಮ್ಯಾಪಲ್ ಸಿರಪ್ - 1 ಚಮಚ
-
ಸಿದ್ಧಪಡಿಸುವುದು ಹೇಗೆ
1. ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಮೈದಾ ಹುಡಿ ಮತ್ತು ಸಕ್ಕರೆಯನ್ನು ಹಾಕಿ.
2. ಪಾತ್ರೆಯಲ್ಲಿ ಇವೆರಡನ್ನೂ ಮಿಶ್ರ ಮಾಡಿಕೊಳ್ಳಿ
3.ಕೊಕೊ ಪೌಡರ್, ಬೇಕಿಂಗ್ ಸೋಡಾವನ್ನು ಹಾಕಿ
4.ಅವನ್ನು ಮಿಶ್ರ ಮಾಡಿ
5.ಅದಕ್ಕೆ ಉಪ್ಪು ಸೇರಿಸಿ
6.ಬೌಲ್ನಲ್ಲಿ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ
7.ಐದರ ಸಂಖ್ಯೆಯಲ್ಲಿ ಪ್ಲಾಸ್ಟಿಕ್ ಬ್ಯಾಗ್ ಅಥವಾ ಕಂಟೇನರ್ಗಳಲ್ಲಿ ಇದನ್ನು ಭರ್ತಿ ಮಾಡಿ
8. 2 ಕಪ್ಗಳ ಮಿಶ್ರಣವನ್ನು ಪ್ಲಾಸ್ಟಿಕ್ ಬ್ಯಾಗ್ಸ್ ಅಥವಾ ಕಂಟೇನರ್ಗಳಲ್ಲಿ ತುಂಬಿ
9. ಈಗ, ತಣ್ಣನೆಯ ಮತ್ತು ಒಣ ಸ್ಥಳದಲ್ಲಿ ಒಣಗಿಸಿ.
ಪ್ಯಾನ್ಕೇಕ್ ಸಿದ್ಧಪಡಿಸಲು
1. ಒಂದು ತಾಜಾ ದೊಡ್ಡ ಬೌಲ್ ತೆಗೆದುಕೊಳ್ಳಿ
2.ಈ ಪಾತ್ರೆಗೆ ಮಿಶ್ರ ಮಾಡಿದ ಸಾಮಾಗ್ರಿಗಳನ್ನು ಹಾಕಿ
3.ಸಣ್ಣ ಪಾತ್ರೆಯನ್ನು ತೆಗೆದುಕೊಳ್ಳಿ
4.ಇದಕ್ಕೆ ಮಜ್ಜಿಗೆ ಮತ್ತು ಮೊಟ್ಟೆಯನ್ನು ಹಾಕಿ
5.ಬೌಲ್ನಲ್ಲಿ ಮಜ್ಜಿಗೆ ಮತ್ತು ಮೊಟ್ಟೆಯನ್ನು ವಿಸ್ಕ್ ಮಾಡಿ
6.ಇದಕ್ಕೆ ಫುಡ್ ಕಲರ್ ಸೇರಿಸಿ
7.ಈಗ ಎಲ್ಲವನ್ನೂ ಮಿಶ್ರ ಮಾಡಿ
8.ಮಿಶ್ರಣಕ್ಕೆ ಒಣ ಸಾಮಾಗ್ರಿಗಳನ್ನು ಹಾಕಿ
9.ಇದು ಮಾಯಿಶ್ಚ್ ಆಗುವವರೆಗೆ ಕಲಸುತ್ತಿರಿ
10.ಗ್ರಿಡ್ಡಲ್ ತೆಗೆದುಕೊಂಡು ಇದು ಬಿಸಿಯಾಗುವವರೆಗೆ ಕಾಯಿಸಿ
11.ಬೆಣ್ಣೆ ಬಳಸಿಕೊಂಡು ಗ್ರಿಡ್ಡಲ್ಗೆ ಸವರಿ
12.ಬೆಣ್ಣೆ ಸವರಿದ ಬಿಸಿ ಗ್ರಿಡ್ಡಲ್ಗೆ ಮಿಶ್ರಣವನ್ನು 1/4 ಕಪ್ನಂತೆ ಹಾಕಿ
13.ಮೇಲ್ಭಾಗದಲ್ಲಿ ಉಬ್ಬಿದಾಗ ತಿರುಗಿಸಿ
14.ಇನ್ನೊಂದು ಬದಿ ಚಿನ್ನದ ಬಣ್ಣಕ್ಕೆ ಬರುವವರೆಗೆ ಬೇಯಿಸಿ
15.ಇದು ಪೂರ್ಣವಾಗಿ ಬೆಂದಾಗ, ಪ್ಯಾನ್ ಕೇಕ್ ಅನ್ನು ಹೊರತೆಗೆದು ಸರ್ವಿಂಗ್ ಪ್ಲೇಟ್ಗೆ ಹಾಕಿ.
16.ಬೆಣ್ಣೆ ಮತ್ತು ಸಿರಪ್ ಬಳಸಿಕೊಂಡು ಕೇಕ್ಗೆ ಸವರಿ
17.ಬಿಸಿಯಾಗಿ ಬಡಿಸಿ
- ಡೆಸರ್ಟ್ನಂತೆ ಬಡಿಸುವಾಗ ರೆಡ್ ವೆಲ್ವೇಟ್ ಕೇಕ್ ಅನ್ನು ಬೇಕ್ ಮಾಡಿ
- ಬಡಿಸುವ ಗಾತ್ರ - 170 ಗ್ರಾಮ್
- ಕ್ಯಾಲೊರಿಗಳು - 597 ಕ್ಯಾಲ್
- ಫ್ಯಾಟ್ - 25 ಗ್ರಾಮ್
- ಪ್ರೊಟೀನ್ - 13 ಗ್ರಾಮ್
- ಕಾರ್ಬೊಹೈಡ್ರೇಟ್ಸ್ - 80 ಗ್ರಾಮ್



Click it and Unblock the Notifications