Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ಶೀರಾ ತುಂಬಾ ರುಚಿಯಾಗಿರಬೇಕೆಂದರೆ ಶೀರಾ ಹೀಗೆ ಮಾಡಬೇಕು, ಬಾಯಲ್ಲಿಟ್ಟರೆ ಸಾಕು ಕರಗುತ್ತೆ
ಶೀರಾ ದೇವರಿಗೆ ಇಡುವ ನೈವೇದ್ಯದಿಮದ ಹಿಡಿದು ಹಬ್ಬದ ಅಡುಗೆ, ಫಂಕ್ಷನ್ ಅಡುಗೆಯಲ್ಲಿ ಇರುವಂಥ ಸಿಹಿ ತಿನಿಸು. ಶೀರಾ ಎಲ್ಲರಿಗೂ ಬರಬಹುದು, ಆದರೆ ಪರ್ಫೆಕ್ಟ್ ರುಚಿಯ ಶೀರಾ ಕೆಲವರಿಗಷ್ಟೇ ಮಾಡಲು ಗೊತ್ತಿರುತ್ತದೆ. ಶೀರಾ ಉಪ್ಪಿಟ್ಟು ರೀತಿ ಇದ್ದರೆ ಇಷ್ಟವಾಗಲ್ಲ, ಶೀರಾ ಬಾಯಿಗೆ ಇಟ್ಟಾಗ ಮೈಸೂರು ಪಾಕ್ ಕರಗುವಂತೆ ಕರಗಬೇಕು, ಅಷ್ಟೊಂದು ರುಚಿಯಾಗಿರಬೇಕು, ಆವಾಗ ತುಂಬಾ ಇಷ್ಟವಾಗುವುದು, ಅಲ್ವಾ? ಇದನ್ನು ಹೇಗೆ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಒಂದು ಕಪ್ ರವೆ(ಸೂಜಿ ರವೆ)
ಒಂದು 1/4 ಕಪ್ ತುಪ್ಪ
1/2 ಕಪ್ ಸಕ್ಕರೆ
1/4 ಕಪ್ ತುಪ್ಪ
ಸ್ವಲ್ಪ ಫುಡ್ ಕಲರ್
1/2 ಚಮಚ ಏಲಕ್ಕಿ ಪುಡಿ
ಗೋಡಂಬಿ
ದ್ರಾಕ್ಷಿ
ಎರಡೂವರೆ ಕಪ್ ನೀರು
ಮಾಡುವ ವಿಧಾನ:
ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಅದರಲ್ಲಿ ರವೆಯನ್ನು ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿಯಿರಿ. ರವೆಯನ್ನು ಕಡಿಮೆ ಉರಿಯಲ್ಲಿ ಹುರಿಯಬೇಕು, ಇಲ್ಲಾದ್ರೆ ರವೆ ಕಪ್ಪಾಗುವುದು. ಕಡಿಮೆ ಉರಿಯಲ್ಲಿ ಒಂದು 5 ನಿಮಿಷ ರೋಸ್ಟ್ ಮಾಡಿದರೆ ಸಾಕು.
ಈಗ ಬಾಣಲೆಗೆ 1/4 ಕಪ್ ತುಪ್ಪ ಹಾಕಿ
ತುಪ್ಪ ಬಿಸಿಯಾದಾಗ ಗೋಡಂಬಿ ದ್ರಾಕ್ಷಿ ಸೇರಿಸಿ ಫ್ರೈ ಮಾಡಿ
ಬಳಿಕ ತಕ್ಷಣ ನೀರು ಸೇರಿಸಿ, ಸಕ್ಕರೆ ಹಾಕಿ
ಸಕ್ಕರೆ ಕರಗಿದ ಮೇಲೆ ಫುಡ್ ಕಲರ್ ಸೇರಿಸಿ.
ನೀರು ಕುದಿ ಬರುವಾಗ ತುಪ್ಪದಲ್ಲಿ ರೋಸ್ಟ್ ಮಾಡಿದ ರವೆ ಸೇರಿಸಿ, ಒಂದು 5 ನಿಮಿಷ
ಬೇಯಸಿದರೆ ಸಾಕು ಶೀರಾ ರೆಡಿ.
ಸಲಹೆ:
ನೀವು ರವೆ ಎಷ್ಟು ತೆಗೆದುಕೊಳ್ಳುತ್ತೀರೋ ಅದರ ಎರಡರಷ್ಟು ನರು
ತೆಗೆದುಕೊಳ್ಳಬೇಕು. ಒಂದು ಲೋಟ ವೆಯಾದರೆ ಎರಡರಿಂದ- ಎಡರಡೂವರೆ ಕಪ್ ನೀರು
ಸೇರಿಸಿ.
ಇನ್ನು ಇದಕ್ಕೆ ಬಳಸುವ ರವೆ ತುಂಬಾ ಮುಖ್ಯ, ರವೆ ಗಾತ್ರ ತುಂಬಾ ಚಿಕ್ಕದಾಗಿರಬೇಕು,
ಅಲ್ಲದೆ ಬೆಂದಾಗ ಮೃದುವಾಗಿರಬೇಕು, ಅಂಥ ರವೆ ಬಳಸಿ.
ತುಪ್ಪ: ನೀವು ತುಪ್ಪವನ್ಉ 1/4 ಕಪ್ಗಿಂತ ಹೆಚ್ಚು ಕೂಡ ಬಳಸಬಹುದು, ಶೀರಾ ರುಚಿ-ರುಚಿಯಾಗಿರಲು ಕಲಬೆರಿಕೆಯ ತುಪ್ಪ ಅಥವಾ ವನಸ್ಪತಿ ಬಳಸಬಾರದು, ಶುದ್ಧ ತುಪ್ಪವನ್ನೇ ಬಳಸಿ.
ನೀರಿಗಿಂತ ಹಾಲು ಬಳಸಿ ಮಾಡಿದರೆ ಇನ್ನೂ ರುಚಿ
ನೀವು ನೀರಿಗಿಂತ ಹಾಲು ಅಥವಾ 1 ಕಪ್ ಹಾಲು, 1 ಕಪ್ ನೀರು ಬಳಸಿ ಕೂಡ
ಮಾಡಬಹುದು.
ಶೀರಾ ಗಟ್ಟಿಯಾದರೆ
ಶೀರಾ ಉಪ್ಪಿಟ್ಟು ರೀತಿ ಇರಲ್ಲ, ಹಾಗಾಗಿ ನೀರಿನಂಶ ಹೆಚ್ಚಾದರೂ ತೊಂದರೆಯಿಲ್ಲ.
ಇನ್ನು ಶೀರಾ ಇನ್ನೂ ಸ್ವಲ್ಪ ಜಾಸ್ತಿ ಇದ್ದರೆ ಒಳ್ಳೆಯದಿತ್ತು ಎಂದನಿಸಿದರೆ
ಸ್ವಲ್ಪ ಹಾಲು ಸೇರಿಸಿ ಮಿಕ್ಸ್ ಮಾಡಿ.
ಬೆಲ್ಲ ಬಳಸಬಹುದೇ
ನೀವು ಸಕ್ಕರೆ ಬದಲಿಗೆ ಬೆಲ್ಲ ಕೂಡ ಬಳಸಬಹುದು.
ಫುಡ್ ಕಲರ್ ಬದಲಿಗೆ ಕೇಸರಿ ಬಳಸಬಹುದು.



Click it and Unblock the Notifications