Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬೇಸಿಗೆಯಲ್ಲಿ ಇಡ್ಲಿ, ದೋಸೆಯ ಹಿಟ್ಟು ಹುಳಿ ಬಂದರೆ ಹುಳಿ ಕಡಿಮೆಯಾಗಲು ಏನು ಮಾಡಬೇಕು?
ದೋಸೆ, ಇಟ್ಲಿ ರುಚಿಯಾಗಿರಬೇಕೆಂದರೆ ಅದರ ಹಿಟ್ಟು ಹದವಾಗಿರಬೇಕು, ಚೆನ್ನಾಗಿ ಉಬ್ಬಿ ಬರಬೇಕು, ಹೆಚ್ಚು ಹುಳಿಯೂ ಇರಬಾರದು. ಆದರೆ ಬೇಸಿಗೆಯಲ್ಲಿ ಇಡ್ಲಿ ಅಥವಾ ದೋಸೆಗೆ ರುಬ್ಬಿಟ್ಟರೆ ಹಿಟ್ಟು ಉಬ್ಬುವುದು ಆದರೆ ಹುಳಿ ಅಧಿಕವಿರುತ್ತದೆ. ಇದರಲ್ಲಿ ದೋಸೆ, ಇಡ್ಲಿ ಮಾಡಿದರೆ ಚೆನ್ನಾಗಿರಲ್ಲ.
ದೋಸೆ, ಇಟ್ಲಿ ಹುಳಿ ರುಚಿಯಲ್ಲಿದ್ದರೆ ತಿನ್ನಲು ಇಷ್ಟವಾಗುವುದು. ಆದ್ದರಿಂದ ಹುಳಿ ಮತ್ತು ದೋಸೆಯ ಹಿಟ್ಟು ಹೆಚ್ಚು ಹುಳಿ ಬರುವುದನ್ನು ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ:

ಹಿಟ್ಟನ್ನು ರುಬ್ಬುವ ಮುನ್ನ ನೀರಿನಂಶ ಸೋಸಿ
ನಾವು ಅಕ್ಕಿ ತೊಳೆದು ನೆನೆ ಹಾಕಿ ಅಕ್ಕಿಯನ್ನು ರುಬ್ಬುವಾಗ ಅದೇ ನೀರು
ಸೇರಿಸುವುದುಂಟು, ಆ ರೀತಿ ಮಾಡಬೇಡಿ, ಬದಲಿಗೆ ಆ ನೀರನ್ನು ಸಂಪೂರ್ಣ ಸೋಸಿ ಬೇರೆ
ನೀರು ಸೇರಿಸಿ ರುಬ್ಬಿ.ಇನ್ನು ರುಬ್ಬಿದ ಹಿಟ್ಟು ಮಿಕ್ಸ್ ಮಾಡುವ ಮುನ್ನ ನೀರಿನಂಶ
ಮೇಲ್ಭಾಗದಲ್ಲಿದ್ದರೆ ಆ ನೀರಿನಂಶ ತೆಗೆಯಿರಿ.
ಹಿಟ್ಟಿಗೆ ಚಿಟಿಕೆಯಷ್ಟು ಸಕ್ಕರೆ ಸೇರಿಸಿ
ನೀವು ಹಿಟ್ಟು ರುಬ್ಬಿದ ಮೇಲೆ ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿದಾಗ ಹಿಟ್ಟು
ಹುಳಿಯಾಗುವುದನ್ನು ತಡೆಗಟ್ಟಬಹುದು. ಅಲ್ಲದೆ ಇಡ್ಲಿ, ದೋಸೆಯ ರುಚಿ ಕೂಡ
ಚೆನ್ನಾಗಿರುತ್ತದೆ. ಸಿಹಿ ರುಚಿಯ ಇಡ್ಲಿ ದೋಸೆ ತಿನ್ನಲು ಚೆನ್ನಾಗಿರಲಿದೆ.
ಹಿಟ್ಟಿಗೆ ಸ್ವಲ್ಪ ಅಕ್ಕಿಹುಡಿ ಸೇರಿಸಿ
ಹುದುಗು ಬರಿಸಿದ ಹಿಟ್ಟು ಹುಳಿ ಬಂದಿದ್ದರೆ ಅದಕ್ಕೆ ಸ್ವಲ್ಪ ಹಿಟ್ಟು ಸೇರಿಸಿ
ಮಿಕ್ಸ್ ಮಾಡಿದರೆ ರುಚಿ ಚೆನ್ನಾಗಿರುತ್ತದೆ, ದೋಸೆ ಗರಿಗರಿ ಬರುತ್ತೆ, ಇಡ್ಲಿಗೆ
ಇದು ಸೂಟ್ ಆಗಲ್ಲ. ದೋಸೆಗೆ ಆದರೆ ನೀವು ಈ ರೀತಿ ಮಾಡಿ.
ದೋಸೆಗೆ ರುಬ್ಬಿದ ಹಿಟ್ಟು ಹುಳಿಯಾದರೆ
ದೋಸೆಗೆ ರುಬ್ಬಿಟ್ಟ ಹಿಟ್ಟು ಹುಳಿಯಾದರೆ ಅದರಿಂದ ಇಡ್ಲಿ ಮಾಡಿ, ದೋಸೆಗಿಂತ ಇಡ್ಲಿ
ಸ್ವಲ್ಪ ಹುಳಿ ಬೇಕು. ಇಡ್ಲಿಗೆ ಮಸಾಲೆ ಸೇರಿಸಿದರೆ ರುಚಿ ಚೆನ್ನಾಗಿ ಬರುತ್ತದೆ.
ಮಸಾಲೆ ಇಡ್ಲಿ ಅಥವಾ ಒಗ್ಗರಣೆ ಇಡ್ಲಿ ಮಾಡಿ.
ಹಿಟ್ಟು ಹುಳಿಯಾಗುದ್ದರೆ ಸಾದಾ ದೋಸೆ ಮಾಡಬೇಡಿ
ಅದೇ ಹಿಟ್ಟು ಬಲಸಿ ಮಸಾಲೆ ದೋಸೆ ಮಾಡಿ, ಅದಕ್ಕೆ ಬೆಣ್ಣೆ ಅಥವಾ ತುಪ್ಪ ಹಾಕಿ, ಖಾರ
ಚಟ್ನಿ ಸವರಿ, ಆಲೂ ಬಾಜಿ ಹಾಕಿ ಸರ್ವ್ ಮಾಡಿ. ಆವಾಗ ಹುಳಿ ಗೊತ್ತಾಗುವುದಿಲ್ಲ,
ರುಚಿ ತುಂಬಾ ಚೆನ್ನಾಗಿರುತ್ತದೆ.
ಇನ್ನು ಹುಟ್ಟು ಹುಳಿಯಾದರೆ ಉತ್ತಪ್ಪ ಮಾಡುವುದು ಒಳ್ಳೆಯದು, ರುಚಿ ತುಂಬಾ ಚೆನ್ನಾಗಿರುತ್ತದೆ. ಇದಕ್ಕೆ ಗ್ರೇವಿ ಕರಿಯಿದ್ದರೆ ಟೇಸ್ಟ್ ಸೂಪರ್ ಆಗಿರುತ್ತದೆ.
ಬೇಸಿಗೆಯಲ್ಲಿ ದೋಸೆಗೆ ಇಡ್ಲಿಗೆ ಹಿಟ್ಟು ತಯಾರಿಸುವಾಗ ಈ ಅಂಶ
ಗಮನಿಸಿ
ರುಬ್ಬಿದ ಹಿಟ್ಟನ್ನು ಬಿಸಿ ಇರುವ ಕಡೆ ಇಡಬೇಡಿ ಅಂದರೆ ಒಲೆ ಹತ್ರ, ಬಿಸಿ ಇರುವ
ಗ್ಯಾಸ್ ಬಳಿ ಇಡಬೇಡಿ.
ತುಂಬಾ ಉದ್ದು ಬಳಸಬೇಡಿ
ಹೆಚ್ಚು ಉದ್ದು ಹಾಕಬೇಡಿ, ಉದ್ದು ಹೆಚ್ಚಾದರೆ ಹಿಟ್ಟು ಹುಳಿ ಬರುತ್ತದೆ.
ಆದ್ದರಿಂದ 2 ಲೋಟ ಅಕ್ಕಿ ಹಾಕಿದರೆ ಅರ್ಧ ಲೋಟಕ್ಕಿಂತ ಸ್ವಲ್ಪ ಕಮ್ಮಿ ಉದ್ದು
ಹಾಕಿ, ಮಳೆಗಾಲ, ಚಳಿಗಾಲದಲ್ಲಿ ಉದ್ದು ಸಮ ಪ್ರಮಾಣದಲ್ಲಿ ಹಾಕಬೇಕು.
ಹುದುಗು ಬರಿಸಲು ತುಂಬಾ ಹೊತ್ತು ಇಡಬೇಡಿ
ಬೇಸಿಗೆಯಲ್ಲಿ ಹಿಟ್ಟು ಬೇಗನೆ ಹುದುಗು ಬರುತ್ತದೆ, ಆದ್ದರಿಂದ 5-6 ಗಂಟೆ ಹೊರಗಡೆ
ಇಟ್ಟ ಬಳಿಕ ಹಿಟ್ಟು ಫ್ರಿಡ್ಜ್ನಲ್ಲಿ ಇಡಿ. ಇಲ್ಲದಿದ್ದರೆ ಹುಳಿ
ಬರಲಾರಂಭಿಸುತ್ತದೆ. ಅದ್ದರಿಂದ ನೀವು ಸಂಜೆ ಬೇಗನೆ ರುಬ್ಬಿ ಇಡಬೇಡಿ, ಸಂಜೆ
ರುಬ್ಬಿದರೆ ರಾತ್ರಿ 11 ಗಂಟೆಗೆ ಫ್ರಿಡ್ಜ್ ಒಳಗಡೆ ಇಡಿ. ರಾತ್ರಿ ರುಬ್ಬಿದರೆ
ಬೆಳಗ್ಗೆ ಬೇಗನೆ ಫ್ರಿಡ್ಜ್ನಲ್ಲಿ ಇಡಬೇಕು.



Click it and Unblock the Notifications
